ನಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ
ಇಂಡಿ : ಭವ್ಯ ಭಾರತ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ವಿಶೇಷವಾಗಿ ಮಕ್ಕಳಿಗೆ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರ ಬೆಳಸುವಲ್ಲಿ ನಮ್ಮ ಹಿರಿಯ ಪ್ರಾಥಮಿಕ ಶಾಲೆ ಗುರುವೃಂದ ಮಹತ್ವದ ಪಾತ್ರವಹಿಸಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ತಮ್ಮಣ್ಣ ಪೂಜಾರಿ ಹೇಳಿದರು.
ತಾಲೂಕಿನ ತಡವಲಗಾ ಗ್ರಾಮದ ಪ್ರತಿಷ್ಠಿತ ನಮ್ಮ (OUR School) ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತಾನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅರ್ಜುನ್ ತಳವಾರ್, ಶರಣು ಕುಂಬಾರ , ಗಿರಿಮಲ್ ಗೋಡೆಕಾರ್, ಚಂದ್ರಮಾ ಜಾಡರ್ ಶಿವು ಕಟಾಯಿ ರಾಮಣ್ಣ ಕುಂಬಾರ್ ಸಂಗನಗೌಡ ಬಿರಾದಾರ್ ಸರ್ವಶಿಕ್ಷಕರು ಹಾಗೂ ಪಾಲಕ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮುಖ್ಯ ಗುರು ಎನ್ ಎ.ತಳವಾರ ಸ್ವಾಗತಿಸಿದರೆ, ಕುಮಾರಿ ವಿದ್ಯಾರಾಣಿ ಮಿರ್ಜಿ ನಿರೂಪಿಸಿದರೆ, ಶ್ರೀಮತಿ ಸೌಮ್ಯಾ ಪೂದ್ದಾರ್ ವಂದಿಸಿದರು.