ಇಂಡಿಯಲ್ಲಿ ಪೋಲಿಸ್ ವಿರುದ್ಧ ಪ್ರತಿಭಟನೆ..! ಕಾರಣವೇನು..?
ಇಂಡಿ : ಪ್ರತಿಭಟನೆಗೆ ಸೂಕ್ತ ರಕ್ಷಣೆ ನೀಡದ ಹಿನ್ನೆಲೆ ಪೊಲೀಸರ ವಿರುದ್ಧ ಎಬಿವಿಪಿ ಪ್ರತಿಭಟನೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ. ಪಹಲ್ಗಾನ್‌ನಲ್ಲಿ ನಡೆದಿರುವ ಹಿಂದೂಗಳ ಮೇಲಿನ ದಾಳಿ ಖಂಡಿಸಿ ಎಬಿವಿಪಿ ಪ್ರತಿಭಟನೆ ಮಾಡಲು ಸೂಕ್ತ ರಕ್ಷಣೆ ನೀಡಲು ಕೇಳಿದರು. ಆದ್ರೇ, ರಕ್ಷಣೆ ನೀಡದಕ್ಕಾಗಿ ಪೊಲೀಸರ ವಿರುದ್ಧ ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ರಸ್ತೆಯಲ್ಲಿ ಪ್ರತಿಭಟನೆ ಮಾಡಿದಕ್ಕಾಗಿ ಇಂಡಿ ಪಟ್ಟಣದಲ್ಲಿ ಟ್ರಾಫಿಕ್ ಜಾಮ್ ಕೂಡ ಆಗಿತ್ತು. ತಾಲ್ಲೂಕು ಆಡಳಿತ ಸೌಧದ ಎದುರು ಎರಡು ಬದಿ ರಸ್ತೆ ತಡೆದು ಘಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಡಿವಾಯ್ ಎಸ್ಪಿ ಮತ್ತು ಉಪವಿಭಾಗ ಆಧಿಕಾರಿ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರಿಂದ ಸಾರ್ವಜನಿಕರು, ಆಸ್ಪತ್ರೆಗೆ ತೆರಳುವ ರೋಗಿಗಳು, ವಯೋವೃದ್ದರು, ಗರ್ಭಿಣಿ ಮಹಿಳೆಯರು, ಪ್ರಯಾಣಿಕರು ಬಿಸಿಲಲ್ಲಿ ಅನೇಕ ಸಂಕಷ್ಟ ಎದುರಿಸಬೇಕಾಯಿತು.