ಕಾಂಗ್ರೆಸ್ ಕಾರ್ಯಲಯದಲ್ಲಿ ಕ್ರಾಂತಿ ಜ್ಯೋತಿ ಆಚರಣೆ..!
ವಿಜಯಪುರ : ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಕ್ರಾಂತಿ ಜ್ಯೋತಿ ದಿನ (ಕದವಿಟ್ ಇಂಡಿಯಾ ಮೋಮೆಂಟ್) ವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಸ್ವಾತಂತ್ರö್ಯವನ್ನು ಕೇವಲ ಬೇಡಿಕೆಯಾಗಿ ಅಲ್ಲ ಹಕ್ಕಾಗಿ ಬದಲಿಸಿದ ಘೋಷಣೆಯಿದು. ೧೯೪೨ ರ ಇದೇ ದಿನ ಬಾಪೂಜಿ ಅವರು ಅಸಹಕಾರ ಚಳವಳಿಯನ್ನು ಆರಂಭಿಸಿದರು. ಅವರ ಆ ಒಂದು ಕರೆಯು ಸ್ವಾತಂತ್ರö್ಯ ಹೋರಾಟದ ದಿಕ್ಕನ್ನೇ ಬದಲಿಸಿದ್ದು ಇತಿಹಾಸವಾಗಿದೆ.
ಬ್ರಿಟೀಷರ ದಬ್ಬಾಳಿಕೆಯಿಂದ ಭಾರತವನ್ನು ಮುಕ್ತಗೊಳಿಸಲು ಸಲ್ಲಸಿದಿ ಎಲ್ಲ ಮಹನಿಯರನ್ನು ಗೌರವಪೂರ್ವಕವಾಗಿ ನಾವು ನೀವೆಲ್ಲರೂ ಸ್ಮರಿಸೋಣ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷg೨ಡÁದ ವೈಜನಾಥ ಕರ್ಪೂರಮಠ ಎವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಅಬ್ದುಲಹಮೀದ ಮುಶ್ರೀಫರವರು ಮಾತನಾಡಿ ಮಹಾತ್ಮಾಗಾಂಧೀಜಿರವರು ಹಾಗೂ ಅನೇಕ ಹಿರಿಯ ನಾಯಕರು ಮಾಡಿದ ತ್ಯಾಗ, ಬಲಿದಾನ ತುಂಬಾ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶಿಗಳಾದ ಎಂ. ಎಂ. ಮುಲ್ಲಾ (ದ್ಯಾಬೇರಿ), ವಸಂತ ಹೊನಮೋಡೆ, ದೇಸು ಚವ್ಹಾಣ, ಬ್ಲಾಕ್ ಅಧ್ಯಕ್ಷರುಗಳಾದÀ ಜಮೀರ ಬಕ್ಷಿ, ಶಾಹಜಾನ ಮುಲ್ಲಾ, ಸಲೀಮ ಪೀರಜಾದೆ, ಅಂಗ ಘಟಕಗಳ ಅಧ್ಯಕ್ಷರುಗಳಾದ ಆನಂದ ಜಾಧವ, ಸರಫರಾಜ ಮಿರ್ದೆ, ಸಾಜಿದ ರಿಸಾಲದಾರ, ಐಜಾಜ ಮುಕ್ಬಿಲ, ತಾಜುದ್ದೀನ ಖಲೀಫಾ, ಪರಶುರಾಮ ಹೊಸಮನಿ, ಎಚ್. ಎನ್. ಮುಲ್ಲಾ, ಸತೀಷ ಅಡವಿ, ಸುನೀಲ ಹೊಸಳ್ಳಿ, ಅಯಾಜ ರೋಜೆವಾಲೆ, ಅರುಣ ಬಜಂತ್ರಿ, ಕೆ. ಎಸ್. ಕಲಶೆಟ್ಟಿ, ಮಹ್ಮದ ಮುಲ್ಲಾ, ಹರೀಷ ಕೌಲಗಿ, ಕುಲದೀಪಸಿಂಗ ಪೋತಿವಾಲೆ, ಬಿ. ಎಂ. ಮುಕ್ತೆದಾರ ಹಾಗೂ ಇನ್ನಿತರ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.