ಅ-30 ರಂದು ರಾಜ್ಯ, ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ..
ಇಂಡಿ : ಗುತ್ತಿ ಬಸವಣ್ಣ ಕಾಲುವೆ ನೀರು ಹರಿಸದೆ ಇರುವ ಹಿನ್ನೆಲೆಯಲ್ಲಿ ಅಕ್ಟೋಬರ್ 30 ರಂದು ಬೆಳಿಗ್ಗೆ 6 ಘಂಟೆಯಿಂದಲೆ ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುತ್ತದೆ ಎಂದು ಅಖಂಡ ಕರ್ನಾಟಕ ರೈತ ಸಂಘದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನ ಹಿರೇರೂಗಿ ಗ್ರಾಮದ ಪ್ರಮುಖ ಹೃದಯ ಭಾಗದ ಶಿವಾಜಿ ವೃತದಲ್ಲಿ, ರಾಜ್ಯ ರಾಷ್ಟ್ರೀಯ ಹೆದ್ದಾರಿ ತಡೆದು ಸಾವಿರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ಮಾಡುತ್ತೆವೆ. ಈಗಾಗಲೇ ಸುಮಾರು ಬಾರಿ ಗುತ್ತಿಬಸವಣ್ಣ ಕಾಲುವೆಗೆ ನೀರು ಹರಿಸಲು ಮನವಿ ಮತ್ತು ಪ್ರತಿಭಟನೆ ಮಾಡಿದ್ದು ಇದೆ. ಆದರೆ ಇಲ್ಲಿಯವರೆಗೆ ಸ್ವಲ್ಪ ಜವಾಬ್ದಾರಿ ತೆಗೆದುಕೊಂಡಿಲ್ಲ. ಅದಲ್ಲದೆ ಕಂದಾಯ ಉಪವಿಭಾಗ ಅಧಿಕಾರಿ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳಿಗೆ ಅಕ್ಟೊಬರ್ 26 ರಂದು ಮನವಿ ಸಲ್ಲಿಸಿ, ಅಕ್ಟೋಬರ್ 30 ರ ವರಗೆ ಗಡುವು ನೀಡಲಾಗಿತ್ತು. ಆದರೆ ಇಲ್ಲಿಯವರೆಗೆ ಕಾಲುವೆಗೆ ನೀರು ಹರಿಸುವ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ. ಮುಂಗಾರು, ಹಿಂಗಾರು ಎರಡು ಮಳೆ ಕೈ ಕೊಟ್ಟ ಹಿನ್ನೆಲೆ ಬೀಕರ ಬರದ ಪರಿಸ್ಥಿತಿ ಈಗಲೇ ಅನುಭವಿಸುತ್ತಿದ್ದೆವೆ. ಹಾಗಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಹಳ ಯಾಗುತ್ತಿದೆ. ಅದಲ್ಲದೇ ಸಾಲ ಶೂಲ ಮಾಡಿ ಬಿತ್ತಿದ ಬೆಳೆ ಫಸಲು ಕೊಡುವ ಮುನ್ನವೇ ಒಣಗಿಹೋಗುತ್ತಿದೆ. ಆ ಕಾರಣಕ್ಕಾಗಿ ಅಕ್ಟೋಬರ್ 30 ರಂದು ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ರೀತಿಯಲ್ಲಿ ಬೃಹತ್ ಪ್ರತಿಭಟಿನೆ ಮಾಡಲಾಗುತ್ತದೆ. ಅದಕ್ಕೆ ತಾಲ್ಲೂಕಿನ ಬೊಳೆಗಾಂವ, ತಾಂಬಾ ಗೊರನಾಳ, ತೆನಹಳ್ಳಿ, ತಡವಲಗಾ , ಹಂಜಗಿ, ಅಂಜುಟಗಿ ಹಾಗೂ ರೂಗಿ ಗ್ರಾಮಸ್ಥರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ರೈತರಿಂದ ಪ್ರತಿಭಟಿನೆ ಮಾಡಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.