548 B, ರಾಷ್ಟ್ರೀಯ ಹೆದ್ದಾರಿ ದುರಸ್ತಿಗೊಳಿಸಲು ಆಗ್ರಹ..! : ಅಯೂಬ್ ನಾಟೀಕಾರ
ಇಂಡಿಯ ಜನರ ಶಾಂತಿ ಸಹನೆ ತಾಳ್ಮೆ ಪರೀಕ್ಷಿಸಬೇಡಿ : ಅಯೂಬ್ ನಾಟೀಕಾರ
ಇಂಡಿ : ಇಂಡಿಯ ರಾಷ್ಟ್ರೀಯ ಹೆದ್ದಾರಿ, ತೆಗ್ಗು ಗುಂಡಿಗಳಿಂದ ಪ್ರಾಣ ಹಾನಿ ಮಾಡುವ ಹೆದ್ದಾರಿಯಾಗಿದೆ. ಅದನ್ನು ಕೂಡಲೇ ಪಕ್ಕಾ ಹೆದ್ದಾರಿ ಅಥವಾ ದುರಸ್ತಿ ಕಾರ್ಯಮಾಡಿ ಪ್ರಯಾಣಿಕರ ಸೂಕ್ತ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಜೆಡಿಎಸ್ ಸಂಘಟನಾ ಕಾರ್ಯದರ್ಶಿ, ಶಾಂತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಯೂಬ್ ನಾಟೀಕಾರ ಆಗ್ರಹಿಸಿದ್ದಾರೆ.
ಬುಧವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಇಂಡಿ – ವಿಜಯಪುರಕ್ಕೆ ತೆರಳುವ ರಾಜ್ಯ ಹೆದ್ದಾರಿ ಇತ್ತೀಚೆಗೆ 548 ಬಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿದೆ. ಅದಕ್ಕೆ ಕಾರಣಕರ್ತರಾದ ಸಂಸದರಿಗೆ ಅಭಿನಂದನೆ ತಿಳಿಸುತ್ತೆನೆ. ಆದರೆ ಇಲ್ಲಿಯವರೆಗೆ ಆ ಹೆದ್ದಾರಿ ಪ್ರಾರಂಭದ ಯಾವುದೇ ಕಾಮಗಾರಿ ನಡೆಯದೆ ವಿಳಂಬವಾಗುತ್ತಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಭೂಮಿ ಪೂಜಾ ಮಾಡುವ ಬಗ್ಗೆ ಸಂಸದ ಭರವಸೆ ನೀಡಿದರು. ಈ ಸದ್ಯ ಹೆದ್ದಾರಿ ನಿರ್ಮಾಣಕ್ಕೆ ಯಾವುದೇ ಕಾಮಗಾರಿ ಜರುಗದೆಯಿರುವುದು ಜನರಿಗೆ ನಿರಾಸೆ ಹಾಗೂ ಅಕ್ರೋಶ ಕಾರಣವಾಗಿದೆ. ಇಂಡಿ – ವಿಜಯಪುರ ಮಾರ್ಗದಲ್ಲಿ ಕನಿಷ್ಠ 10 ಕಿ.ಮೀ ವರಗೆ ರಸ್ತೆ ಸಂಪೂರ್ಣ ಹದಗೆಟ್ಟು ಪ್ರಾಣ ಹಾನಿ ಮಾಡುತ್ತಿದೆ. ಇಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಸರ್ಕಸ್ ಮಾಡಬೇಕಾಗಿದೆ. ಕೆಲವೊಮ್ಮೆ ಅಕ್ಕ- ಪಕ್ಕ, ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆದು ಹಲವಾರು ಅಪಘಾತಗಳು ಸಂಭವಿಸುತ್ತೀವೆ. ಇದರಿಂದ ಅನೇಕ ವಾಹನ ಸವಾರರಿಗೆ ಸಾವು-ನೋವು ಸಂಭವಿಸಿದ್ದು, ಈ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ತಿ ಪಡಿಸುವಂತೆ ಮಾತನಾಡಿದರು. ಇಲ್ಲಿರುವ ಜನರ ತಾಳ್ಮೆ ಸಹನೆ ಪರೀಕ್ಷಸಬೇಡಿ. ಈ ಕೂಡಲೇ ಇಂಡಿ – ರೂಗಿ ಮಾರ್ಗ ಸುಮಾರು 10 ಕಿಮೀ ರಸ್ತೆ ಸಂಪೂರ್ಣ ದುರಸ್ತಿ ಮಾಡಬೇಕು. ಇಲ್ಲವಾದರೆ ಈ ಭಾಗದ ಜನರು ನೀವು ನೀರಿಕ್ಷಿಸುವ ಉತ್ತರಕ್ಕೆ ಬೇರೊಂದು ರೀತಿಯ ಉತ್ತರ ಕೊಡುತ್ತಾರೆ. ನಾವು ನಮ್ಮ ಜನರೊಂದಿಗೆ ಪ್ರತಿಭಟನೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.