ಲಿಂಗಸೂಗೂರು: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಜಿಲಾನಿ ಪಾಷ ಅವರ ನೇತೃತ್ವದಲ್ಲಿ ಪತ್ರಿಕಾ ಭವನದಲ್ಲಿ ಕರೆದ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುದಗಲ್ ಕ.ರ.ವೇ. ಅಧ್ಯಕ್ಷ ಎಸ್.ಎ.ನಯೀಮ್ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡದ ನಾಡು, ನುಡಿ, ನೆಲ, ಜಲ, ಭಾಷೆಗಾಗಿ ಅವಿರತ ಹೋರಾಟಗಳನ್ನು ಮಾಡುತ್ತಾ, ಬಡವರ, ನಿರ್ಗತಿಕರ, ದೀನ-ದಲಿತರ ಪರವಾದ ಹೋರಾಟಗಳನ್ನು ಮಾಡಿದ್ದೇವೆ. ನಾರಾಯಣಪುರದ ಬಸವ ಸಾಗರದ ಮುಂದೆ ಪುನೀತ್ ರಾಜಕುಮಾರ ಅವರ ಹೆಸರಿನ ಉದ್ಯಾನವನ ನಿರ್ಮಾಣ ಮಾಡಬೇಕು. ಹಾಗೂ 101 ಅಡಿ ಎತ್ತರದ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ದಿನಾಂಕ 30-06-2022 ರಂದು ಬೆಳಿಗ್ಗೆ 11-00 ಗಂಟೆಗೆ ಬ್ರಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಅಪ್ಪು ಅಭಿಮಾನಿಗಳು ಭಾಗವಹಿಸಿ ಹೋರಾಟವನ್ನು ಯಶಸ್ವಿ ಗೊಳಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಹನುಮಂತ ನಾಯಕ,ಎಸ್.ಎನ್. ಖಾದ್ರಿ, ರವಿಕುಮಾರ ಬರಗುಡಿ, ಅಜೀಜ್ ಪಾಶ, ಅಲಾವುದ್ದೀನ ಬಾಬಾ ಉಪಸ್ಥಿತರಿದ್ದರು.