ಇಂಡಿ : ಬೊಬ್ಬೆಹೋಡೆದು ವಿನೂತನವಾಗಿ ಪ್ರತಿಭಟಿಸಿದ ಗುತ್ತಿಬಸಣ್ಣ ಹೋರಾಟಗಾರರು. ಹೌದು ತಾಲೂಕಿನ ತಾಂಬಾ ಗ್ರಾಮದ ಸಂಗನಬಸ್ವೇಶ್ವರ ವೃತದಲ್ಲಿ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಸಿ ಎಂದು ಬೊಬ್ಬೆ ಹೊಡೆದು ರೈತರು, ಹೋರಾಟ ಸಮಿತಿ ಪ್ರತಿಭಟನಾಕಾರರು ಆಕ್ರೋಶವಾಗಿ ಪ್ರತಿಭಟಿಸಿದರು.
ಸುಮಾರು 219 ದಿನಗಳಿಂದಲೂ ನಿರಂತರವಾಗಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದೆವೆ. ಆದರೆ ಸ್ಪಂದಿಸುವ ಮಂತ್ರ ಹೇಳಿಹೋಗುತ್ತಾರೆ ವಿನಃ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಗ್ರಾಮ ಘಟಕದ ಕರವೇ ಅಧ್ಯಕ್ಷ ಶಿವಾರಾಜ ಕೆಂಗನಾಳ ಹೇಳಿದರು.
ಈ ಹಿಂದೆ ಸಚಿವ ಉಮೇಶ್ ಕತ್ತಿ ಯವರು 3.5 ಕೋಟಿ ಮೊತ್ತದ ಹೂಳೆತ್ತುವ ಕಾಮಗಾರಿಗೆ ಜರೂರು ಟೆಂಡರ್ ಮಾಡಿದರು. ಆದರೆ ಟೆಂಡರ್ ಮಾಡಿ ಎರಡು ತಿಂಗಳು ಕಳೆದರೂ, ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮಾಡದೇ ಕೆ ಬಿ ಜೆ ಎನ್ ಎಲ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು. ಇನ್ನೂ ಮುಂದೆ — ಪ್ರತಿಭಟನೆಯನ್ನು ತೀವ್ರಗೊಳಿಸುವ ಕಾರಣ ಅದರ ಭಾಗವಾಗಿ ಇಂದು ಬೊಬ್ಬೆ ಹೊಡೆಯುವ ಪ್ರತಿಭಟನೆ ಮಾಡಿದೆವು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಯ್ಯ ಸಾರಂಗಮಠ ಮಾತನಾಡಿದ ಅವರು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಪ್ರಾರಂಭಗೊಳಿಸದಿದ್ದರೆ ನಮ್ಮೆಲ್ಲ ಹೋರಾಟ ಸಮಿತಿ ರೈತರನ್ನು ಒಗ್ಗೂಡಿಸಿ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಉಗ್ರ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹೋರಾಟದ ವೇದಿಕೆಯಲ್ಲಿ ಮಹದೇವ್ ಮೂಲಿಮನಿ, ಈರಣ್ಣ ಬ್ಯಾಕೋಡ, ಸಿಗಪ್ಪ ಸೋಮನಿಂಗ, ಬೀರಪ್ಪ ವಗ್ಗಿ, ನಾಗಪ್ಪ ಕೆಮಶೆಟ್ಟಿ, ಕೃಷ್ಣಪ್ಪ ಬಾಗಾಯತ್ , ಜಟ್ಟಪ್ಪ ಮುಂಜಿ ಇನ್ನೂ ಅನೇಕ ರೈತರು ಭಾಗವಹಿಸಿದ್ದರು.