ಅ-23ರಂದು ಸರಳವಾಗಿ, ಅರ್ಥಪೂರ್ಣವಾಗಿ ರಾಣಿ ಚನ್ನಮ್ಮ ಜಯಂತಿ ಆಚರಣೆ..
ಇಂಡಿ: ಪಟ್ಟಣದ ಮಿನಿವಿಧಾನಸೌಧದ ಸಭಾಭವನದಲ್ಲಿ
ಅಕ್ಟೋಬರ್ 23 ರಂದು ಕಿತ್ತೂರು ರಾಣಿ ಚನ್ನಮ್ಮನವರ ಜಯಂತಿ ಅಂಗವಾಗಿ ಬುಧವಾರ ತಹಸೀಲ್ದಾರ ಬಿ.ಎಸ್.ಕಡಕಭಾವಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಹೆಚ್.
ಬಿರಾದಾರ ಮಾತನಾಡಿ, ಪ್ರಸಕ್ತ ವರ್ಷ ಬರಗಾಲ
ಇರುವುದರಿಂದ ಚನ್ನಮ್ಮನವರ ಜಯಂತಿಯನ್ನು
ಅದ್ದೂರಿಯಾಗಿ ಆಚರಣೆ ಮಾಡುವುದು ಬೇಡ.
ಸರಕಾರದ ಸೂಚನೆಯಂತೆ ಜಯಂತಿಯನ್ನು
ಚನ್ನಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ
ಸಂಕ್ಷಿಪ್ತವಾಗಿ ಆಚರಿಸೋಣ ಎಂದರು.
ತಹಸೀಲ್ದಾರ ಬಿ.ಎಸ್. ಕಡಕಭಾವಿ ಮಾತನಾಡಿ ಅಂದು ಎಲ್ಲ ಇಲಾಖೆಗಳಲ್ಲಿ ಕಡ್ಡಾಯವಾಗಿ ರಾಣಿ ಚನ್ನಮ್ಮನವರ
ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಗ್ರಾಮ ಪಂಚಾಯತ್
ಕಚೇರಿ, ಶಾಲಾ ಕಾಲೇಜುಗಳಲ್ಲಿಯೂ ಪೂಜೆ ಕಡ್ಡಾಯವಾಗಿ ಸಲ್ಲಿಸಬೇಕು. ಬರಗಾಲ ಇರುವ ಕಾರಣ
ಸಂಕ್ಷಿಪ್ತ ಜಯಂತಿ ಆಚರಣೆ ಮಾಡುವ ಅಭಿಪ್ರಾಯ
ಹೊಂದಿದ ಸಮಾಜದ ಮುಖಂಡರ ನಡೆಯನ್ನು
ತಹಸೀಲ್ದಾರ ಅವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಚಾಳೀಕಾರ, ಸುಧಾಕರಗೌಡ ಬಿರಾದಾರ, ಉಮೇಶ ಬಳಬಟ್ಟಿ, ಬಾಳು ಮುಳಜಿ, ನಾಗು ಕಂದಗಲ್, ಬಸವರಾಜ ರಾವೂರ, ಬಿ.ಜೆ. ಇಂಡಿ, ಚಂದ್ರಶೇಖರ ಹೊಸಮನಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.