ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ
ವಿಜಯಪುರ : ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಎಲ್ಲ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಲಾಯಿತು.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್. ಲೋಣಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷ ಎಲ್ಲ ವರ್ಗಕ್ಕಾಗಿ ಅನೇಕ ಗ್ಯಾರಂಟಿ ಯೋಜನೆಗಳನ್ನು ಹಾಕಿ ಪೂರೈಸುತ್ತಾ ಇದೆ. ಇಂದು ಬಿಜೆಪಿ ಯವರು ಸರಕಾರ ದಿವಾಳಿ ಅಗುತ್ತದೆ ಎಂದು ದೂಷಿಸುತ್ತಾ ಇತ್ತು. ಆದರೆ ನಮ್ಮ ಸರಕಾರ ಈ ಗ್ಯಾರಂಟಿಗಳಿಗೆ ಬೇಕಾಗುವ ಹಣ ನೀಡಿ ಅಭಿವೃದ್ಧಿ ಪತದಲ್ಲಿ ನಡಿತಾ ಇದೆ. ಬಿಜೆಪಿಯವರು ಕೆಲಸ ಕಡಿಮೆ ಸುಳ್ಳು ಪ್ರಚಾರ ಹೆಚ್ಚು ಮಾಡುತ್ತಾ ಜನರಿಗೆ ತಪ್ಪು ದಾರಿಗೆ ತರುತ್ತಾ ಇದೆ ಎಂದು ಹೇಳಿದರು.
ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ವಿನಯಕುಮಾರ ಸೊರಕೆ ರವರು ಮಾತನಾಡುತ್ತಾ ಇಂದು ಸಾರ್ವಜನಿಕರು ಕೇವಲ ಚುನಾವಣೆ ಬಂದಾಗ ಮಾತ್ರ ಪ್ರಚಾರ ಸಮಿತಿಯವರು ಬರುತ್ತಾರೆ ಎಂದು ಹೇಳುತ್ತಿರುವುದು ತಪ್ಪು. ಮುಂಚಿತವಾಗಿ ಪ್ರಚಾರ ಸಮಿತಿಯ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನು ಮಾಡಿ ಕಾಂಗ್ರೆಸ್ ಸರಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಹೊಸದಾಗಿ ಪ್ರಚಾರ ಸಮಿತಿಯನ್ನು ರಚನೆ ಮಾಡಿ ಇದನ್ನು ಬೂತ್ ಮಟ್ಟಕ್ಕೆ ಸಮಿತಿಯನ್ನು ರಚನೆ ಮಾಡಬೇಕು ಹಾಗೂ ಎಲ್ಲ ಹಳ್ಳಿಗಳಲ್ಲಿ ಸರಕಾರದ ಯೋಜನೆಗಳ ಕುರಿತು ಪ್ರಚಾರ ಮಾಡಲು ಸೂಚಿಸಿದರು.
ಇಂದು ಕೇಂದ್ರ ಸರಕಾರ ಮತಗಳ್ಳತನ ಮಾಡಿ ಸರಕಾರ ರಚಿಸಿದ್ದನ್ನು ಬೂತ್ ಮಟ್ಟದಲ್ಲಿ ತಿಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ರಾಜ್ಯ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಮುನೀರ ಅಹ್ಮದ, ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಮುಖ್ಯ ಸಂಘಟಕರಾದ ಶರಣಪ್ಪ ಕೊಟಗಿ, ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿಗಳಾದ ಎಸ್. ಜಿ. ಮಹಾಬಳೆಶ್ವರ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಸರಫರಾಜ ಮಿರ್ದೆ ರವರು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಮೊಹ್ಮದರಫೀಕ ಟಪಾಲ, ಪಿ.ಕೆ. ನೀರಲಕಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶಿಗಳಾದ ಎಂ. ಎಂ. ಮುಲ್ಲಾ (ದ್ಯಾಬೇರಿ), ವಸಂತ ಹೊನಮೋಡೆ, ಜಾಕೀರಹುಸೇನ ಮುಲ್ಲಾ, ದೇಸು ಚವ್ಹಾಣ, ಸುಭಾಸ ಕಾಲೇಬಾಗ, ಶಬ್ಬೀರ ಜಾಗಿರದಾರ, ಬ್ಲಾಕ್ ಅಧ್ಯಕ್ಷರುಗಳಾದÀ ರಾಮಚಂದ್ರ ಹಕ್ಕೆ, ಸಿದ್ದಣ್ಣ ಗೌಡಣ್ಣವರ, ಆರತಿ ಶಾಹಪೂರ, ಶಕೀಲ ಬಾಗಮಾರೆ, ಮಹಿಬೂಬ ಕಲಾದಗಿ, ದಸ್ತಗೀರ ಸಾಲೋಟಗಿ, ಸಂತೋಷ ಬಾಲಗಾವಿ, ಅಶ್ಪಾಕ ಮನಗೂಳಿ, ಕೃಷ್ಣ ಕಾಮಟೆ,ಸಲೀಮ ಪಠಾಣ, ಸಾಜಿದ ರಿಸಾಲದಾರ, ಐಜಾಜ ಮುಕ್ಬಿಲ, ಪರಶುರಾಮ ಹೊಸಮನಿ, ಮಲ್ಲಿಕಾರ್ಜುನ ಪರಸಣ್ಣವರ, ರಾಜೆಶ್ವರಿ ಚೋಳಕೆ, ಭಾರತಿ ನಾವಿ, ಮಂಜುಳಾ ಗಾಯಕವಾಡ, ಶಬೀನಾ ಮಂಟೂರ, ರೇಣುಕಾ ವಾಲಿಕಾರ, ಜಗದೀಶ ಡೇರೇದ, ಅಬ್ದುಲರಜಾಕ ಕಪಾಳಿ, ಪೀರಾ ಜಮಖಂಡಿ, ಬಿ.ಎಂ.ಮಕ್ತೆದಾರ, ಮಹಾದೇವ ರಾಠೋಡ, ಕಾಶಿಬಾಯಿ ಹಡಪದ, ಹರೀಷ ಕೌಲಗಿ, ನೀತಾ ಕಾಳೆ, ಶಿಲ್ಪಾ ಮೇತ್ರಿ, ರೂಪಾ ಬಿರಾದಾರ, ಅಯಾಜ ರೋಜೆವಾಲೆ, ಡಿ.ಕೆ.ಹೊಸಮನಿ, ಸುನಿಲ ಹೊಸಳ್ಳಿ, ಕಲ್ಲಪ್ಪ ಪರಶೆಟ್ಟಿ, ಅನೀತಾ ಜಾವಡೆಕರ, ಸುಭಾಸ ಕಾಂಬಳೆ, ಮಲಿಯಪ್ಪ ಹಲಗಲಿ, ಅಬುಬಕರ ಕಂಬಾಗಿ, ರಜಾಕ ಕಾಖಂಡಕಿ, ರಮಜಾನ ನದಾಫ, ಕೃಷ್ಣಾ ಲಮಾಣಿ, ವೀರೇಶ ಕಲಾಲ, ಡಾ. ಶರಣಬಸಪ್ಪ ಚೌರ, ದಿಲೀಪ ಪ್ರಭಾಕರ, ಸಂಜೀವ ರಾಠೋಡ, ಅಶೋಕ ಬಜಂತ್ರಿ, ವಿಜಯಪುರ ಜಿಲ್ಲಾ ಪ್ರಚಾರ ಸಮಿತಿಯ ಜಿಲ್ಲಾ ಪದಾಧಿಕಾರಿಗಳು, ಎಲ್ಲ ಬ್ಲಾಕ್ ಅಧ್ಯಕ್ಷರು ಹಾಗೂ ಇನ್ನಿತರ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಕೊನೆಯಲ್ಲಿ ನಿರೂಪಣೆ ಶಬ್ಬೀರ ಜಾಗಿರದಾರ ಹಾಗೂ ದಸ್ತಗೀರ ಸಾಲೋಟಗಿ ಮಾಡಿದರು.
ಎಂ. ಎಂ. ಮುಲ್ಲಾ
ಪ್ರಧಾನ ಕಾರ್ಯದರ್ಶಿ
ಜಿಲ್ಲಾ ಕಾಂಗ್ರೆಸ್ ಸಮಿತಿ, ವಿಜಯಪುರ