ಇಂಡಿ : ಈ ಬಾರಿ ಮುಂಗಾರು ಮಳೆ ಅನ್ನದಾತನ ಮೇಲೆ ಕೃಪೆ ತೋರಲಿಲ್ಲ. ಹೀಗಾಗಿ ಅನ್ನದಾತ ಸಂಕಷ್ಟದಲ್ಲಿದ್ದು ಕೋಡಲೆ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯಾಗಿ ಗೋಷಣೆ ಮಾಡಿ ಮೋಡ ಬಿತ್ತನೆ ಕಾರ್ಯ ಸೇರಿದಂತೆ ಬರ ಪರಿಹಾರ ಕಾಮಗಾರಿ ಕೈಗೊಳ್ಳುಬೇಕು ಎಂದು ಇಂಡಿಯ ಭಾಜಪ ಯುವ ಮುಖಂಡ ರಾಮಸಿಂಗ ಕನ್ನೊಳ್ಳಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಬೆಳೆ ಸಂಪೂರ್ಣವಾಗಿ ವಿಫಲವಾಗಿದೆ. ಮುಂಗಾರು ಬೆಳೆ ಆಧಾರಿತ ಕೃಷಿ ಅವಲಂಬಿತ ರೈತರು ಸಂಕಷ್ಟ ಎದುರಿಸಬೇಕಾಗಿದೆ. ಹೀಗಾಗಿ ಸಾಲ ಪಡಿದು ಬಿತ್ತನೆ ಮಾಡಿರುವ ರೈತ ಈಗ ತೊಂದರೆಗೆ ಸಿಲುಕಿದ್ದಾನೆ. ಅನ್ನದಾತರ ರಕ್ಷಣೆ ಸರ್ಕಾರದ ಪ್ರಥಮ ಆದ್ಯತೆಯಾಗಬೇಕು ಎಂದು ಹೇಳಿದ್ದಾರೆ. ಕೂಡಲೆ ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.