ಮುದ್ದೇಬಿಹಾಳ ;ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಮುದ್ದೇಬಿಹಾಳ ಪಟ್ಟಣದ ಶ್ರೀ ಗ್ರಾಮದೇವತೆ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಪೋಸ್ಟರ್ ಹಾಗೂ ಸಿಕ್ಟರ್ ಗಳ ಬಿಡುಗಡೆಗೊಳಿಸಿದರು.
ಪಟ್ಟಣದ ಬಜಾರ್ ಹನುಮಾನ್ ಮಂದಿರದಲ್ಲಿ ಗ್ರಾಮದೇವತೆ ಜಾತ್ರಾಮಹೋತ್ಸವ ಕಮಿಟಿ ಸದಸ್ಯರು ಮಾಡಿದರು.
ಈ ವೇಳೆ ಮಾತನಾಡಿ ಜಾತ್ರೆಯ ಕುರಿತು ಮಾಹಿತಿಯನ್ನು ನೀಡಿದ ಎಂ.ಬಿ ನಾವದಗಿ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ,ನ್ಯಾಯವಾದಿ ಬಸನಗೌಡ ಪಾಟೀಲ್ ಸರೂರ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ ಜಾತ್ರಾಮಹೋತ್ಸವ ಈ ಬಾರಿಯೂ ಸಹ ವೈಭವದಿಂದ ಮಾಡಲಾಗುತ್ತದೆ ಈಗಾಗಲೇ ಜಾತ್ರೆಯ ಸಕಲ ತಯಾರಿಗಳನ್ನು ಜಾತ್ರೆಯ ವಿವಿಧ ಸಮಿತಿಗಳನ್ನು ರಚನೆ ಮಾಡಿಕೊಂಡು ಸಮಿತಿಗಳ ಸದಸ್ಯರು ಮಾಡುತ್ತಿದ್ದಾರೆ ಜಾತ್ರೆಯ ವಿಶೇಷವಾಗಿ ಪಟ್ಟಣಕ್ಕೆ ವಿದ್ಯುತ್ ದೀಪಗಳ ಅಲಂಕಾರ ನಡೆದಿದೆ ಮತ್ತು ಜಾತ್ರೆಯ ದೇಣಿಗೆ ಸಂಗ್ರಹ ಕಾರ್ಯವು ಸಾಗಿದೆ 500 ವರ್ಷಗಳಕ್ಕಿಂತ ಹೆಚ್ಚಿನ ಇತಿಹಾಸ ಹಿನ್ನೆಲೆಯ ಜಾತ್ರೆ ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಕೂಡಿದೆ ಆ ಸೌಹಾರ್ದ ಸಹೋದರತೆಯಿಂದಲೇ ಜಾತ್ರಾ ಮಹೋತ್ಸವ ಮಾಡೋಣ ಬನ್ನಿ ಎಂದು ಕರೆ ನೀಡಿದರು
ಮೇ 30 ರದ ಜೂನ್ 3 ವರಗೆ ಐದು ದಿನಗಳು ಜಾತ್ರೆ ನಡೆಯಲಿದೆ ಪ್ರಥಮ ದಿನದ ದೇವಿಯರ ಭವ್ಯ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ ಕಿಲ್ಲಾಗಲ್ಲಿಯಿಂದ ಆರಂಭವಾಗುವ ಮೆರವಣಿಗೆ ಗ್ರಾಮದೇವತೆ ಕಟ್ಟೆ ಮಾರ್ಗವಾಗಿ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತ ಅಲ್ಲಿಂದ ರಾಯರ ಮಠ, ಶಾರದಾ ದೇವಿ ಮಂದಿರ ಲಕ್ಷ್ಮೀ ವೆಂಕಟೇಶ್ವರ ಮಂದಿರ ಮಾರ್ಗವಾಗಿ ಗ್ರಾಮದೇವತೆ ಕಟ್ಟೆಯವರಗೆ ಮಾಡಲಾಗುತ್ತದೆ ಜಾತ್ರೆಯ ಅಂಗವಾಗಿ ಐದು ದಿನ ಹಳೆಯ ಪೂಲೀಸ್ ಕ್ವಾಟರ್ಸ್ ನಲ್ಲಿ ಪ್ರಸಾದದ ವ್ಯವಸ್ಥೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ವರಗೆ ಇರುತ್ತದೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ತಂಗಡಗಿ ರಸ್ತೆಯ ಬಿಡಿಒ ಕ್ವಾಟರ್ಸ್ ಹಾಗೂ ಹುಡ್ಕೂ ಗವಿ ಸಿದ್ದೇಶ್ವರ ಗಾರ್ಡನ್ ಆವರಣದಲ್ಲಿ ಜರುಗಲಿವೆ ಮತ್ತು ಬಾರ ಎತ್ತುವ ಸ್ಪರ್ಧೆ ಕುಸ್ತಿ ಪಂದ್ಯಾವಳಿಗಳು ಟಗರಿನ ಕಾಳಗ ಪುಟ್ಟಿಗಾಡಿ ರೇಸ್ ,ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ
ಮುಖಂಡರಾದ ಬಸವರಾಜ ಮೋಟಗಿ, ಬಸನಗೌಡ ಪಾಟೀಲ್, ಅಬ್ದುಲ್ ಗಫೂರ್ ಮಕಾನದಾರ, ಬಾಬು ಬಿರಾದಾರ, ಮುದ್ದೇಬಿಹಾಳ ರಾಯಗಗೌಡರ ಮನೆತನದ ಪುಟ್ಟುಗೌಡ ಪಾಟೀಲ್, ಸಂತೋಷ ಪಾಟೀಲ್, ದಾನಪ್ಪ ನಾಗಠಾಣ ಚನ್ನಪ್ಪ ಕಂಠಿ,ಮುರಿಗೆಪ್ಪ ಮೋಟಗಿ,ಅಶೋಕ ನಾಡಗೌಡರ, ರಾಜು ಕಲಬುರಗಿ, ಸುನಿಲ್ ಇಲ್ಲೂರ, ಶರಣು ಸಜ್ಜನ ರಾಜೇಂದ್ರಗೌಡ ರಾಯಗೂಂಡ, ಸದು ಮಠ, ನಿಂಗಣ್ಣ ಚಟ್ಟೇರ ಅಶೋಕ ಚಟ್ಟೇರ ಸಂಗಣ್ಣ ಮೇಲಿನಮನಿ, ಟಿ ವಿಜಯಭಾಸ್ಕರ್,ಹಣಮಂತ ಭೋವಿ, ಗೋಪಿ ಮಡಿವಾಳ,ಸುರೇಶ್ ಕಲಾಲ್, ನಾಯ್ಕೋಡಿ, ಸೇರಿದಂತೆ ಪುರಸಭೆ ಸದಸ್ಯರು ನಾಮನಿರ್ದೇಶಿತ ಸದಸ್ಯರುಗಳು ಹಾಗೂ ಪಟ್ಟಣದ ಗಣ್ಯಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.