ಸಾಮಾಜಿಕ ಜಾಲತಾಣಗಳಲ್ಲಿ ಕೂಡಲ ಸಂಗಮ ಸ್ವಾಮೀಜಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ
ಇಂಡಿ: ಸಾಮಾಜಿಕ ಜಾಲತಾಣಗಳಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶ್ರೀಗಳ ಭಕ್ತರು ಇಂಡಿ ಗ್ರಾಮಾಂತರ ಪಿಎಸ್ಐ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾಳು ಮುಳಜಿ, ಕೂಡಲಸಂಗಮ ಶ್ರೀಗಳ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳನ್ನು ಕೂಡಲೇ ಬಂದಿಸಬೇಕು. ವ್ಯಾಟ್ಸಪ್, ಫೇಸ್ಬುಕ್, ಎಕ್ಸ ಖಾತೆ, ಯುಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿದ್ದು ಕುಮಾರ್ ರೇವಣ್ಣ, ರಮೇಶ್ ಮಲಾಲಿ, ಕೆಎಸ್ಆರ್‌ಟಿ ಶೇಕರ, ಪಂಚಮಸಾಲಿ ಆಲ್ ಕರ್ನಾಟಕ ಗ್ರೂಪ್ ವಿಜಯಪುರ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ವಿಜಯಪುರ, ಈ ಎಲ್ಲ ಖಾತೆಗಳಿಂದ ಶ್ರೀಗಳಿಗೆ ಅವಹೇಳನ ಮಾಡುತ್ತಿದ್ದು ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ರಮೇಶ ಕಲ್ಯಾಣಿ, ಮಹೇಶ ಹೂಗಾರ, ವಿಜಯಕುಮಾರ ರಾಠೋಡ್, ಅರವಿಂದ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು.


















