ವಿಜಯಪುರ: ವಿಜಯಪುರದಲ್ಲಿ ಭೂಮಿ ಮತ್ತೆ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 2.8ರಷ್ಟು ದಾಖಲಾಗಿದೆ. ಭೂಮಿಯ 10 ಕಿಲೋ ಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ. ಭೂಕಂಪ ಸಂಭವಿಸಿರುವುದನ್ನು ವಿಕೋಪ ನಿರ್ವಹಣಾ ಸಂಸ್ಥೆ ದೃಢಪಡಿಸಿದೆ. ಕಳೆದ ಹಲವು ತಿಂಗಳನಿಂದ ವಿಜಯಪುರದಲ್ಲಿ ಭೂಮಿ ನಿರಂತರವಾಗಿ ಕಂಪಿಸುತ್ತಿದೆ ಬಸವೇಶ್ವರ ನಗರ ಮತ್ತು ಉಕ್ಕಲಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.