ಇಂಡಿ : ರಾಜ್ಯ ಸರಕಾರಿ ನೌಕರರ ಸಂಘ ತನ್ನ 2012 ರ ಉಪವಿದಿ ತಿದ್ದುಪಡಿ ಮಾಡಲು ಉದ್ದೇಶಿಸಿದ್ದು, ಸಂಘದ ಸದಸ್ಯರು ಮತ್ತು ತಾಲ್ಲೂಕಿನ ಎಲ್ಲಾ ಇಲಾಖೆಯ ನೌಕರರು ಈ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡವಂತೆ ತಾಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷ ಎಸ್ ಆರ್ ಪಾಟೀಲ್ ಹಾಗೂ ಪ್ರಧಾನ ಕಾಯ೯ದಶಿ೯ ಆರ್.ಎಮ್ ಮೇತ್ರಿ ತಿಳಿಸಿದರು.
ಇಂಡಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು, ಬೆಂಗಳೂರಿನ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ನೀಡಿರುವ ಸೂಚನೆಯಂತೆ ಸಂಘದ ಸರ್ವ ಸದಸ್ಯರು ವಾಸ್ತವ / ವರ್ಚುವಲ್ ವಿಧಾನದ ಮೂಲಕ ವಿಶೇಷ ಮಹಾ ಸಭೆಯನ್ನು ಫೆ 20 ರ ಬೆಳಿಗ್ಗೆ 11 ಘಂಟೆಗೆ ಶಿವಮೊಗ್ಗ ನಗರದ ಸಾಗರ ರಸ್ತೆ ಅಟೋ ಕಾಂಪ್ಲೆಕ್ಸ್ ನಲ್ಲಿರುವ ದ್ವಾರಕ ಕನ್ವನ್ ಷನ್ ಹಾಲಿನಲ್ಲಿ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಧ್ಯಕ್ಷತೆಯಲ್ಲಿ ಆಯೋಜಿಸಲಿಗಾದೆ ಎಂದು ಹೇಳಿದರು. ಉದ್ದೇಶಿತ ತಿದ್ದುಪಡಿ ಉಪವಿಧಿಗಳ ಸಂಪೂರ್ಣ ವಿವರಗಳನ್ನು ನೋಟಿಸ್ ನೊಂದಿಗೆ ಸದಸ್ಯರ ಮುಬೈಲ್ ಸಂಖ್ಯೆಗೆ ಪಿಡಿಎಫ್ ಸ್ವಾಪ್ಟ್ ಕಾಫಿ ಯನ್ನು ಸಮೂಹ ವ್ಯಾಟ್ಸಪ್ ಸಂಖ್ಯೆಗಳ ಮೂಲಕ ಈಗಾಗಲೇ ಕಳುಹಿಸಲಾಗಿದೆ. ಹೆಚ್ಚುವರಿಯಾಗಿ ಕೇಂದ್ರ ಸಂಘದ, ಜಾಲತಾಣ ಸಂಘದ ಕೇಂದ್ರ ಕಛೇರಿ ಕಾರ್ಯಾಲಯ ಎಲ್ಲಾ ಹಾಗೂ ತಾಲೂಕು ಸಂಘಗಳ ಕಛೇರಿಗಳಲ್ಲಿ ಲಭ್ಯವಿದ್ದು ಸದಸ್ಯರು ಮುಕ್ತವಾಗಿ ಪಡೆದುಕೊಳ್ಳಬೇಕಾಗಿದೆ. ವರ್ಚುವಲ್ ವೇದಿಕೆಯ ಮೂಲಕ ಸದಸ್ಯರಿಗೆ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು,http://usO2web.zoom.us/j/8105162152 ಲಿಂಕನ್ನು ಬಳಸಿ ಸಭೆಯಲ್ಲಿ ಭಾಗವಹಿಸಬಹುದಾಗಿದೆ. ಈ ವಿಶೇಷ ಮಹಾಸಭೆಯನ್ನು ಫೆಸ್ ಬುಕ್ ಲಿಂಕ್, http:/www.Facebook.com/ksgeaofficial ಮತ್ತು http:/www.Facebook.com/ksgeabng/ ನಲ್ಲಿಯೂ ಸಹ ವಿಕ್ಷೀಸಬಹುದಾಗಿದೆ ಎಂದು ಹೇಳಿದರು.