ಬೆಳಗಾವಿ
ಇಂಗಳಿ ಗ್ರಾಮದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ.
ಗೋವು ಸಮೇತ ಠಾಣೆಗೆ ಹೋಗಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು.
ಈ ವೇಳೆ ಎಫ್‌ಐಆರ್ ಮಾಡದೇ ಬಿಟ್ಟು ಕಳ್ಸಿ ನಿರ್ಲಕ್ಷ್ಯ ತೋರಿದ ಪಿಎಸ್ಐ ಅಮಾನತು.
*ಹುಕ್ಕೇರಿ ಪೊಲೀಸ್ ಠಾಣೆ ಪಿಎಸ್‌ಐ ನಿಖಿಲ್ ಕಾಂಬ್ಳೆ ಅಮಾನತು*
ಅಮಾನತು ಮಾಡಿ ಎಸ್‌ಪಿ ಭೀಮಾಶಂಕರ್ ಗುಳೇದ್ ಆದೇಶ.
ಜೂನ್ 26ರಂದು ಗೋವು ಸಾಗಿಸುತ್ತಿದ್ದ ವಾಹನ ಹಿಡಿದು ಠಾಣೆಗೆ ತಂದಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು.
ಈ ವೇಳೆ ಕೇಸ್ ದಾಖಲಿಸದೇ ಬಿಟ್ಟು ಕಳ್ಸಿದ್ದ ಪಿಎಸ್‌ಐ.
ಘಟನೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರದೇ ಬೇಜವಾಬ್ದಾರಿ.
ಗಡಿಪಾರಾದ ರೌಡಿ ಶೀಟರ್ ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ್ ಸೊಲ್ಲಾಪುರೆಯನ್ನ ಕೂಡ ಬಿಟ್ಟು ಕಳ್ಸಿದ್ದ ಪಿಎಸ್‌ಐ.
ಎಲ್ಲ ಅಂಶಗಳನ್ನ ಪರಿಗಣಿಸಿ ಅಮಾನತು ಮಾಡಿದ ಎಸ್‌ಪಿ.
ಜುಲೈ 3ರಂದು ಇಂಗಳಿ ಚಲೋ ಕರೆ ಕೊಟ್ಟಿರುವ ಶ್ರೀರಾಮ ಸೇನೆ ಸಂಘಟನೆ.
ಪ್ರತಿಭಟನೆಗೂ ಮುನ್ನ ಪಿಎಸ್‌ಐ ಅಮಾನತು ಮಾಡಿ ಆದೇಶ ಹೊರಡಿಸಿದ ಎಸ್‌ಪಿ.