ಮೈಸೂರು ದಸರಾದಲ್ಲಿ ಪುಟ್ಟನ ದಸರಾ ಕೃತಿ ಬಿಡುಗಡೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ ಮೈದಾನದಲ್ಲಿ ನಡೆದ ಪುಸ್ತಕ ಮೇಳ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ಗ್ರಾಮದ ಶಿಕ್ಷಕಿ ಶ್ರೀಮತಿ ಸುಮಲತಾ ಗಡಿಯಪ್ಪನವರ ಅವರು ಬರೆದ ಪುಟ್ಟನ ದಸರಾ ಕೃತಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ
ಡಾ ಮಾನಸ,ಸಾಹಿತಿಗಳಾದ ಕೃಷ್ಣಮೂರ್ತಿ ಹನೂರು, ಪುರುಷೋತ್ತಮ ಬಿಳಿಮನೆ, ಸಾಹಿತಿಗಳು ಸೇರಿದಂತೆ ಉಪಸ್ಥಿತರಿದ್ದರು.