ಮಳೆನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಳಕೆಯಲ್ಲಿ ಹೆಚ್ಚು ಜಾಗೃತರಾಗಬೇಕು
ಸ್ವಚ್ಛ ನಿರ್ಮಲ ಗ್ರಾಮ ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು
ನವೀಕರಿಸಬಹುದಾದ ಇಂಧನ ಕುರಿತು ಕಾರ್ಯಾಗಾರ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಸ್ವಚ್ಛ ನಿರ್ಮಲ ಗ್ರಾಮ ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಮಳೆನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಳಕೆಯಲ್ಲಿ ಹೆಚ್ಚು ಜಾಗೃತರಾಗಬೇಕು ಎಂದು ಶ್ರೀ ನಂದಿ ಗ್ರಾಮೀಣ ಮತ್ತು ನಗರ ಅಭಿವೃದ್ದಿ ವಿವಿದ್ಧೋಶಗಳ ಸೇವಾ ಸಂಸ್ಥೆ ಅಧ್ಯಕ್ಷ ವೀರಣ್ಣ ಕರಿಗೊಳ ತಿಳಿಸಿದರು.
ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯತ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಶ್ರೀ ನಂದಿ ಗ್ರಾಮೀಣ ಮತ್ತು ನಗರ ಅಭಿವೃದ್ದಿ ವಿವಿದ್ಧೋಶಗಳ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆದ ಪ್ರತಿನಿಧಿಗಳು ಹಾಗೂ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ನವೀಕರಿಸಬಹುದಾದ ಇಂಧನ, ಮಳೆ ನೀರು ಕೊಯ್ಲು ಹಾಗೂ ಘನ ತ್ಯಾಜ್ಯ ನಿರ್ವಹಣೆ ಕುರಿತು ಒಂದು ದಿನದ ಮುಖಾಮಖಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದ,ಇಂದಿನ ದಿನಗಳಲ್ಲಿ ಕಸ ವಿಂಗಡಣೆ ಮಾಡುವುದೆ ಒಂದು ಪರಿಣಾಮಕಾರಿಯಾಗಿದೆ. ಘನ ತ್ಯಾಜ್ಯ ನಿರ್ವಹಣೆ ಮಾಡುವಲ್ಲಿ ಕ್ರಮಬದ್ಧ ಅನುಸರಿಸಿದರೆ ಗ್ರಾಮಗಳು ಸ್ವಚ್ಛವಾಗಲಿವೆ. ಆದ್ದರಿಂದ ಪ್ರತಿ ಮಹಿಳೆಯರಿಗೂ ತರಬೇತಿ ಅಗತ್ಯವಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇಂಧನ ನಿಯಮಿತ ಬಳಕೆ, ಉಳಿಕೆ ಹಾಗೂ ಮಳೆ ನೀರು ಕೊಯ್ಲಿನ ಮಹತ್ವ ಮತ್ತು ಘನ ತ್ಯಾಜ್ಯ ನಿರ್ವಹಣೆ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಬಸವನಗೌಡ ಬೇವೂರ, ಚಂದ್ರಶೇಖರ ಕಲಾಲ ತರಬೇತಿ ನೀಡಿದರು.
ಕವಡಿಮಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಕುಂತಲಾ ಹಂಡ್ರಗಲ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಮಲ್ಲಿಕಾರ್ಜುನ ಹಿರೇಮಠ, ಸಿದ್ದಮ್ಮ ಭೀ. ಬಳಬಟ್ಟಿ, ತಾಲೂಕು ಐಇಸಿ ಸಂಯೋಜಕ ಪರಮೇಶ ಹೊಸಮನಿ, ಕಾರ್ಯದರ್ಶಿ ಅಶೋಕ ಕೊರವರ,ಶಿವಲೀಲಾ ಕವಡಿಮಟ್ಟಿ, ಸೇರಿದಂತೆ ಉಪಸ್ಥಿತರಿದ್ದರು.