ಅಫಜಲಪುರ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪುಂಡಲೀಕ ಶ್ರೀಮಂತ ಕಟ್ಟಿ ಅವಿರೋಧವಾಗಿ ಆಯ್ಕೆಯಾದರು. ಅದ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪುಂಡಲೀಕ ಶ್ರೀಮಂತ ಕಟ್ಟಿ ಹಾಗೂ ಮಲ್ಲಿಕಾರ್ಜುನ ಸಿದ್ದಪ್ಪ ಮುತ್ತಪ್ಪಗೋಳ ಅವರು ನಾಮಪತ್ರ ಸಲ್ಲಿಸಿದ್ದರು. ನಿಗದಿತ ಅವಧಿಯೊಳಗೆ ಮಲ್ಲಿಕಾರ್ಜುನ ಸಿದ್ದಪ್ಪ ಮುತ್ತಪ್ಪಗೋಳ ಅವರು ನಾಮಪತ್ರ ವಾಪಸ್ ಪಡೆದರು. ಆದ್ದರಿಂದ ಪುಂಡಲೀಕ ಕಟ್ಟಿ ಅವರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಚಾಂದಬಾಷಾ ಅನ್ಸಾರಿ ಘೋಷಿಸಿದರು.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪುಂಡಲೀಕ ಕಟ್ಟಿ ಮಾತನಾಡಿ ಗ್ರಾಮೀಣ ಜನರ ಬದುಕು ಹಸನಾದಾಗ ನಮ್ಮ ಹಳ್ಳಿಗಳ ಉದ್ದಾರವಾಗುತ್ತದೆ. ಗ್ರಾಮದಲ್ಲಿರುವ ರೈತರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ ನಾನು ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ನಂತರ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ನಿತೀನ ಗುತ್ತೇದಾರ ರಮೇಶ ಬಾಕೆ ವಿಶ್ವನಾಥ ರೇವೂರ ಅವ್ವಣ್ಣ ಮ್ಯಾಕೇರಿ ಸಾ,ಸಿ, ಬೆನಕನಹಳ್ಳಿ ರಾಜಕುಮಾರ ಜಿಡ್ಡಗಿ, ರಾಮಣ್ಣ ನಾಯಕೋಡಿ ಮಹಾದೇವಗೌಡ ಶಿರನಾಳ, ಬಸಣ್ಣ ಜಕಾಪೂರ,ಮಾಣಿಕ ಬಂಡಗಾರ ಅಪ್ಪಾಸಾಬ ಹೊಸೂರಕರ ಮಲಕಣ್ಣ ಹೊಸೂರಕರ, ಪಂಡಿತ ಬಂಡಗಾರ, ಕಾಶೀನಾಥ ಯಾದವಾಡ ಬಸವರಾಜ ಜನ್ನಾ ಮಹಿಮೂದ ಡಾಂಗೆ ಸಂಜೀವ ದೈತನ ಶ್ರೀಶೈಲ ತಳವಾರ ಅವ್ವಣ್ಣ ಲಾಳಸಂಗಿ ಶ್ರೀಶೈಲ ಚಿನಮಳ್ಳಿ, ಮಲಕಪ್ಪ ಹಂಜಗಿ, ಶಾವರಸಿದ್ದ ಜಮಾದಾರ ಯಲ್ಲಪ್ಪ ನಾಯಕೋಡಿ ಅಂದಣ್ಣಗೌಡ ಬಿರಾದಾರ ಅನೀಲ ಕರೂಟಿ, ಸಿದ್ದಾರಾಮ ಬದನಿಕಾಯಿ, ಸೇರಿದಂತೆ ಇತರರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.