ಬೆಂಗಳೂರು, ಫೆಬ್ರವರಿ 24 : ಪ್ರತಿ ಭಾರತೀಯರಿಗೆ ಶುದ್ಧ ಕುಡಿಯುವ ನೀರಿನ ಲಭ್ಯತೆ ಒದಗಿಸುವ ಪರಿಹಾರ ಸೂಚಿಸಲು ಉದ್ಯಮಿಗಳಿಗೆ ಆಹ್ವಾನ ನೀಡಿದ, ದಿ/ನಡ್ಜ್ ಫೌಂಡೇಶನ್, ಮತ್ತು ಆಶೀರ್ವಾದ್ ಪೈಪ್ಸ್, ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಸಹಭಾಗಿತ್ವದಲ್ಲಿ. ಭಾರತದ, ಸೌಲಭ್ಯರಹಿತ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ನವಉದ್ದಿಮೆ ಮತ್ತು ವ್ಯಕ್ತಿಗಳಿಗೆ ಸ್ಪರ್ಧೆ ಘೋಷಿಸಿದೆ.
ಈ ಉಪಕ್ರಮವು ನೀರಿನ ಸವಾಲುಗಳಿಗೆ ಪರಿಹಾರಗಳನ್ನು ಬೆಂಬಲಿಸುವ ಗುರಿ ಹೊಂದಿದೆ. ಇದು 2.5 ಕೋಟಿರೂ.ಗಳ ಒಟ್ಟು ಬಹುಮಾನದ ಮೊತ್ತ (ಅತ್ಯುತ್ತಮ ಪರಿಹಾರಕ್ಕೆ ಮತ್ತು ರನ್ನರ್ ಅಪ್‌ಗೆ 1.75 ಕೋಟಿ ರೂ. ಬಹುಮಾನ ಮತ್ತು ಫೈನಲಿಸ್ಟ್‌ಗಳಿಗೆ ದೊಡ್ಡ ಮೊತ್ತದ ಅನುದಾನ) ವನ್ನು ಒಳಗೊಂಡಿದೆ. ಈ ಯೋಜನೆ 18 ತಿಂಗಳವರೆಗೆ ನಡೆಯುತ್ತದೆ ಮತ್ತು ಪರಿಹಾರಗಳನ್ನು ಅಭಿವೃದ್ಧಿಪಡಿಸಲು, ಪರೀಕ್ಷಿಸಲು ಹೂಡಿಕೆದಾರರು, ಮಾರ್ಗದರ್ಶಕರು, ತಂತ್ರಜ್ಞಾನ ಮತ್ತು ಜ್ಞಾನ ಪಾಲುದಾರರು ಮತ್ತು ನೀತಿವಲಯದ ಸಲಹೆಗಾರರ ನೆಟ್‌ವರ್ಕ್ ಒದಗಿಸುವ ಮೂಲಕ ಉದ್ಯಮಿಗಳಿಗೆ ಬೆಂಬಲ ನೀಡುತ್ತದೆ.
2024 ರ ವೇಳೆಗೆ ಭಾರತದ ಎಲ್ಲಾ ಮನೆಗಳಿಗೆ ವೈಯಕ್ತಿಕ ನಲ್ಲಿ ಸಂಪರ್ಕಗಳ ಮೂಲಕ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸಲು ಉದ್ದೇಶಿಸಿರುವ ಸರ್ಕಾರದ ಜಲ ಜೀವನ್ ಮಿಷನ್‌ಗೆ ಈ ಉಪಕ್ರಮ ನೆರವಾಗಲಿದೆ.
ಮೂಲ ನೀರಿನ ಶುದ್ಧೀಕರಣ, ಸ್ಮಾರ್ಟ್ ವಿತರಣೆ ಮತ್ತು ನಿರಂತರ ಶುದ್ಧ ಕುಡಿಯುವ ನೀರಿನ ಲಭ್ಯತೆ ಮತ್ತು ಪ್ರವೇಶವನ್ನು ಖಾತ್ರಿಪಡಿಸುವ ಶೇಖರಣಾ ನಿಬಂಧನೆಗಳಿಗೆ ಸಂಬಂಧಿಸಿದ ಪರಿಹಾರಗಳು, ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಲಭ್ಯತೆಯನ್ನು ಹೆಚ್ಚಿಸಲು ನೀರಿನ ಮೂಲ ಮರುಪೂರಣ, ತ್ಯಾಜ್ಯನೀರಿನ ಸಂಸ್ಕರಣೆಯಂತಹ ಮರುಬಳಕೆಯ ಉತ್ತಮ ಪರಿಹಾರಗಳನ್ನು ನೀಡುವವರಿಗೆ ಈ ಬಹುಮಾನ ನೀಡಲಾಗುತ್ತದೆ.
ಬಹುಮಾನದಲ್ಲಿ ಭಾಗವಹಿಸುವವರಿಗೆ ವೇದಿಕಾ ಭಂಡಾರ್ಕರ್ (ಸಿಓಓ, ವಾಟರ್.ಆರ್ಗ್), ವಿ.ಕೆ. ಮಾಧವನ್ (ಸಿಇಓ, ವಾಟರ್ ಏಡ್ ಇಂಡಿಯಾ) ಮತ್ತು ಯುಗಲ್ ಕಿಶೋರ್ ಜೋಶಿ (ನಿರ್ದೇಶಕರು, ಜಲ ಜೀವನ್ ಮಿಷನ್) ಹೂಡಿಕೆದಾರ ಪಾಲುದಾರರಂತಹ ತಜ್ಞರು, ಸಲಹೆಗಾರರು, ಪಾಲುದಾರರು ಬೆಂಬಲ ನೀಡುತ್ತಾರೆ. ಇದು ಹೂಡಿಕೆಯ ಪಾಲುದಾರರಲ್ಲಿ, ಸಾಮಾಜಿಕ ಪ್ರಭಾವದ ಸಾಹಸೋದ್ಯಮ ಕ್ಷೇತ್ರದ ಸೋಶಿಯಲ್ ಆಲ್ಫಾ, ಭಾರತ್ ಇನ್ನೋವೇಶನ್ ಫಂಡ್, ಆವಿಷ್ಕಾರ್ ಮತ್ತು ಕ್ಯಾಸ್ಪಿಯನ್. ಜ್ಞಾನ ಮತ್ತು ಸಂಶೋಧನಾ ಪಾಲುದಾರರಲ್ಲಿ ಐಎಚ್‌ಇ ಡೆಲ್ಫ್ಟ್, ಇಂಡಸ್ ವಾಟರ್ ಇನ್‌ಸ್ಟಿಟ್ಯೂಟ್, ವಾಟರ್. ಆರ್ಗ್, ಇಂಡಿಯಾ ವಾಟರ್ ಪೋರ್ಟಲ್ ಮತ್ತು ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋ-ಆಪರೇಷನ್ ಮತ್ತು ಡೆವಲಪ್‌ಮೆಂಟ್ ಸೇರಿವೆ. ಇನ್‌ಕ್ಯುಬೇಶನ್ ಪಾಲುದಾರರಲ್ಲಿ ಇಮ್ಯಾಜಿನ್ ಎಚ್2ಓ ಏಷ್ಯಾ, ಇಂಡಸ್ ವಾಟರ್ ಇನ್‌ಸ್ಟಿಟ್ಯೂಟ್, ಬಿಐಟಿಎಸ್ ಪಿಲಾನಿಯಂಡ್ ಸ್ಟಾರ್ಟ್ಅಪ್ ಇನ್‌ಕ್ಯುಬೇಶನ್ ಮತ್ತು ಇನ್ನೋವೇಶನ್ ಸೆಂಟರ್, ಐಐಟಿ ಕಾನ್ಪುರ್ ಇವೆ.
ಪ್ರಶಸ್ತಿಯಲ್ಲಿ ಸಹ-ಪಾಲುದಾರರಾಗಿರುವ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ ಕೆ ವಿಜಯ್ ರಾಘವನ್, “ರಾಷ್ಟ್ರೀಯ ಆದ್ಯತೆಗಳ ಸಮಸ್ಯೆಗಳನ್ನು ಪರಿಹರಿಸಲು ಪರಿಣಾಮಕಾರಿ ಬದಲಾವಣೆಗಳನ್ನು ತರುವಲ್ಲಿ ಬಹು- ಪಾಲುದಾರಿಕೆಗಳು ಪ್ರಮುಖವಾಗಿವೆ ಎಂದು ಭಾರತ ಸರ್ಕಾರ ನಂಬುತ್ತದೆ. ದಿ/ನಡ್ಜ್ – ಆಶೀರ್ವಾದ್ ವಾಟರ್ ಚಾಲೆಂಜ್ ಬಹುಮಾನದ ಮೂಲಕ ನಿರಂತರ ಕುಡಿಯುವ ನೀರಿನ ಲಭ್ಯತೆಯನ್ನು ಖಾತ್ರಿಪಡಿಸುವುದು, ಸಾಮಾಜಿಕ ಮತ್ತು ಭೌಗೋಳಿಕ ಅಡೆತಡೆಗಳನ್ನು ಕಡಿಮೆ ಮಾಡುವುದು ಮತ್ತು ಮರುಬಳಕೆಯನ್ನು ಖಾತ್ರಿ ಪಡಿಸಿಕೊಳ್ಳಬಹುದು ಎಂಬುದು ನಮ್ಮ ಉದ್ದೇಶ.ಈ ನಿಟ್ಟಿನಲ್ಲಿ ಸರ್ಕಾರ, ಶೈಕ್ಷಣಿಕ, ಉದ್ಯಮ ಮತ್ತು ನವೋದ್ಯಮಗಳು ಅತ್ಯುತ್ತಮ ಪಾತ್ರ ವಹಿಸುತ್ತಿವೆ” ಎಂದಿದ್ದಾರೆ.
ಆಶೀರ್ವಾದ್ ಪೈಪ್ಸ್‌ನ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಮೆಹ್ರೋತ್ರಾ ಮಾತನಾಡಿ, “ಶುದ್ಧ ಕುಡಿಯುವ ನೀರಿನ ಲಭ್ಯತೆ ಮೂಲಭೂತ ಹಕ್ಕು ಎಂದು ಪರಿಗಣಿಸಬೇಕು. ಶುದ್ಧ ಕುಡಿಯುವ ನೀರಿನ ಲಭ್ಯತೆ ಜೀವನದ ಗುಣಮಟ್ಟ ಸುಧಾರಿಸುವುದರ ಜೊತೆಗೆ, ಆರೋಗ್ಯ ಅಪಾಯಗಳನ್ನು ಕಡಿಮೆಗೊಳಿಸುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದು, ಭಾರತದಂತಹ ದೊಡ್ಡ ಮತ್ತು ಸಂಕೀರ್ಣ ದೇಶದಲ್ಲಿ ಇಂತಹ ಕಾರ್ಯಗಳಿಗೆ ಇತರ ಸಂಘ ಸಂಸ್ಥೆಗಳು ಒಟ್ಟುಗೂಡುವ ಅಗತ್ಯವಿದೆ. ನೀರಿನ ನಿರ್ವಹಣೆಯು ಆಶೀರ್ವಾದ್ ನ ಮೂಲ ಉದ್ದೇಶಗಳಲ್ಲಿ ಒಂದು. ಈ ಉಪಕ್ರಮದಲ್ಲಿ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ” ಎಂದರು.
ಜಲ್ ಜೀವನ್ ಮಿಷನ್ ಜೊತೆಗೆ, ಈ ಸ್ಪರ್ಧೆ ಭಾರತದಲ್ಲಿ 19 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಲಭ್ಯತೆ ಒದಗಿಸುವ ಅವಕಾಶವನ್ನು ಕಲ್ಪಿಸಲಿದೆ.
ಈ ಕುರಿತು ಪ್ರತಿಕ್ರಿಯಿಸಿದ ದಿ/ನಡ್ಜ್ ಸೆಂಟರ್ ಫಾರ್ ಸೋಶಿಯಲ್ ಇನ್ನೋವೇಶನ್‌ನ ಸಿಇಒ ಸುಧಾ ಶ್ರೀನಿವಾಸನ್, “ನೀರು ಸಾರ್ವಜನಿಕ ಆರೋಗ್ಯ ಮತ್ತು ಜೀವನೋಪಾಯದ ಪ್ರಮುಖ ಮೂಲವಾಗಿದೆ. ಶುದ್ಧ ನೀರಿನ ಲಭ್ಯತೆ ನಮ್ಮ ದೇಶದ ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ಕಲ್ಯಾಣದ ಮೇಲೆ ನೇರ ಪರಿಣಾಮ ಬೀರುತ್ತದೆ. ದಿ/ನಡ್ಜ್ ಪ್ರತಿಭೆ, ಬಂಡವಾಳ ಮತ್ತು ಸಾರ್ವಜನಿಕ ಗಮನವನ್ನು ನೀರಿನ ಸುಸ್ಥಿರತೆಯಂತಹ ಕಡಿಮೆ ಸಮಸ್ಯೆಗಳತ್ತ ಸೆಳೆಯುವ ಗುರಿ ಹೊಂದಿದೆ. ಸಾಮಾಜಿಕ ಉದ್ಯಮಿಗಳನ್ನು ಆಕರ್ಷಿಸಲು ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲು ಆಶಿರ್ವಾದ್ ನೊಂದಿಗೆ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ” ಎಂದಿದ್ದಾರೆ.
ನೀರಿನ ಭದ್ರತೆಯು ಭಾರತದ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ – ಜಾಗತಿಕವಾಗಿ ನೀರಿನ ಗುಣಮಟ್ಟದಲ್ಲಿ ದೇಶವು ಕೆಳಗಿನಿಂದ ಎರಡನೇ ಸ್ಥಾನದಲ್ಲಿದೆ. 160 ಮಿಲಿಯನ್ ಭಾರತೀಯರು ಶುದ್ಧ ಕುಡಿಯುವ ನೀರಿನ ಲಭ್ಯತೆ ಹೊಂದಿಲ್ಲ ಮತ್ತು ನೀತಿ ಆಯೋಗದ ಪ್ರಕಾರ ರಾಷ್ಟ್ರದ ಶೇ.70ರಷ್ಟು ನೀರಿನ ಪೂರೈಕೆಯು ಕಲುಷಿತವಾಗಿದೆ. ಜಲ ಜೀವನ್ ಮಿಷನ್ 2019 ರಲ್ಲಿ ಪ್ರಾರಂಭವಾದಾಗ 19 ಕೋಟಿ ಕುಟುಂಬಗಳ ಪೈಕಿ ಕೇವಲ 3.29 ಕೋಟಿ ಕುಟುಂಬಗಳು ನಲ್ಲಿ ನೀರಿನ ಸೌಲಭ್ಯವನ್ನು ಹೊಂದಿದ್ದವು.
Entry to the The/Nudge Prize | Ashirvad Water Challenge in Partnership with the Office of the PSA Government of India, is now open. To apply, please visit https://prize.thenudge.org/ashirvadwaterchallenge