ಸ್ಲಂ ಮನೆ ಕಾಮಗಾರಿ ವಿಳಂಭ ; ಪ್ರತಿಭಟನೆ
ಇಂಡಿ :ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಸೇರಬೇಕಾದ ಮನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತಸೌಧ ಎದುರು ಫಲಾನುಭವಿಗಳು ಮತ್ತು ನಾಗರಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
೨೦೨೩-೨೪ ರಲ್ಲಿ ಸುಮಾರು ೨೫೦ ಮನೆಗಳನ್ನು ಬಡವರಿಗೆ ನೀಡಲಾಗಿದೆ. ಮತ್ತು ಆ ಮನೆಗಳನ್ನು ೬ ತಿಂಗಳಲ್ಲಿ ಮುಗಿಸಬೇಕಾಗಿತ್ತು. ಮೂರು ವರ್ಷ ಗತಿಸಿದರೂ ಮನೆ ನೀಡುವದು ಕನಸಿನ ಮಾತಾಗಿದೆ ಎಂದರು.
ಕೂಡಲೇ ಮನೆಗಳನ್ನು ನಿವಾಸಿ ವಾಸಿಸಲು. ನೀಡಿ ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವದೆಂದು ಮನವಿಯಲ್ಲಿ ತಿಳಿಸಿದ್ದಾರೆ.
ತಹಸೀಲ್ದಾರ ಕಡಕಬಾವಿ ಇವರಿಗೆ ಮನವಿ ಸಲ್ಲಿಸಿದರು.
ಜೆಡಿ ಎಸ್ ಮುಖಂಡ ಮಹಿಬೂಬ ಬೇವನೂರ, ಸಗೀರ ಮುಲ್ಲಾ ಫಜಲು ಮುಲ್ಲಾ, ಚಂದ್ರಶೇಖರ ಹೊಸಮನಿ, ಹಮ್ಮಜದ ಬಾಗವಾನ, ದುಂಡು ಬಿರಾದಾರ ಮತ್ತು ಫಲಾನುಭವಿಗಳು ಮತ್ತಿತರಿದ್ದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಯಡಿ ಫಲಾನುಭವಿಗಳಿಗೆ ಮನೆ ನೀಡಬೇಕೆಂದ್ರ ಆಗ್ರಹಿಸಿ ಆಡಳಿತಸೌಧದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರವರಿಗೆ ಮನವಿ ಸಲ್ಲಿಸಿದರು.



















