ಪಟ್ಟಣ್ಣದ ರಾಯರ ಮಠದಲ್ಲಿ ಪ್ರಥಮಾ ಆರಾಧನೆಯಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು.
ಇಂಡಿಯಲ್ಲಿ ರಾಯರ ಪ್ರಥಮಾರಾಧನೆ
ಇಂಡಿ: ಕಲಿಯುಗದ ಕಾಮಧೇನು ಕಲ್ಪವೃಕ್ಷರಾದ ಶ್ರೀ ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವದ ಪ್ರಥಮಾರಾಧನೆ ಇಂದು ಪಟ್ಟಣದ ರಾಯರ ಮಠದಲ್ಲಿ ಬೆಳ್ಳಿಗೆ ಸುಪ್ರಭಾತ, ಅಷ್ಟೋತ್ತರ, ರಥೋತ್ಸವ, ಪಲ್ಲಕ್ಕಿ ಉತ್ಸವ, ಭಜನೆ, ತೀರ್ಥ-ಪ್ರಸಾದ ಭಕ್ತಿಭಾವದೊಂದಿಗೆ ಜರುಗಿತ್ತು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಆರ್.ವ್ಹಿ. ದೇಶಪಾಂಡೆ, ಉಪಾಧ್ಯಕ್ಷ ಆನಂದ ಕುಲಕರ್ಣಿ,ಖಜಾಂಚಿ ಡಿ.ಎಸ್.ಜೋಶಿ, ಪ್ರಸನ್ನ ದೇಶಪಾಂಡೆ, ವೇಂಕಟೇಶ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ,ಜೆ.ವ್ಹಿ.ಪಾಟೀಲ, ಎನ್.ಕೆ. ನಾಡಪುರೋಹಿತ, ದತ್ತಾ ಕುಲಕರ್ಣಿ, ಮಹೇಶ ಜೋಶಿ, ರವಿ ನಾಯಿಕ,ಕೃಷ್ಣ ಚಟ್ಟರಕಿ, ಸಂಜೀವ ಚಟ್ಟರಕಿ, ಜಿ.ಎಸ್.ಜೋಶಿ,ರಾಜು ಕುಲಕರ್ಣಿ, ಅರ್ಚಕ ಜಗನಾಥ ಜಾಗೀರದಾರ ಸೇರಿದಂತೆ ನೂರಾರು ಜನ ಭಾಗವಹಿಸಿದರು.