ಶಾಸಕ ಎಂ ಆರ್ ಮಂಜುನಾಥ್ ಮನವಿಗೆ ಸ್ಪಂದಿಸಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದ ರೈತ ಸಂಘಟನೆ .
ಹನೂರು: ಪಟ್ಟಣದ ಕೆಇಬಿ ಮುಂಭಾಗ ರಾಜ್ಯ ರೈತ ಸಂಘ ಸದಸ್ಯರುಗಳು ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಸತ್ಯಾಗ್ರಹ ಎರಡನೇ ದಿನವೂ ಜರುಗಿತು.
ನಮ್ಮ ಕ್ಷೇತ್ರವು ಸುಮಾರು 960ಚದುರ ಕಿಲೊಮಿಟರ್ , ವಿಸ್ತಿರ್ಣವಿದ್ದು,ಮೂರು ಅರಣ್ಯ ಇಲಾಖೆಯ ವಿಭಾಗಗಳ ವ್ಯಾಪ್ತಿಗೆ ಬರುತ್ತದೆ, ಸರ್ಕಾರವು ರಾತ್ರಿ ವೇಳೆ ನೀಡುವ ವಿದ್ಯುತ್ ಹಗಲಿನಲ್ಲಿ 7 ಗಂಟೆ ತ್ರೀ ಪೀಸ್ ಕೊಡಬೇಕು, ಅಕ್ರಮ ಸಕ್ರಮದಲ್ಲಿ ಹಣ ಕಟ್ಟಿದರು ಯಾವುದೇ ಪ್ರಯೋಜನವಿಲ್ಲ ರೈತರಿಗೆ ದಿನ ನಿತ್ಯ ತೊಂದರೆ – ಯಾಗುತ್ತಿದೆ, ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಗೌಡೆಗೌಡ ತಿಳಿಸಿದರು .
ಹನೂರು ಪಟ್ಟಣದ ಕೆಇಬಿಯ ಮುಂಬಾಗದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಪರವಾಗಿ ಮಾತನಾಡಿದ ಗೌಡೇಗೌಡರು ೨೦೧೩ರಲ್ಲಿ ನಮ್ಮ ಸಂಘವು ಮಾನವ ಹಕ್ಕು ಆಯೋಗದಲ್ಲಿ ದೂರು ನೀಡಿದ್ದರು ಸಹ ಪ್ರಯೋಜನವಿಲ್ಲ ಮಳೆಯಿಲ್ಲ ನಮಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಿಲ್ಲ ನಮ್ಮ ಕ್ಷೇತ್ರದಲ್ಲಿ ಗುಡ್ಡಗಾಡು ಪ್ರದೇಶವಿರುವುದರಿಂದ ನಮಗೆ ಟ್ರಾನ್ಸ್ ಪಾರ್ಮರ್ ಅಳವಡಿಕೆಕಷ್ಟವಾಗಿದೆಈ ಭಾಗದಲ್ಲಿ ಹಂಡ್ರೆಡ್ ಕೆವಿ ಟಿ ಸಿ ಗಳಿವೆ ಅವುಗಳ ದುರಸ್ತಿ ಕಾರ್ಯಮಾಡಲು ಕಷ್ಟವಾಗಿದೆ, ರೈತರಿಗೆ ಬಹಳ ಮೋಸವಾಗಿದೆ. ಸರ್ಕಾರವು ಚೆಸ್ಕಾಂ ಇಲಾಖೆಗೆ ಹದಿನಾಲ್ಕು ಸಾವಿರ ಕೋಟಿ ಹಣ ಬಿಡುಗಡೆ ಮಾಡಿದರು ಅದರ ಉಪಯೋಗ ಸಮರ್ಪಕವಾಗಿ ಮಾಡುತ್ತಿಲ್ಲ, ಶಾಸಕರು ನಮ್ಮ ಪರವಾಗಿ ಈಗಾಗಲೇ ಸದನದಲ್ಲಿ ಚೆರ್ಚೆ ಮಾಡಿದ್ದಾರೆ. ಮುಂದಿನ ಹದಿನೈದು ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಮಾನ್ಯಶಾಸಕರರಾದ ಎಂಆರ್ ಮಂಜುನಾಥ್ ರವರು ನೀಡಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರೈತರ ಮನವಿಗೆ ಸ್ಪಂದಿಸಿದ ಶಾಸಕ ಎಂ ಆರ್ ಮಂಜುನಾಥ್ : ರೈತರು ಪ್ರತಿಭಟನೆ ನಿರತ ಸ್ಥಳಕ್ಕೆ ಬೇಟಿ ನೀಡಿದ ನಂತರ ನಿಮ್ಮ ಸಮಸ್ಯೆಗಳೆಲ್ಲವು ಸತ್ಯವಾಗಿದೆ ನಿಮ್ಮ ದ್ವನಿಗೆ ನಾನು ಚೊಚ್ಚಲ ಸದನದಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿದ್ದೇನೆ, ನಮ್ಮ ಕ್ಷೇತ್ರವು ರಾಜ್ಯದಲ್ಲಿ ಅತಿ ದೊಡ್ಡ ಮೂರನೆ ಕ್ಷೇತ್ರ ವಾಗಿದೆ ಅಲ್ಲದೆ ಇಲ್ಲಿ ಹೆಚ್ಚು ಕಾಡು ಪ್ರಾಣಿಗಳ ಹಾವಳಿಯಿದೆ ನಿಮಗೆ ನೀರು ,ವಿದ್ಯುತ್ ನೀಡಿದರೆ ಯಾವುದೆ ಸಮಸ್ಯೆ – ಯಾಗುವುದಿಲ್ಲ ನಮ್ಮ ವ್ಯಾಪ್ತಿಯಲ್ಲಿ 439 ಟಿ ಸಿ ಗಳನ್ನು ನೀಡಿಲ್ಲ, ಮತ್ತೊಂದು ಉಪವಿಭಾಗ ರಾಮಾಪುರದಲ್ಲಿ ಮಾಡಬೇಕು, ಬೌಗೋಳಿಕವಾಗಿ ನಮ್ಮ ಕ್ಷೇತ್ರ ದೊಡ್ಡದಾಗಿದೆ. ರೈತರ ಸಮಸ್ಯೆಯನ್ನು ನಾನು ನಿಮ್ಮ ಪ್ರತಿನಿದಿಯಾಗಿ ಸದನದಲ್ಲಿ ದ್ವನಿಯಾಗುತ್ತೇನೆ , ಇಂಧನ ಇಲಾಖೆಯ ತಪ್ಪಿನಿಂದ ನಮ್ಮ ರೈತರಿಗೆ ಸಾಕಷ್ಟು ನಷ್ಟವಾಗುತ್ತಿದೆ ಮುಂದಿನ ದಿನಗಳಲ್ಲಿ ಮಳೆಯಿಲ್ಲದೆ ದನ ಕರುಗಳಿಗೆ ತೊಂದರೆಯಾಗದಂತೆ ನಾನು ನಿಮ್ಮ ಜೊತೆಯಲ್ಲಿರುತ್ತೆನೆ . ವಿದ್ಯುತ್ ಸಮಸ್ಯೆ ಬಗೆಹರಿಸಲು ಯೋಜನೆ ರೂಪಿಸಲಾಗಿದೆ ಇದರಿಂದ ಶಾಶ್ವತ ಪರಿಹಾರ ನೀಡಲಾಗುವುದು,ಈಗಾಗಲೆ ಸಚಿವರು ಭರವಸೆ ನೀಡಿದ್ದಾರೆ.
ಎಲ್ಲಾ ರೀತಿಯಲ್ಲೂ ರೈತರಿಗೆ ಸಹಕಾರ ನೀಡುತ್ತೇನೆ, ನಮಗೆ ಹದಿನೈದು ದಿನ ಕಾಲವಕಾಶ ಕೊಡಿ, ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸುತ್ತೇನೆ. ಆದರೂ ಸಮಸ್ಯೆ ಬಗೆಹರಿಯದಿದ್ದರೆ ನಾನು ನಿಮ್ಮೊಡನೆ ಪ್ರತಿಭಟನೆಗೆ ಮಾಡಲು ಸಿದ್ಧನಿರುತ್ತೇನೆ ಎಂದು ತಿಳಿಸಿದರು .
ಅಧಿಕ್ಷಕ ಇಂಜಿನೀಯರ್ ಶ್ರೀಮತಿ ತಾರ ರವರು ಮಾತನಾಡಿ ನೀವು ಮನವಿ ಮಾಡಿದ ಹದಿನೆಂಟನೆ ತಾರಿಖು ಮಾಹಿತಿ ಬಂದಿತು ಅಲ್ಲದೆ ನಮಗೆ ಮಳೆಯಿಲ್ಲದ ಕಾರಣ ಬೇಕಾಗಿರುವ ಹತ್ತು ಸಾವಿರ ಮೆಗವ್ಯಾಟ್ ವಿದ್ಯುತ್ ಆದರೆ ನಮಗೆ ಸಿಗುವುದು ಕೇವಲ ನಾಲ್ಕು ಸಾವಿರ ಮೆಗವ್ಯಾಟ್ ನಾವು ಕೊಡುವ ಕರೆಂಟ್ ಸಾಲುತ್ತಿಲ್ಲ ಸಾರ್ವಜನಿಕರ ಹಿತಶಕ್ತಿ ಬಹಳ ಮುಖ್ಯವಾಗಿದೆ ಮೇಲಾಧಿಕಾರಿಗಳಿಗೆ ವಿಷಯ ತಿಳಿಸುತ್ತೇನೆ ಅದರ ಮುಂದುವರಿದ ಭಾಗವಾಗಿ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಶಾಸಕರ ಮನವಿಗೆ ಸ್ಪಂದಿಸಿದ ರೈತರು ಪ್ರತಿಭಟನೆಯನ್ನು ಕೈಬಿಟ್ಟು ರೈತ ಸಂಘಕ್ಕೆ ಜಯವಾಗಲಿ ಎಂದು ಹೋರಾಟವನ್ನು ನಿಲ್ಲಿಸಿದರು.
ಇದೇ ಸಮಯದಲ್ಲಿ ಚೆಸ್ಕಾಂನ ಅಧಿಕಾರಿಗಳು ಹಾಗೂ ರೈತ ಸಂಘದ ಸದಸ್ಯ, ಮುಖಂಡರು, ಆರಕ್ಷಕರು ಉಪಸ್ಥಿತರಿದ್ದರು.
ವರದಿ : ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ..