ಬಸ್ ಸೌಕರ್ಯಕ್ಕಾಗಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಇಂಡಿ : ತಾಲೂಕಿನ ಹಂಜಗಿ ಗ್ರಾಮದ ಸುಮಾರು 200
ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸುಮಾರು 6 ಕಿ.ಮಿ ಪಾದಯಾತ್ರೆ ಮೂಲಕ ಇಂಡಿ ಕರ್ನಾಟಕ ರಸ್ತೆ ಸಾರಿಗೆ ಘಟಕದ ಮುಂದೆ ಒಂದು ಗಂಟೆ ಕಾಲ ಮುಷ್ಕರ ಮಾಡಿ ಘಟಕ ವ್ಯವಸ್ಥಾಪಕ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿ ನಂತರ ಮಾತನಾಡಿ ಹಂಜಗಿ, ನಿಂಬಾಳ,ಕೊಳುರಗಿ ಮಾರ್ಗದ ಬಸ್ ಸರಿಯಾಗಿ ಸಮಯಕ್ಕೆ ಬರುವದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಬಸ್ ಗಾಗಿ ಕಾಲಹರಣ ಮಾಡುವ ಪರಿಸ್ಥಿತಿ ಪ್ರತಿನಿತ್ಯ ಇದೆ. ಮಕ್ಕಳ ಭವಿಷ್ಯದ ದೃಷ್ಠಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಬಸ್ ಸರಿಯಾಗಿ ಓಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಎಮ್.ಕೆ.ಶೇಖ, ರಮೇಶ ರಾಠೋಡ, ಇಸ್ಮಾಯಿಲ್
ಕುಣಬಿ,ಮಾಳಪ್ಪ ಪೂಜಾರಿ, ಕಿಸೀಮ ವಾಲಿಕಾರ,
ವಿನೋದ ಕಾಳೆ, ನಿಂಗಪ್ಪ ಹಿರೇಕುರಬರ ಮುಂತಾದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇಂಡಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಡಿಪೋ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.