- ಸಣ್ಣ ರಾಜಕಾರಣ ಮಾಡಿಲ್ಲ, ಸಹಕಾರ ನೀಡಿದವರನ್ನ ಸ್ಮರಿಸಿಕೊಳ್ಳುವ ಕೆಲಸ ಮಾಡಿದ್ದೆನೆ..!
- ರಾಣಿ ಚೆನ್ನಮ್ಮ ಒಂದು ವರ್ಗಕ್ಕೆ ಸಂಬಂಧಿಪಟ್ಟವರಲ್ಲ, ಈ ರಾಷ್ಟ್ರದ ಆಸ್ತಿ..!
- ಇತಿಹಾಸ ಗೊತ್ತಿರಬೇಕು1968 ರಲ್ಲಿ ವೀರೇಂದ್ರ ಪಾಟೀಲರ ಪರಿಕಲ್ಪನೆ ಇಂದು ಲೋಕಾರ್ಪಣೆಗೆ ತಯಾರಿ..
ಇಂಡಿ : ರಾಣಿ ಚೆನ್ನಮ್ಮ ಒಂದು ವರ್ಗಕ್ಕೆ ಮೀಸಲು ಅಲ್ಲಾ..! ಈ ರಾಷ್ಟ್ರದ ಆಸ್ತಿ ಸ್ವಾಭಿಮಾನದ ಸಂಕೇತ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಇಡೀ ಪ್ರಪಂಚಕ್ಕೆ ವಿಶ್ವ ವಿಖ್ಯಾತಗೊಂಡಿರುವ ಸ್ವಾಮಿ ವಿವೇಕಾನಂದರ ವೃತ್, ಸಂಗೊಳ್ಳಿ ರಾಯಣ ವೃತ್, ಟಿಪ್ಪು ಸುಲ್ತಾನ್ ವೃತ್, ಮಹಾವೀರ ವೃತ್, ಮಡಿವಾಳ ಮಾಚಿ ದೇವರ ವೃತ್, ದಾದಾಗೌಡರ ವೃತ್ ಹೀಗೆ ಹಲವಾರು ವೃತ್ ಗಳಿಗೆ ಅಭಿವೃದ್ದಿಯ ಹೊಸ ಸ್ಪರ್ಶ ಕೊಡುವ ಮೂಲಕ ವೀರರು, ಶೂರರು ನಾಡಿಗೆ ಅನನ್ಯ ಕೊಡುಗೆ ಕೊಟ್ಟಿದ್ದನ್ನ ಸ್ಮರಸಿಕೊಳ್ಳುವಂತಹದ್ದು ಜಿಲ್ಲೆಯಲ್ಲಿಯೇ ಮಾದರಿ ಕೆಲಸ ಮಾಡಿದ್ದೆವೆ ಎಂದು ಹೇಳಿದರು.
ಇಂಡಿ ಪಟ್ಟಣದ ಪುರಸಭೆ ಎದುರು ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಪುರಸಭೆ ಸಂಯುಕ್ತ ಆಶ್ರಯದಲ್ಲಿ 24/7 ಕುಡಿಯುವ ನೀರು, ಮೆಗಾ ಮಾರ್ಕೆಟ್ ಮೊದಲ ಹಂತದ ಕಟ್ಟಡ, ಮೆಗಾ ಮಾರ್ಕೆಟ್ ಎರಡನೇ ಹಂತದ ಕಾಮಗಾರಿ ಶಂಕು ಸ್ಥಾಪನೆ, ಮುಖ್ಯ ಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಕಾಮಾಗಾರಿಗಳಿಗೆ ಭೂಮಿ ಪೂಜೆ ಮತ್ತು ವಾರ್ಡ್ ನಂ.20, 22, 23 ರಲ್ಲಿ ಬರುವ ತಾಂಡಾಗಳಿಗೆ ಅಮೃತ 2.0 ಯೋಜನೆ ಅಡಿಯಲ್ಲಿ ನೀರು ಸರಬರಾಜು ವಿತರಣಾ ಜಾಲ ವ್ಯವಸ್ಥೆ ಕಲ್ಪಿಸುವ ಕಾಮಗಾರಿ, ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ನೂತನ ಮೂರ್ತಿ ಪ್ರತಿಷ್ಠಾಪನೆ ಅಡಿಗಲ್ಲು ಹಾಗೂ ವಿಕಲ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಸಮಾರಂಭದ ವೇದಿಕೆಯಲ್ಲಿ ಮಾತಾನಾಡಿದರು.
ಸಣ್ಣ ರಾಜಕಾರಣ ಗೊತ್ತಿಲ್ಲ. ಸಹಕಾರ ಮಾಡಿದ ವ್ಯಕ್ತಿಗಳನ್ನ ಸ್ಮರಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆನೆ. ಇತಿಹಾಸ ಗೊತ್ತಿರಬೇಕು. 1968 ರಲ್ಲಿ ಆಗೀನ ಮುಖ್ಯ ಮಂತ್ರಿ ವಿರೇಂದ್ರ ಪಾಟೀಲರ ರೋಡಗಿ ಮತ್ತು ಉಡಚಾಣ ಬ್ರಿಡ್ಜ್ ನ ಪರಿಕಲ್ಪನೆ ಕಂಡಿದ್ರು, ಅದು ಹಾಗೆ ಉಳಿದಿತ್ತು. ಇಂದು 72 ಕೋಟಿ ರೂಪಾಯಿ ವೆಚ್ಚದಲ್ಲಿ ಇಡೀ ವಿಜಯಪುರ & ಕಲ್ಬುರ್ಗಿ ಸಂಪರ್ಕ ರಸ್ತೆಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇನ್ನೂ ಆ ಪರಿಕಲ್ಪನೆ ಬರುವ ದಿನಗಳಲ್ಲಿ ಲೋಕಾರ್ಪಣೆ ಮಾಡುತ್ತೆವೆ ಎಂದು ಹೇಳಿದರು.
ಹಲವಾರು ದಶಕಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಕೆಲಸ ಕಾರ್ಯಗಳಿಗೆ, ಜನರಿಗೆ ಅತೀ ಅವಶ್ಯಕವಾಗಿರುವ ಮೂಲಭೂತ ಯೋಜನೆಗಳಿಗೆ ಹಾಗೂ ಈ ಪ್ರದೇಶ ಸಮಗ್ರ ಅಭಿವೃದ್ದಿಗೆ ಈ ತಾಲ್ಲೂಕಿನಲ್ಲಿ ಇತಿಹಾಸದಲ್ಲಿ ಕಂಡ ಅರಿಯದಂತೆ ಪ್ರಮಾಣಿಕ ಕೆಲಸ ಎಲ್ಲಾ ಅಧಿಕಾರಿವರ್ಗದ ಸಹಕಾರದಿಂದ ಮಾಡಿದ್ದೆವೆ.
ಈ ನಗರಕ್ಕೆ ಶೈಕ್ಷಣಿಕ ಬೆಳವಣಿಗೆ ಅತೀ ಹೆಚ್ಚು ಮಹತ್ವ ನೀಡಿ ಎಲ್ಲಾ ಬಗೆಯ ಸರಕಾರಿ ಶಾಲಾ ಕಾಲೇಜು, ವಸತಿಯ ನಿಲಯಗಳನ್ನು ಮಾಡುವ ಪ್ರಯತ್ನ ಮಾಡಿದ್ದೆವೆ. ಸಕ್ಕರೆ ಕಾರ್ಖಾನೆ, ಮಿನಿ ವಿಧಾನಸೌಧ, ಬಸ್ ಡಿಪೋ, ನಗರದಲ್ಲಿ ರಸ್ತೆ ಅಗಲಿಕರಣ, ನಿಂಬೆ ಅಭಿವೃದ್ಧಿ ಮಂಡಳಿ, 24*7 ಕುಡಿಯುವ ನೀರು, ಮೆಗಾ ಮಾರ್ಕೆಟ್, ಕೃಷಿ ವಿಜ್ಞಾನ ಕೇಂದ್ರ, ಹೆಸ್ಕಾಂ ಕಛೇರಿ ಹೀಗೆ ಹಲವಾರು ಕಾರ್ಯಗಳು ನೀವು ಕೊಟ್ಟ ಅವಕಾಶದಿಂದ ಯಶಸ್ವಿಯಾಗಿ ಮಾಡಿದ್ದೆವೆ ಎಂದರು.
ಇನ್ನೂ ಹೊರ್ತಿ ರೇವಣ್ಣಸಿದ್ದೇಶ್ವರ ನೀರಾವರಿ ಕಾಲುವೆ ಯೋಜನೆ, ೧೮ ಕೆರೆ ತುಂಬುವ ಯೋಜನೆ, ಭವಿಷ್ಯದಲ್ಲಿ ಈ ನಗರ ಮಾಸ್ಟರ್ ಪ್ಲ್ಯಾನ್ ಸಿಟಿಯಾಗಬೇಕು. ನಿಂಬೆ ಹಣ್ಣಿಗೆ ಜಿಐ ಟ್ಯಾಗ ಕೊಡಿಸುವುದರ ಜೊತೆಗೆ ಈ ತಾಲ್ಲೂಕು ಎಲ್ಲಾ ವಿಧದಲ್ಲಿ ಬೆಳವಣಿಗೆ ಕಂಡು ಜಿಲ್ಲೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಇನ್ನೂ ಸಂದರ್ಭದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ತಹಶಿಲ್ದಾರ ನಾಗಯ್ಯ ಹಿರೇಮಠ, ಸೂಪರಿಂಟೆಂಡೆಂಟ್ ಅಭಿಯಂತರ ಲೋಕೋಪಯೋಗಿ ಇಲಾಖೆ ಮನೋಜ ಗಡಬಳ್ಳಿ ಮಾತಾನಾಡಿದರು.
ವೇದಿಕೆ ಮೇಲೆ ಬಿ.ಎಂ ಕೋರೆ, ವಿಶ್ವನಾಥ ಬಿರಾದರ, ಜಟ್ಟಪ್ಪ ರವಳಿ, ಸುನೀಲ ಕುಲಕರ್ಣಿ, ರಶೀದ ಅರಬ, ಜಾವಿದ ಮೋಮಿನ,ಕಲ್ಲನಗೌಡ ಪಾಟೀಲ, ಅಣ್ಣಪ್ಪ ಬಿದರಕೋಟಿ,ಜಗದೀಶ ಕ್ಷತ್ರಿ, ಧರ್ಮರಾಜ ವಾಲಿಕಾರ, ಯಮುನಾಜಿ ಸಾಳಂಕೆ,ಶ್ರೀಕಾಂತ್ ಕುಡಿಗನೂರ, ಇಲಿಯಾಸ ಬೊರಾಮಾಣಿ ಹಾಗೂ ಪುರಸಭೆ ಸದಸ್ಯರು ಇನ್ನೂ ಮುಖಂಡರು ಉಪಸ್ಥಿತರಿದ್ದರು.