ಜಿಲ್ಲಾ ಕೇಂದ್ರಕ್ಕಾಗಿ ಹಲಗೆ ಬಾರಿಸುತ್ತಾ ಪ್ರತಿಭಟನೆ..!
ಇಂಡಿ: ಇಂಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚನೆ ಮಾಡಿ ಘೋಷಣೆ ಮಾಡಬೇಕು ಹಾಗೂ ಮುಂದುವರೆದು ಸಂವಿಧಾನದ ವಿಧಿ 371 (ಜೆ)ಗೆ
ಸೇರ್ಪಡೆಗೆ ಹಕ್ಕೊತ್ತಾಯಕ್ಕೆ ಆಗ್ರಹಿಸಿ ತಾಲೂಕಿನ ಇಂಗಳಗಿ ಗ್ರಾಮದ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಶುಕ್ರವಾರಂದು ಪಟ್ಟಣದ ಕೃಷಿ ಉತ್ಪನ ಮಾರುಕಟ್ಟೆಯಿಂದ ಹಲಗೆ
ಬಾರಿಸುತ್ತಾ ಘೊಷಣೆಗಳನ್ನು ಕೂಗುತ್ತಾ ಪಾದಯಾತ್ರೆ ಮೂಲಕ ಮಿನಿ ವಿಧಾನಸೌಧ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ
ಪತ್ರವನ್ನು ತಹಸಿಲ್ದಾರ ಬಿ.ಎಸ್. ಕಡಕಬಾವಿ
ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಸಂಸ್ಥೆಯ ವ್ಯವಸ್ಥಾಪಕ ಅಶೋಕ ಬಳಬಟ್ಟಿ, ಗ್ರಾಮದ ಮುಖಂಡರಾದ ಪಿ.ಎಸ್.ಹೊಸಮನಿ, ಭೀಮಣ್ಣ
ಕವಲಗಿ, ಗಣಪತಿ ಬಾಣಿಕೋಲ, ಕೇಸಪ್ಪ ಪಾಟೀಲ
ಮತ್ತಿತರರು ಮಾತನಾಡಿ, ಈಗಾಗಲೆ ಜಿಲ್ಲಾ ಮಟ್ಟದ ಕೆಲವು ಇಲಾಖೆಗಳು ಇಂಡಿಯಲ್ಲಿ ಕಾರ್ಯ ನಿರ್ವಹಿಸಿ
ಸುತ್ತಿವೆ. ಅಲ್ಲದೆ ಜಿಲ್ಲೆಗೆ ಇರಬೇಕಾದ ಎಲ್ಲ ಮೂಲಭೂತ ಸೌಲಭ್ಯವನ್ನು ಇಂಡಿ ನಗರ ಹೊಂದಿದೆ. ಯೋಗ್ಯವಾದ
ಭೌಗೋಳಿಕ ಪ್ರದೇಶ ಮತ್ತು ಸರಕಾರಿ ಕಚೇರಿಗಳನ್ನು ಹೊಂದಿದ್ದು ಗಡಿ ಭಾಗದವಿಜಯಪುರ ಜಿಲ್ಲೆಯ ಇಂಡಿಯು ಅತೀ ಹಿಂದುಳಿದ ಪ್ರದೇಶಗಲ್ಲಿ ಒಂದಾಗಿದೆ. ಅಲ್ಲದೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ
ಹಿಂದುಳಿದೆ. ಆದರೆ ಎಲ್ಲ ವಿಧದಲ್ಲೂ ಪ್ರಗತಿ ಹೊಂದಬೇಕಾದರೆ ಇಂಡಿಯು ಆಡಳಿತ್ಮಕವಾಗಿ ಜಿಲ್ಲೆ ಮಾಡಿದಾಗ ಮಾತ್ರ ಸಾಧ್ಯ ಎಂದರು. ಬ್ರಿಟಿಷರ ಕಾಲದಿಂದೂ ಇಂಡಿಯಲ್ಲಿ ಉಪವಿಭಾಗದ ಕಛೇರಿಗಳಿವೆ. ನೂತನವಾಗಿ ರಚನೆ ಮಾಡಿರುವ ಅನ್ಯ ಜಿಲ್ಲೆಗಳಿಗೆ ಹೊಲಿಸಿದರೆ ಇಂಡಿ ಎಲ್ಲ ಚೌಕಟ್ಟಿನಲ್ಲಿ ಜಿಲ್ಲೆ ಮಾಡಲು ಸೂಕ್ತವಾಗಿದೆ. ಅಲ್ಲದೆ ನಮ್ಮ ಪಕ್ಕದಲ್ಲಿರುವ ಅಫಜಲಪುರ ತಾಲ್ಲೂಕು 371(ಜೆ) ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ನಾವು ಇದರಿಂದ ವಂಚಿತರಾಗಿದ್ದೇವೆ. ಆದ್ದರಿಂದ ಮುಖ್ಯಂಮತ್ರಿಗಳು ಕೂಡಲೆ ಇಂಡಿಯನ್ನು ಜಿಲ್ಲೆ ಮಾಡಲು ಆದೇಶಿಸಬೇಕು. ಒಂದು ವೇಳೆ ವಿಳಂಬ ನೀತಿ ಅನುಸರಿಸಿದ್ದಲ್ಲಿ ಉಗ್ರ ಹೊರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪತ್ರಕರ್ತ ಉಮೇಶ ಬಳಬಟ್ಟಿ, ರಾಜಕುಮಾರ
ಚಾಬುಕಸವಾರ, ಅಣ್ಣಪ್ಪ ಅಹಿರಸಂಗ, ಆನಂದ
ಪವಾರ, ಬಸವರಾಜ ಜಾಧವ, ಶಿವಾನಂದ
ತಾವರಖೇಡ, ಹುಸೇನ ಅಹಿರಸಂಗ, ಶಕೀಲ
ಮಣ್ಣೂರ, ಜಕ್ಕಪ್ಪ ಪೂಜಾರಿ, ತಳಸಿದಾಸ ಪವಾರ,
ಸೈಪನ ಮುಲ್ಲಾ, ಗ್ರಾಪಂ ಸದಸ್ಯರಾದ ಚಿಮ್ಮಾಜಿ
ಥೋರಾತ, ಪಿಂಟು ಮಾನೆ, ಶಿವಾನಂದ ತಾವರಖೇಡ,
ಖಾಜಪ್ಪ ಹೊನ್ನಕೊರೆ, ಪೈಗಂಬರ ಮಣ್ಣೂರ,
ಮಲ್ಲಿಕಾರ್ಜುನ ಕುಂಬಾರ, ಉಮೇಶ ಚವ್ಹಾಣ,
ಮಹೇಶ ಹಿರೇಮಠ, ಮಾಂತೇಶ ಹಿರೇಮಠ,
ಶಫಿಕಪಟೇಲ ಮಸಳಿ, ಪಾಂಡುರಂಗ ಜಾಧವ, ಸತೀಷ ಸೀತಿಮನಿ , ಈರಪ್ಪ ಪೂಜಾರಿ, ನಾಗನಾಥ ಪವಾರ,
ಮುತ್ತಪ್ಪ ಪೂಜಾರಿ, ಹಣಮಂತ ಜಮಾದಾರ ಮತ್ತಿತರರು ಇದ್ದರು.