ಲಿಂಗಸುಗೂರು : ಸಮೀಪದ ಈಚನಾಳ ಗ್ರಾಮ ಪಂಚಾಯತ್ ದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಆದಪ್ಪ ಮೇಟಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ,5 ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹಾಕಿಸುವ ಮೂಲಕ ಸದೃಢ ಮಕ್ಕಳನ್ನ ಬೆಳೆಸಿ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಿಡಿಒ ಖಾಜಾ ಬೇಗಂ, ಆರೋಗ್ಯ ಇಲಾಖೆ ಸಿಬ್ಬಂದಿ ಮಲ್ಲಮ್ಮ ಅಂಗನವಾಡಿ ಕಾರ್ಯಕರ್ತೆಯರಾದ ಸರಸ್ವತಿ ಬಡೀಗೇರ್,ಅನೂಸೂಯಾ, ಶರಣಮ್ಮ,ಆಶಾ ಕಾರ್ಯಕರ್ತೆಯರಾದ ಶೋಭಾ ಮೇಟಿ, ಸುವರ್ಣ ಪೂಜಾರಿ, ಅಮರೇಶ ಗಾಳಪೂಜಿ, ಮಲ್ಲಣ್ಣ ನೀರಲಕೇರಿ ಇನ್ನಿತರರಿದ್ದರು.