ಪುರಸಭೆ ಹೊರ ಗುತ್ತಿಗೆ ನೌಕರರಿಂದ
ಪ್ರತಿಭಟನೆ..!
ಇಂಡಿ : ಪಟ್ಟಣದ ಪುರಸಭೆಯಲ್ಲಿ ಹೊರ ಗುತ್ತಿಗೆ
ಆಧಾರದ ಮೇಲೆ ದುಡಿಯುವ ಸಿಬ್ಬಂದಿ, ಸಮಾನ
ಕೆಲಸಕ್ಕೆ ಸಮಾನ ವೇತನ ಸಿಬ್ಬಂದಿ, ನೀರು
ಸರಬರಾಜು, ವಾಹನ ಚಾಲಕರು, ಪೌರ ಕಾರ್ಮಿಕರು
ಕಳೆದ ಐದು ತಿಂಗಳಿಂದ ಸಂಬಳ ನೀಡಿರುವದಿಲ್ಲ
ಎಂದು ಆಗ್ರಹಿಸಿ ಪುರಸಭೆ ಎದುರು ಪ್ರತಿಭಟನೆ
ನಡೆಸಿದರು.
ಧರಣಿ ನಿರತ ಸಿಬ್ಬಂದಿಗೆ ಪುರಸಭೆ ಸದಸ್ಯರು
ಬೆಂಬಲ ನೀಡಿದರು. ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಸೋಮವಾರ ಸಂಬಳ ನೀಡುವದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಅನೀಲಗೌಡ ಬಿರಾದಾರ,ಸತೀಶ
ಕುಂಬಾರ,ಶಬ್ಬೀರ ಖಾಜಿ, ಉಮೇಶ ದೇಗಿನಾಳ, ಸುಧೀರ ಕರಕಟ್ಟಿ, ಧರಣಿ ನಿರತ ಪೌರ ಸಿಬ್ಬಂದಿ ಮತ್ತಿತರಿದ್ದರು.