ರಾಯಚೂರು: ಶಕ್ತಿನಗರದಲ್ಲಿರುವ ಕ್ರೀಡಾಂಗಣ ಮೈದಾನದಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ನೇತೃತ್ವದಲ್ಲಿ ಪ್ರಥಮ ಬಾರಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.ಅಪ್ಪು ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿಗೆ ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಪ್ಪ ಡೋಣಿ ಅವರು ಚಾಲನೆ ನೀಡಿದರು.
ಪಂದ್ಯಾವಳಿ ಆರಂಭಕ್ಕೂ ಮೊದಲು ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ, ಆರ್‌ಟಿಪಿಎಸ್ ಎಂಜಿನಿಯರ್ ಮಹೇಶ ಮಾತನಾಡಿ, ಪುನೀತ್ ಅವರ ಅಕಾಲಿಕ ನಿಧನದ ನಂತರ ಅವರಲ್ಲೊಬ್ಬ ಸಮಾಜ ಸೇವಕ, ಬಡವರ ನೋವುಗಳಿಗೆ ಮಿಡಿಯುವ ಹೃದಯವಂತ ಇದ್ದ ಎಂಬುದು ತಿಳಿಯಿತು. ಇಂದಿನ ಯುವಕರು, ಇಂತಹ ವ್ಯಕ್ತಿಗಳನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಮುಖ್ಯ ಅಥಿತಿಗಳಾದ ಶಂಕರ ಪಾಟೀಲ್, ದೇವೇಂದ್ರಪ್ಪ,, ಸುರೇಶ ಚೋಟು, ನರಸರೆಡ್ಡಿ , ಸೂಗೂರೇಶ, ಶಿವು , ಮಹಮದ್ ವಾಸೀಮ್, ಸಂಗಣ್ಣ , ದವಲ್‌ಸಾಬ್, ತಮ್ಮಣ್ಣ, ಅನೇಕರು ಇದ್ದರು.