ಇಂಡಿ: ಶಾಲಾ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು. 100 ವಿದ್ಯಾರ್ಥಿಗಳು ಅರ್ಜುಣಗಿಯಿಂದ ನಾದ ಹಾಗೂ ಇಂಡಿಗೆ ಶಾಲಾ ಕಾಲೇಜುಗಳಿಗೆ ಹೋಗಿ ಬರಲು ಬಸ್ ಸೌಕರ್ಯವಿಲ್ಲದೆ ತೋಂದರೆ ಆಗುತ್ತಿದೆ. ಇಂದು ಸೂಮಾರು ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರು, ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ನೇತೃತ್ವದಲ್ಲಿ ಇಂಡಿಯ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಬಿ ಡಿ ಪಾಟೀಲ ಮಾತನಾಡಿ, ಬಸ್ ಡಿಪೋದಲ್ಲಿ ಹಳೆ ಬಸ್ಗಳಿದ್ದು, ಕಳಪೆ ರಸ್ತೆಯಿಂದ ಪಾಟಾ ಮುರೀದು ದುರಸ್ತಿ ಮಾಡಲಾರದೆ ಡಿಪೋದಲ್ಲಿ ನಿಂತಿವೆ. ಸರ್ಕಾರ ಹೂಸ ನೇಮಕಾತಿ ಕೂಡಾ ಮಾಡಿಲ್ಲ ಎಂದು ಕಿಡಿಕಾರಿದರು. ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆ ಶಾಲಾ ಮಕ್ಕಳಿಗೆ ತೋಂದರೆ ಆಗದಂತೆ ಬಸ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಕಲ್ಲಪ್ಪ ಗೌಡ ಪಾಟೀಲ್, ಜ್ಯೋತಿಬಾ ಮೊಠೆ, ರೇವಣಸಿದ್ದ ಹೊಸೂರ, ಕುಬೇರ ಲಾವಟೆ, ಶಂಕರಲಿಂಗ ಪೂಜಾರಿ, ನಿಜಾಮ ಜಾಪೂರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು