ಮೀಸಲಾತಿಗಾಗಿ ಸರಕಾರದ ವಿರುದ್ಧ ಬಸವಜಯ ಮೃತಂಜಯ ಸ್ವಾಮಿಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡುಗು..!
ಇಂಡಿ : ಮೀಸಲಾತಿ ವಿಷಯದಲ್ಲಿ ಸಮುದಾಯ ನಿರಾಸೆಗೊಂಡಿದೆ. ಅದಲ್ಲದೇ ಸರಕಾರ ಜನರ ತಾಳ್ಮೆ ಪರೀಕ್ಷಿಸುವುದು ಒಳ್ಳೆಯದು ಅಲ್ಲಾ..! ಒಂದು ವೇಳೆ ಸುಖಾ ಸುಮ್ನೆ ಭರವಸೆ ಮಾತು ಹೇಳುತ್ತಾ ಹೊರಟರೆ, ನಮ್ಮ ಸಮುದಾಯದ ಜನರು ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ. ಅದಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆ ಒಳಗಾಗಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸಿ ಆದೇಶ ಹೊರಡಿಸಬೇಕು. ಇಲ್ಲವಾದರೆ ಸಮಾಜದ ಕೆಂಗಣ್ಣಿಗೆ ಗುರಿಯಾಗ – ಬೇಕಾಗುತ್ತದೆ. ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರದ ವಿರುದ್ಧ ಗುಡುಗಿದರು.
ತಾಲೂಕಿನ ಝಳಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಇಷ್ಟಲಿಂಗ ಪೂಜೆ ಮುಖಾಂತರ ಸಾಮೂಹಿಕ ಲಿಂಗಪೂಜೆ ನೆರವೇರಿಸಿ ಅವರು ಮಾತನಾಡಿದರು, ಬಿಜೆಪಿ ಸರ್ಕಾರ 2ಡಿ ಮೀಸಲಾತಿ ಘೋಷಿಸಿದ್ದು, ಈಗಿನ ಸರ್ಕಾರ ಅದನ್ನೇ ಅನುಷ್ಠಾನಗೊಳಿಸಲಿ ಅಥವಾ ಪ್ರವರ್ಗ 2ಎ ರಲ್ಲಿ ಪಂಚಮಸಾಲಿ ಜನಾಂಗವನ್ನು ಸೇರಿಸಿ ಆದೇಶ ಹೊರಡಿಸಲಿ, ಸಮಾಜಕ್ಕೆ ಹೆಚ್ಚಿನ ಮೀಸಲಾತಿ ಅತ್ಯವಶ್ಯಕತೆ ಇದ್ದು, ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2ಎ ಮೀಸಲಾತಿ ಒದಗಿಸಿ ಸಮಾಜದ ಋಣ ತೀರಿಸಬೇಕು ಎಂದರು.
ಸಮಾಜದ ಮುಖಂಡ ರುದ್ರಗೌಡ ಪಾಟೀಲ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಶ್ರೀಗಳು ಹೋರಾಟ ನಡೆಸುತ್ತಿದ್ದಾರೆ. ಹಿಂದಿನ ಹೋರಾಟಗಳಲ್ಲಿ ಪಾಲ್ಗೊಂಡ ಶಾಸಕ ವಿಜಯಾನಂದ ಕಾಶಪ್ಪನವರ, ಸಚಿವೆ, ಲಕ್ಷ್ಮೀ ಹೆಬ್ಬಾಳಕರ ಈಗೇಕೆ ಸುಮ್ಮನಿದ್ದಾರೆ ? ಅಧಿಕಾರ ಸಿಕ್ಕ ನಂತರ ಸಮಾಜದ ಕೈ ಬಿಡುವುದು ಸರಿಯಲ್ಲ. ಈ ಕೂಡಲೇ ಸಮಾಜದ ಪರವಾಗಿ ಧ್ವನಿ ಎತ್ತಬೇಕು ಎಂದರು.
ನಾಗಠಾಣ ಶಾಸಕ ವಿಠಲ ಕಟಕಧೋಂಡ ಮಾತನಾಡಿ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೋರಾಟ’ ನ್ಯಾಯಯುತವಾಗಿದ್ದು, ಸದನದಲ್ಲಿ ಈ ಕುರಿತು ಧ್ವನಿ ಎತ್ತುವ ಎಂದರು. ಡಾ. ಬಸನಗೌಡ ಪಾಟೀಲ
ಝಳಕಿ ಬಳಿ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ..
ಇಂಡಿ ತಾಲೂಕಿನ ಝಳಕಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಚಮಸಾಲಿ 2ಎ ಮೀಸಲಾತಿಗಾಗಿ ಜಗದ್ಗುರು ಬಸವಜಯ ಮೃತ್ಯಂಜಯ ಶ್ರೀ ನೇತೃತ್ವದಲ್ಲಿ ಸಾಮೂಹಿಕ ಲಿಂಗಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು,
(ನಾಗರಾಳಹುಲಿ), ಬಿ.ಎಂ. ಪಾಟೀಲ, ಶ್ರೀಶೈಲಗೌಡ ಬಿರಾದಾರ, ವಿದ್ಯಾರಾಣಿ ತುಂಗಳ, ವಿ.ಎಚ್ ಬಿರಾದಾರ, ವಿಠಲ ವಡಗಾಂವ, ಸೋಮಶೇಖರ ದೇವರ, ಎಂ.ಆರ್. ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಶ್ರೀಮಂತ ಇಂಡಿ ನಾಗನಾಥ ಬಿರಾದಾರ, ಸಾಹೇಬಗೌಡ ಬಿರಾದಾರ, ರಾಜು ಮಳಗಿ, ಶ್ರೀಶೈಲ ಮುಳಜಿ, ಬಾಳು ಮುಳಜಿ, ಮಹೇಶ ಬುಕ್ಕಿ ಅನೀಲ ಏಳು, ಅನೀಲ ತನ್ನಳ್ಳಿ ಸೇರಿ ಸಾವಿರಾರು ಜನ ಪಾಲ್ಗೊಂಡಿದ್ದರು. ರಸ್ತೆತಡೆ ವೇಳೆ ನಾಲ್ಕಾರು ಕಿ.ಮೀ. ಎಂದು . ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ತುರ್ತು ಸೇವೆಗಳಿಗೆ ಪೊಲೀಸರು ಅನುವು ಮಾಡಿಕೊಟ್ಟರು.