ಜಲಾವೃತ ನೆರೆಪಿಡಿತ ಸಂತ್ರಸ್ತರಿಗೆ ರಕ್ಷಕರಿಗೆ ಕಿವಿಮಾತು: ವೈ ಎಂ ಪೂಜಾರ
ವಿಶೇಷ ಲೇಖನ : ವೈ ಎಂ ಪೂಜಾರ
ಇಂಡಿ : ಪ್ರವಾಹಗಳ ನೆರೆಪೀಡಿತ ಪ್ರದೇಶದ ಜನರು ಪ್ರಸ್ತುತ ಸಂದರ್ಭದಲ್ಲಿ ಶಾಂತವಾಗಿರಿ ಭಯಪಡಬೇಡಿ ಸಾಕು ಪ್ರಾಣಿಗಳು ದನ ಕರುಗಳು ಕುರಿ ಮೇಕೆ ಸುರಕ್ಷಿತ ಸ್ಥಳ ಗುರುತಿಸಿ ಬಯಲಿನಲ್ಲಿ ಬಿಡಿ ಕಟ್ಟಿ ಹಾಕಬೇಡಿ.
ಜೀವ ಜೀವನಕ್ಕಾಗಿ ಸುರಕ್ಷತೆ ಗಾಗಿ ಅಗತ್ಯ ವಸ್ತುಗಳೊಂದಿಗೆ ತುರ್ತು ಕಿಟ್ಟುಗಳೊಂದಿಗೆ ನಿಮ್ಮ ದಾಖಲೆಗಳು ಬೆಲೆಬಾಳುವ ವಸ್ತುಗಳು ತೆಗೆದುಕೊಂಡು ಎತ್ತರದ ಸುರಕ್ಷಿತ ಸ್ಥಳಗಳಲ್ಲಿ ಬೀಡಾರಹೂಡಿ ಸರ್ಕಾರಿ ಅಧಿಕಾರಿಗಳ ನಿರ್ದೇಶನದ ಮೇರೆಗೆ ತಕ್ಷಣ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಿ ಕನಿಷ್ಠ ಒಂದು ವಾರ ತಿನ್ನುವಷ್ಟು ಸಾಧ್ಯವಾದಷ್ಟು ಆಹಾರ ಮತ್ತು ನೀರನ್ನು ಸಂಗ್ರಹಿಸಿ ಪ್ರವಾಹದ ನೀರಿನಲ್ಲಿ ಮಕ್ಕಳನ್ನು ಆಟಆಡಲು ಬಿಡಬೇಡಿ
ಹಾನಿಗೊಳಗಾದ ವಿದ್ಯುತ ವಸ್ತುಗಳು ಬಳಸದೆ ಅವುಗಳನ್ನು ಎಲ್ಲಾ ಸ್ವಿಚ್ಚಗಳನ್ನು ಆಫ ಮಾಡಿ ಒದ್ದೆಯಾದ ವಿದ್ಯುತ ಕಂಬಗಳು ತಂತಿಗಳು ತೀಕ್ಷಣವಾದ ವಸ್ತುಗಳು ಮುಟ್ಟಬೇಡಿ
ಜಲಾವೃತ ನೆರೆಪಿಡಿತ ಸಂಭವನೀಯ ಪ್ರದೇಶದ ಹೆರಿಗೆ ನಿರೀಕ್ಷಿತ ದಿನ ತುಂಬಿದ ಗರ್ಭಿಣಿಯರು ಸುರಕ್ಷಿತ ಹೆರಿಗೆಗಾಗಿ ಸಮೀಪದ ಸರ್ಕಾರಿ ಹೆರಿಗೆಯ ಸೇವಾ ಕೇಂದ್ರಗಳು 24*7 ಕೇಂದ್ರ ಹಾಗೂ ತಾಲೂಕ ಮತ್ತು ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುವ ಮೂಲಕ ಸುರಕ್ಷಿತ ಹೆರಿಗೆ ಮಾಡಿಕೊಂಡು ತಾಯಿ ಮಗುವಿನ ಜೀವ ಉಳಿಸುವಲ್ಲಿ ದೊಡ್ಡ ಪಾತ್ರವಿದೆ ಒಂದು ವೇಳೆ ನಿರ್ಲಕ್ಷ ಮಾಡಿದರೆ ಹಳ್ಳ ಕೊಳ್ಳ ರಭಸವಾಗಿ ಉಕ್ಕಿ ಹರಿಯುವ ನದಿಗಳ ನೀರು ರಸ್ತೆಗಳ ಸಂಪರ್ಕ ಕಡಿತಗೊಂಡು ತಾಯಿ ಮರಣ ಶಿಶುಮರಣ ಆಗದಂತೆ ಸುರಕ್ಷಿತ ಹೆರಿಗೆ ಕಾಪಾಡುವುದು ಗರ್ಭಿಣಿ ತಾಯಂದಿರ ಹಾಗೂ ಕುಟುಂಬಸ್ಥರ ಪ್ರಮುಖ ಪಾತ್ರವಾಗಿದೆ.
ವಯೋವೃದ್ದರು.ಚಿಕ್ಕ ಮಕ್ಕಳ ತಾಯಂದಿರು ಗಂಭೀರ ಕಾಯಿಲೆಯಿಂದ ಬಳಲುವವರು ಸುರಕ್ಷಿತ ಪ್ರದೇಶಗಳಲ್ಲಿರುವ ತಮ್ಮ ಸಂಬಂಧಿಕರ ಮನೆಗಳಲ್ಲಿ ತಂಗುವಿಕೆ ಅನಿವಾರ್ಯವಾಗಿದೆ.
ಗಂಜಿ ಕೇಂದ್ರಗಳಲ್ಲಿ ಬಡವ ಶ್ರೀಮಂತ ಮೇಲ್ವರ್ಗ ಕೇಳುವರ್ಗ ಯಾವುದೇ ಭಾವನೆ ಇಲ್ಲದೆ ಪರಸ್ಪರ ಸಹಕಾರ ಸಹಬಾಳ್ವೆ ಮನೋಭಾವನೆಯೊಂದಿಗೆ ನೆರೆ ಸಂತ್ರಸ್ತರ ಕಾಳಜಿ ಕೇಂದ್ರ ನಿರ್ವಹಣಾಧಿಕಾರಿಗಳಿಗೆ ಸಹಕರಿಸಿ.
ರಸ್ತೆಗಳು ಮೇಲೆ ಹರಿಯುವ ನೀರಿನ ಆಳವಾದ ನೀರನ್ನು ಪ್ರವೇಶಿಸಬೇಡಿ ನೀರಿನ ಆಳ ಕೋಲಿನಿಂದ ಪರೀಕ್ಷಿಸಿ , ಸುರಕ್ಷಿತ ಆಶ್ರಯಗಳಿಂದ ಅಧಿಕಾರಿಗಳು ಹಿಂತಿರುಗಲು ಸೂಚಿಸಿದಾಗ ಮಾತ್ರ ಮನೆಗೆ ಹಿಂತಿರುಗಿ ಪ್ರವಾಹದ. ಸಮಯದಲ್ಲಿ. ನಂತರ ಹಾವುಗಳು ತಮ್ಮ ಬದುಕಿನ ಸಂರಕ್ಷಣೆಗೆ ಮನೆಗಳ ಹತ್ತಿರ ಬಂದಾಗ ನಮ್ಮ ಗರಿಯದಂತೆ ಹಾವು ಕಚ್ಚುವುದು ಸಾಮಾನ್ಯ ಪ್ರಸ್ತುತ ಸಂದರ್ಭದಲ್ಲಿ ಗಿಡಮೂಲಿಕೆ ಔಷಧಿ ನೀರು ಮಂತ್ರಿಸುವುದು , ಧಾರಾ ಕಟ್ಟುವುದು ಮೂಢನಂಬಿಕೆಗಳಿಗೆ ಬಲಿಯಾಗದೆ ಹತ್ತಿರದ ತಾಲೂಕ ಜಿಲ್ಲಾಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ದಿನದ 24 ಗಂಟೆಗಳ ಕಾಲ ಉಚಿತ ಚಿಕಿತ್ಸೆ ಸೌಲಭ್ಯ ಪಡೆದುಕೊಳ್ಳುವ ಮೂಲಕ ಅಮೂಲ್ಯವಾದ ಜೀವ ಉಳಿಸಿಕೊಳ್ಳಿ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಸ್ಥಳೀಯ ಸರಕಾರ ಮುತುವರ್ಜಿ ವಹಿಸಿ ಗ್ರಾಮದ ಆರೋಗ್ಯಕರ ಜೀವನಕ್ಕಾಗಿ ಆರೋಗ್ಯ ಇಲಾಖೆಯ ನಿಯಮಗಳು ಅನುಷ್ಠಾನಗೊಳಿಸಿ ಇಲಾಖೆಯೊಂದಿಗೆ ಕೈಜೋಡಿಸಿ ಪಂಚಾಯತ ರಾಜ ವ್ಯವಸ್ಥೆ ಸೇವೆ ಸಲ್ಲಿಸಿದರೆ ಅರ್ಥಪೂರ್ಣವಾಗಿ ಮಾನ್ವಿಯತೆ ಸಾರ್ಥಕತೆ. ಸೇವೆಗೆ ಮೆರುಗು ಬರುವುದು.
ಪ್ರವಾಹ ದಿಂದ ಜಲ ಮಾಲಿನ್ಯ ಕಲುಷಿತ ನೀರಿನಿಂದ ಕರುಳಿನ ಸೋಂಕು.ಕಾಲರಾ. ಅತಿಸಾರ ಬೇದಿ.ವಾಕರಿಕೆ.ವಾಂತಿ. ಟೈಫಾಯಿಡ. ಜ್ವರ ಹೊಟ್ಟೆ ನೋವು ಮತ್ತು ಹೇಪಟೇಟೀಸ ಎ. ವೈರಸ ನಿಂದ ಜ್ವರ ಲಿವರ ಸೋಂಕು ಆಯಾಸ ಸುಸ್ತು ಲಕ್ಷಣಗಳು ಕಾಣಿಸುವುದು. ಮುಂಜಾಗ್ರತೆಗಾಗಿ ಕಾಯಿಸಿ ಆರಿಸಿದ ನೀರು. ಸುರಕ್ಷಿತ ನೀರು ಕುಡಿಯುವುದು.ರುಚಿ ಬಿಸಿ ಶುಚಿಯಾದ ಆಹಾರ ಪದಾರ್ಥಗಳು ಸೇವನೆ ಮಾಡುವುದು. ಅತಿಸಾರ ಬೇದಿ ಸಂದರ್ಭದಲ್ಲಿ ಮನೆಯಲ್ಲಿ ಸಿಗುವ ಪಾನಕ ದ್ರವ ಪದಾರ್ಥಗಳು ಲಿಂಬು ಶರಬತ ಸೇವನೆ ಮಾಡುವುದು ಖಾದ್ಯ ತೈಲ ಖರಿದ ಎಣ್ಣೆ ಪದಾರ್ಥಗಳು ಜಂಕ ಫುಡ ಗಳು ಸೇವನೆ ಮಾಡದೆ ಇರುವುದು.
ಜಲ ಪ್ರವಾಹದ ನಂತರ ತಗ್ಗುದಿನ್ನಿಗಳಲ್ಲಿ ಗುಂಡಿಗಳಲ್ಲಿ ನೀರು ನಿಲ್ಲುವ ಮೂಲಕ ರೋಗರುಜಿನಗಳ ಗೂಡು ಸೊಳ್ಳೆ ಗಳ ಮೂಲ ಉತ್ಪತ್ತಿ ತಾಣಗಳು ಕೀಟಜನ್ಯ ರೋಗವಾಹಕಗಳು ತಿಪ್ಪೆ ಗುಂಡಿಗಳಲ್ಲಿ.ಗಟಾರಗಳಲ್ಲಿ. ನಿಂತ ನೀರಲ್ಲಿ ಸೊಳ್ಳೆಗಳು ಕುಳಿತು ಮೊಟ್ಟೆ ಇಟ್ಟು ಉಚ್ಚಲೇರಿಯ ಕ್ಯೂ ಲೆಕ್ಸ. ಸೊಳ್ಳೆಗಳು ಉತ್ಪತ್ತಿಯಾಗಿ ಆನೆಕಾಲು ರೋಗಗಳು ಬರುವ ಸಾಧ್ಯತೆ ತಡೆಗಟ್ಟಲು ಮುಂಜಾಗ್ರತೆಗಾಗಿ ಗಟಾರಗಳು ಮುಚ್ಚಿ ನೀರು ನಿಲ್ಲದಂತೆ ಸರಾಗವಾಗಿ ಹರಿದು ಹೋಗುವಂತೆ ಮಾಡುವುದು.
ಗ್ರಾಮಗಳ ಚರಂಡಿಗಳಲ್ಲಿ ನಿಂತ ನೀರಲ್ಲಿ ಹೆಣ್ಣು ಅನಾ ಫೆಲಿಸ ಸೊಳ್ಳೆ ಉತ್ಪತ್ತಿಯಾಗಿ ಮಲೇರಿಯಾ ಕಾಯಿಲೆಗಳು ಹರಡುವ ಮುಂಜಾಗ್ರತೆಗಾಗಿ ಚರಂಡಿಗಳು ಸ್ವಚ್ಛಗೊಳಿಸುವುದು
ಡೆಂಗ್ಯೂ ಚಿಕನ ಗುನ್ಯಾ. ಇತರೆ ಸಾಂಕ್ರಾಮಿಕ ರೋಗಗಳು ತಡೆಗಟ್ಟಲು ಮುಂಜಾಗ್ರತ ಕ್ರಮಕ್ಕಾಗಿ ದೈನಂದಿನ ದಿನಬಳಕೆ ವಸ್ತುಗಳು ಹಾಳಾದ ಬ್ಯಾರಲುಗಳು ಡ್ರಮಗಳಲ್ಲಿ. ತೆಂಗಿನ ಚಿಪ್ಪು ಟೈಯರಗಳಲ್ಲಿ ನೀರು ನಿಂತಲ್ಲಿ ಸೂಕ್ತವಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಸೊಳ್ಳೆಗಳು ಉತ್ಪತ್ತಿಯಾದಂತೆ ಮುಂಜಾಗ್ರತ ಕ್ರಮ ವಹಿಸುವುದು. ಸಂಘ ಸಂಸ್ಥೆಗಳು ಯುವಕರು ಸಾಮಾಜಿಕ ಧಾರ್ಮಿಕ ಮುಖಂಡರು ಅಸಹಾಯಕ ಜನರನ್ನು ಸಹಾಯ ಮಾಡುವ ಮೂಲಕ ಜಲ ಪ್ರವಾಹ ಪೀಡಿತ ಯುದ್ದೋಪರೀತಿಯಲ್ಲಿ ಗೆಲ್ಲೋದು ನಮ್ಮೆಲ್ಲರ ಜವಾಬ್ದಾರಿ ಒಳಿತು ಮಾಡು ಮನುಜ ನೀನಿರುವುದು ಮೂರು ದಿವಸ ಸತ್ತ ಬಳಿಕ ಸುಟ್ಟೆ ಹಾಕುತ್ತಾರೆ ನಿನ್ನ ಚಟ್ಟ ಕಟ್ಟುತ್ತಾರ ಸುಟ್ಟೆ ಹಾಕುತ್ತಾರ ಒಳಿತು ಮಾಡು ಮನುಜ ನೀ ಒಳಿತು ಮಾಡು.
ದೇಶದ ಗಂಡಾಂತರ ಪರಿಸ್ಥಿತಿಯಲ್ಲಿಸಂವಿಧಾನಾತ್ಮಕವಾಗಿ ಪ್ರಕೃತಿ ವಿಕೋಪ ಭೂಕಂಪ ಜಲಾವೃತ ನೆರೆಪೀಡಿತ ಪ್ರದೇಶದ ಗಡಿ ಸೀಮೆ ಸರಹದ್ದುಗಳಲ್ಲಿ ಶತ್ರುಗಳು ದಾಳಿ ಮಾಡಿದಾಗ ಯುದ್ದೋಪ ರೀತಿಯಲ್ಲಿ ಸೇವೆಗೆ ಪ್ರತಿಯೊಬ್ಬ ನಾಗರಿಕನು ಸೇರಿದಂತೆ. ಸಂಘ ಸಂಸ್ಥೆಗಳು ಮಠಾಧೀಶರುಗಳು ಯುವ ಮುಖಂಡರು. ಜಲಾವೃತ ಪ್ರದೇಶದಲ್ಲಿ ನೆರೆಪೀಡಿತ ಪ್ರದೇಶಗಳಲ್ಲಿ ಜೀವ ರಕ್ಷಣೆ ಮತ್ತು ಆರೈಕೆಗೆ ಸಂತ್ರಸ್ತರ ನೆರವಿಗೆ ಸೇವೆಗೆ ಸನ್ನದರಾಗುವ ಅನಿವಾರ್ಯತೆಯಾಗಿರುತ್ತದೆ
ಪ್ರವಾಪಿಡಿತ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಸರ್ಕಾರಿ ನೌಕರರ ಅಧಿಕಾರಿ ಸಿಬ್ಬಂದಿಗಳಿಗೆ ಆರೋಗ್ಯಕರ ಸೇವೆ ಸಲ್ಲಿಸಲು ಸಮುದಾಯದ ಸಹಕಾರ ಬಹಳ ಮುಖ್ಯವಾಗಿರುತ್ತದೆ
ಇನ್ನು ಕೆಲವು ಕುಂಭಕರ್ಣ ನಿದ್ದೆಯಲ್ಲಿರುವವರಿಗೆ ಮಾಧ್ಯಮ ಮಿತ್ರರು ಪತ್ರಿಕಾ ಮಾಧ್ಯಮದವರು ಸರ್ಕಾರದ 4ನೇ ಅಂಗವಾಗಿ ಎಚ್ಚರಿಕೆ ಗಂಟೆ ಬಾರಿಸುತ್ತಿರುವುದು ಶ್ಲಾಘನೀಯ. ಆದರೆ ನೈಜ ಪ್ರಾಮಾಣಿಕ ಸೇವೆ ಸಲ್ಲಿಸುವ ಅಧಿಕಾರಿ ನೌಕರರ ಸೇವೆ ಪರಿಗಣಿಸಿ ನೌಕರರ ಪರಿಸ್ಥಿತಿ ಕೂಸಾದಾಗ ಅರ್ಥೈಸಿಕೊಂಡು ಸುದ್ದಿ ಪ್ರಸಾರ ಮಾಡಿದರೆ ಅಧಿಕಾರಿ ನೌಕರರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಹಾಗೂ ಸಮುದಾಯದ ತಪ್ಪು ತಿಳುವಳಿಕೆ ಹೋಗಲಾಡಿಸುವುದು ಮಾಧ್ಯಮ ಮಿತ್ರರ ಪಾತ್ರ ಬಹಳ ಮುಖ್ಯವಾಗಿದೆ
ಧಾರ್ಮಿಕ ಹಬ್ಬ ಹರಿದಿನಗಳಲ್ಲಿ ನದಿ ದಡದಲ್ಲಿರುವ ಮನೆಗಳ ಕುಟುಂಬಸ್ಥರು ದೇವಸ್ಥಾನ ಪೂಜಾರಿಗಳು ಭಾವ ಪರವಶರಾಗಿ ಸುರಕ್ಷಿತ ಸ್ಥಳಗಳಿಗೆ ಹೋಗದೆ ಜೀವ ಹಾನಿ ಆಗದಂತೆ ಸರ್ಕಾರಿ ಅಧಿಕಾರಿಗಳ ನಿರ್ದೇಶನಗಳು ಪಾಲಿಸುವುದು ಅನಿವಾರ್ಯತೆಯಾಗಿದೆ
ವೈ.ಎಂ.ಪೂಜಾರ
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ
7090124287
ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕ ಬೆವನೂರ. ಇಂಡಿ ತಾಲೂಕು ವಿಜಯಪುರ ಜಿಲ್ಲೆ