ರೇವಣಸಿದ್ದೇಶ್ವರ ಸಹಕಾರಿ ಸಂಘದ ೨೫ ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ..
ಇಂಡಿ: ಸದಸ್ಯರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ
ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಂಘದ ವ್ಯವಹಾರ – ಗಳನ್ನು ಗಮನಿಸಬೇಕು.ಆಗ ಮಾತ್ರ ಸಹಕಾರ ಸಂಘಗಳ ಅಭಿವೃದ್ಧಿ ಹೊಂದಲು ಸಾದ್ಯ ಎಂದು ಕಾತ್ರಾಳದ ಪರಮ ಪೂಜ್ಯ ಅಮೃತಾನಂದ ಶ್ರೀಗಳು ಹೇಳಿದರು.
ಭಾನುವಾರ ಪಟ್ಟಣದ ಸರಕಾರಿ ನೌಕರರ ಸಭಾಭವನ – ದಲ್ಲಿ ನಡೆದ ಶ್ರೀ ರೇವಣಸಿದ್ದೇಶ್ವರ ಸಹಕಾರಿ ಸಂಘದ ೨೫ ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಅವರು ಮಾತನಾಡಿದರು. ಜೀವನವೇ ಸಂಪತ್ತು. ಸಂಪತ್ತು ಇದ್ದು ಅನುಭವವಿಲ್ಲದಿದ್ದರೆ ಉಪಯೋಗವಿಲ್ಲ. ನಡೆ- ನುಡಿಯಂತೆ ನಡೆಯಬೇಕು. ಪ್ರಾಮಾಣಿಕತೆಯಿಂದ ಸಂಪತ್ತು ಗಳಿಸಬೇಕು. ಹಣಕ್ಕಾಗಿ, ಅಧಿಕಾರಕ್ಕಾಗಿ ಅನ್ಯ ಮಾರ್ಗ ಹಿಡಿಯಬಾರದು. ಜೀವನ ಶ್ರೀಮಂತ, ಸಮೃದ್ಧ ಗೊಳಿಸಬೇಕು. ನಾವು ಬದುಕುವದ ಕ್ಕಾಗಿ ಬಂದವರು. ಹಣ ಗಳಿಸುವದಕ್ಕಾಗಿ ಅಲ್ಲ ಎಂದರು.
ಸಂಸ್ಥಾಪಕರು ಮತ್ತು ಬ್ಯಾಂಕಿನ ಅಧ್ಯಕ್ಷ ಡಾ. ಅಶೋಕ ಪಾಟೀಲ ಮಾತನಾಡಿ, ಮುಂದಿನ ವರ್ಷ ಸ್ವಂತ ಕಟ್ಟಡ ನಿರ್ಮಿಸುವದಾಗಿ ಭರವಸೆ ನೀಡದ ಅವರು ಈಗಾಗಲೇ ೬೦*೬೦ ಮೀ ಜಾಗ ಖರೀದಿಯಾಗಿದೆ. ಭೂಮಿ ಪೂಜೆ
ಆಗಿದೆ ಎಂದ ಅವರು ಬರುವ ದಿನಗಳಲ್ಲಿ ಡಿಜಿಟಲ್ ಬ್ಯಾಂಕಿಗ್, ಎಟಿಎಂ, ಮೊಬೈಲ ಬ್ಯಾಂಕಿAಗ್ ಸೇರಿದಂತೆ ಇನ್ನಿತರ ಎಲ್ಲ ಸವಲತ್ತು ನೀಡುವದಾಗಿ ತಿಳಿಸಿದರು.
ವ್ಯವಸ್ಥಪಕ ಎಂ.ಎಸ್. ಪಾಸೋಡಿ ಮಾತನಾಡಿ, ೨೦೨೨-೨೩ ಕ್ಕೆ ಬ್ಯಾಂಕಿನ ಸದಸ್ಯರ ಸಂಖ್ಯೆ ೩೧೧೯, ಶೇರು ಬಂಡವಾಳ ೧೮೯ ಕೋಟಿ, ದುಡಿಯುವ ಬಂಡವಾಳ ೪೨೧೬ ಕೋಟಿ, ಠೇವಣಿಗಳು ೩೪೯೧ ಕೋಟಿ, ನಿವಳ ಲಾಭ ೪೨.೫೧ ಕೋಟಿ ರೂ ಇದೆ ಎಂದರು. ಬೀದರದ ಗೋರ ಚಿಂಚೋಳಿಯ ಪೂಜ್ಯ
ಸಿದ್ದರಾಮೇಶ್ವರ ದೇವರು, ನಿರ್ದೇಶಕ ಜಿ.ವಿ. ಬಿರಾದಾರ,
ಸಿದ್ದಲಿಂಗ ಹಂಜಗಿ ಮಾತನಾಡಿದರು.
ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪಿಯುಸಿ
ಶೇ ೯೦ ಕ್ಕೂ ಹೆಚ್ಚು ಅಂಕ ಗಳಿಸಿದ ಭಾಗ್ಯಶ್ರೀ ಪಾಟೀಲ,
ವಾಣಿಶ್ರೀ ಪಾಸೋಡಿ, ಸುಹಾಸಿನಿ ಹತ್ತಳ್ಳಿ, ಚಂದ್ರಶೇಖರ
ಬಸಾನೂರ, ಶೀರಿನ್, ವರ್ಷಾ ಅಳ್ಳಗಿ ಮತ್ತು ಹೆಚ್ಚು ಠೇವಣಿ ನೀಡಿದ ವಿನೋದ ಮಹೀಂದ್ರಕರ, ಸಾವಿತ್ರಿ ಸುಭಾಸ ಶೆಟ್ಟಿ, ಬಸವರಾಜ ವಿಠ್ಠಲಗೌಡ ಪಾಟಿಲ, ಬಸವರಾಜ ವಂದಾಲಿ, ಲಕ್ಷ್ಮೀ ಗುರಪ್ಪ ಬೂದಿಹಾಳ, ಕೇದಾರ ಮಹೇಂದ್ರನಾಥ ಕಾಸಾರ ಉತ್ತಮ ಗ್ರಾಹಕರಾದ ಶ್ರೀಮತಿ ಜಯಮ್ಮ ಶಾಂತಿನಾಥ ಕಿರಣಗಿ, ಮಹಾಂತೇಶ ಚಂದ್ರಶೇಖರ ಹಿರೆಪಟ್ಟ, ಸೋಮಣ್ಣ ಎಸ್. ಸಜ್ಜನವರ, ಏಕನಾಥ ಕಠಾರೆ, ಶಾಂತೇಶ ಧನಾಶ್ರೀ, ತಾಂಬಾ ಶಾಖೆಯ ಇಮಾಮ ಬೇಪಾರಿ, ಶಿವಾನಂದ ಮಲಕಗೊಂಡ, ಈರಫಾನ ಬಗಲಿ ಇವರನ್ನು ಸನ್ಮಾನಿಸಲಾಯಿತು.
ಬ್ಯಾಂಕಿನ ನಿರ್ದೇಶಕರಾದ ಜಕ್ಕಪ್ಪ ಹತ್ತಳ್ಳಿ, ಟಿ.ಎಚ್.
ಬಿರಾದಾರ, ಜಿ.ವಿ. ಬಿರಾದಾರ, ರಾಜಶೇಖರ ಲೋಣಿ, ಬಿ.ಬಿ. ಪಾಟೀಲ(ತಾಂಬಾ), ಅನೀಲಕುಮಾರ ಬಿರಾದಾರ, ಶ್ರೀಮತಿ ಸರುಬಾಯಿ ಮೇತ್ರಿ, ಶೃತಿ ಪಾಟೀಲ, ರಮೇಶ ಮೇತ್ರಿ, ಎ.ಎಸ್. ಚಂದಾವಾಲೆ ವೇದಿಕೆಯ ಮೇಲಿದ್ದರು.
ಸಮಾರಂಭದಲ್ಲಿ ಸಿಬ್ಬಂದಿ ಬಸವರಾಜ ತೇಲಿ, ಭೀಮನಗೌಡ ಪಾಟೀಲ, ತೀರ್ಥರಾಜ ಅಗರಖೇಡ, ಸಂತೋಷ ಜೋರಾಪುರ, ಅಣ್ಣು ಲೋಣಿ, ಮಲ್ಲಿಕಾರ್ಜುನ ಗಿಡಗಂಟಿ, ಸುನೀಲ ಉಟಗಿ, ಪ್ರಜ್ವಲ ಹಂಜಗಿ, ಕಲ್ಲಪ್ಪ ಬಾರಾಣೆ, ಮುಕ್ತುಮಲಿಶಾ ಮಕಾನದಾರ, ಈರಬಸು ಬೂದಿಹಾಳ ಮತ್ತಿತರಿದ್ದರು.