ಸರ್ಕಾರದ ಅಣಕು ಶವಯಾತ್ರೆಗೆ ದೊರೆಯದ ಅವಕಾಶ ಒಳಮೀಸಲಿಗಾಗಿ ಮಾದಿಗ ಸಮುದಾಯದಿಂದ ಪ್ರತಿಭಟನೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯಿಂದ ಶುಕ್ರವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಸರ್ಕಾರದ ಆಣಕು ಶವಯಾತ್ರೆಗೆ ನೀಡದಿರುವ ಕಾರಣದಿಂದಾಗಿ ಪ್ರತಿಭಟನಾಕಾರರು ಸರ್ಕಲ್‌ದಿಂದ ತಹಸೀಲ್ದಾರ್ ಅಂಬೇಡ್ಕರ್ ಕಚೇರಿಯವರೆಗೆ ಬೃಹತ್
ಪ್ರತಿಭಟನೆ ನಡೆಸಿದರು.
ನ್ಯಾಯವಾದಿ ಕೆ. ಬಿ. ದೊಡಮನಿ ಮಾತನಾಡಿ, ಆಳುವ ಸರ್ಕಾರಗಳು ಸಾರ್ವಜನಿಕ ನ್ಯಾಯ ಕೊಟ್ಟಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನ ಇದ್ದರೂ ಸಿಎಂ ಸಿದ್ದರಾಮಯ್ಯ ಅಹಿಂದ ನಾಯಕ, ಶೋಷಿತ ಸಮುದಾಯದ ಪರ ಎಂದು ಹೇಳುತ್ತಾ ಮೇಲ್ವರ್ಗದ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಂಸದ ಗೋವಿಂದ ಕಾರಜೋಳ ತಮ್ಮ ಸರ್ಕಾರ ಇದ್ದಾಗ ಏನು ಮಾಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲಿ ನಮ್ಮ ಸಮಾಜದ ಎಂಎಲ್‌ಎ, ಎಂಪಿಗಳು ಸಮಾಜವನ್ನು ಸರ್ಕಾರಗಳ ಮುಂದೆ ಇಟ್ಟಿದಿದ್ದು ಎಂದು ಕಳವಳ ವ್ಯಕ್ತಪಡಿಸಿದರು.
ಮುಖಂಡ ಮಾರುತಿ ಸಿದ್ದಾಪೂರ ಮಾತನಾಡಿ, ಬಲಾಥ್ ಸಮುದಾಯದವರು ಮೀಸಲಾತಿ ಹೆಸರಿನಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ತಮ್ಮದೇ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಒಳಮೀಸಲಾತಿ” ಜಾರಿಗಯಾಗಬೇಕು. ಒಳಮೀಸಲು ಜಾರಿ ಬಗ್ಗೆ ಖರ್ಗೆ
ಮುದ್ದೇಬಿಹಾಳ ಪಟ್ಟಣದ ತಹಸೀಲ್ದಾರ್ ಕಚೇರಿಗೆ ನೇತೃತ್ವದಲ್ಲಿ ಶುಕ್ರವಾರ ತಹಸೀಲ್ದಾರ್ ಕೀರ್ತಿ ಚಾಲಕ ರಾಹುಲ್ ಹೆಸರು ಹೇಳಿದರೆ, ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ ಹೆಸರು ಹೇಳುತ್ತಾರೆ. ಒಬ್ಬರ ಮೇಲೊಬ್ಬರು ಹಾಕುತ್ತಾ ಒಳಮೀಸಲು ಕಲ್ಪಿಸುವುದಕ್ಕೆ
ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.
ಮುಖಂಡ ದುರಗಪ್ಪ ದೊಡಮನಿ ಮಾತನಾಡಿ, ಮಾದಿಗ ಸಮುದಾಯವನ್ನು ಕಳೆದ 35 ವರ್ಷಗಳಿಂದ ವಂಚಿಸಿದ್ದಾರೆ ಎಂದು ದೂರಿದರು.
ಬಾಲಚಂದ್ರ ಹುಲ್ಲೂರ, ಶೇಖಪ್ಪ ಮಾದರ, ಆನಂದ ಮುದೂರ ಮಾತನಾಡಿದರು. ತಹಸೀಲ್ದಾರ್ ಕೀರ್ತಿ ಚಾಲಕ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ವಕೀಲರಾದ ಪಿ. ಬಿ. ಮ್ಯಾಗೇರಿ ಮನವಿ ಪತ್ರಆಗಮಿಸಿದ್ದ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಮಹೇಶ ದೊಡಮನಿ, ರಮೇಶ ತಳವಾರ. ಮಲ್ಲಪ್ಪ ಬಸರಕೋಡ, ನೀಲಪ್ಪ ಸಿದ್ದಾಪೂರ,ಮಂಜುನಾಥ ಕುಂದರಗಿ, ಡಿ ಡಿ ಯರಝರಿ, ಮುತ್ತು ಅಮರಗೋಳ, ಮಾರುತಿ ಧನ್ನೂರ, ಕಾಲಪ್ಪ ಅರ್ಜಿ, ಮುತ್ತು ಸಿದ್ದಾಪೂರ, ಶಂಕ್ರಪ್ಪ ತಂಗಡಗಿ,ಬಸವರಾಜ ಅರಸನಾಳ, ಪ್ರಭು ತಳಗೆ, ಲಕ್ಷಣ ಕಾಳಗಿ, ಪರಶು ನಾಗೂರು, ಮಾಯಮ್ಮ ಮಾದರ, ಶಿಲ್ಪಾ ಮಾದರ, ನೀಲಮ್ಮ ಮಾದರ ಸೇರಿದಂತೆ ಉಪಸ್ಥಿತರಿದ್ದರು. ಮುಂಜಾಗ್ರತಾ ಕ್ರಮವಾಗಿ ಸಿಪಿಐ ಮೊಹ್ಮದ ಫಸಿವುದ್ದೀನ್, ಪಿಎಸ್‌ಐ ಸಂಜಯ ತಿಪರೆಡ್ಡಿ ತಮ್ಮ ಸಿಬ್ಬಂದಿಯೊಂದಿಗೆ ಭದ್ರತೆ ನೀಡಿದ್ದಾರೆ.