ರೇಣುಕಾಚಾರ್ಯರರ ಸಂದೇಶಗಳು ಸರ್ವಕಾಲ
ಅರ್ಥಪೂರ್ಣ
ಇಂಡಿ : ವಿಶ್ವ ಬಂಧುತ್ವವನ್ನು ಸಾರಿದ ಶ್ರೀ ರೇಣುಕಾಚಾರ್ಯರರು ಭೋದಿಸಿದ ಮಾನವೀಯತೆಯ ಧರ್ಮದ ಸೂತ್ರಗಳು ಸರ್ವಕಾಲಕ್ಕೂ ಸರ್ವರಿಗೂ ಅರ್ಥಪೂರ್ಣವಾಗಿ ಬದುಕುವ ದಾರಿ ತೋರಿಸಿವೆ ಎಂದು ಶಿರಸ್ತೆದಾರ ಎಸ್.ಆರ್.ಮುಜಗೊಂಡ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಜಗದ್ಗುರು
ರೇಣುಕಾಚಾರ್ಯರರ ಜಯಂತಿ ಕಾರ್ಯಕ್ರಮದಲ್ಲಿ
ಮಾತನಾಡಿದರು. ಜಗದ್ಗುರು ರೇಣುಕಾಚಾರ್ಯರರು ವೀರಶೈವ ಧರ್ಮವನ್ನು ಸಂಸ್ಥಾಪಿಸಿದರು. ಅವರು ಸಮಾಜದ ಬದಲಾವಣೆಗೆ ಸಂದೇಶಗಳನ್ನು ನೀಡಿದ್ದಾರೆ. ಅವರ ಸಂದೇಶ ಪಾಲಿಸುತ್ತ ಸಮಾಜದಲ್ಲಿ ಮೇಲು ಕೀಳು
ಎನ್ನದೆ ಸಮಾನತೆಯಿಂದ ಬದುಕಬೇಕು ಎಂದರು.
ಎಚ್.ಎಚ್.ಗುನ್ನಾಪುರ, ರೇಷ್ಮೆ ಇಲಾಖೆಯ ಅಶೋಕ
ತೇಲಿ, ಎಂ.ಪಿ.ಕೊಡತೆ, ಇಂಡಿ ಗ್ರಾಮಲೆಕ್ಕಾಧಿಕಾರಿ
ಪಿ.ಎಸ್.ಚವಡಿಹಾಳ, ಸಂಕೇತ ಪಾಟೀಲ, ಶೈಲಜಾ
ಒಡೆಯರ, ಉಮಾ ಕಟ್ಟಿಮನಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ
ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ
ಮುಜಗೊಂಡ ಮಾತನಾಡಿದರು.