ಹಿಂದೂತ್ವವಾದಿ ಬುದ್ದುಗೌಡ ಪಾಟೀಲ ನಿಧನ..!
ಇಂಡಿ: ಪಟ್ಟಣದ ಚನ್ನುಗೌಡ (ಬುದ್ದುಗೌಡ)
ಜಗದೇವಪ್ಪಗೌಡ ಪಾಟೀಲ (59) ಭಾನುವಾರ ತಮ್ಮ
ತೋಟದಲ್ಲಿ ಆಕಸ್ಮಿಕ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.
ಮೃತರು ತಮ್ಮ 19ನೇ ವಯಸ್ಸಿನಿಂದ ಬಿಜೆಪಿ ಪಕ್ಷದ
ಕಟ್ಟಾಳುಗಳಾಗಿ ಸೇವೆಸಲ್ಲಿಸಿದ್ದರು. ಅವರ ಸೇವೆ
ಪರಿಗಣಿಸಿ ಬಿಜೆಪಿ ಪಕ್ಷ ಎರಡು ಬಾರಿ ಪುರಸಭೆಗೆ ಟಿಕೆಟ
ನೀಡಿದ್ದು ಎರಡು ಬಾರಿಯೂ ಅವರ ಪತ್ನಿ ಸುಜಾತಾ ಅವರು ಸದಸ್ಯರಾಗಿ ಆಯ್ಕೆಯಾಗಿದ್ದರು.
ಮೃತರು ಪತ್ನಿ ಪುರಸಭೆ ಸದಸ್ಯೆ ಸುಜಾತಾ, ಇಬ್ಬರು
ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಜನೇವರಿ 1ರ ಸೋಮವಾರರಂದು ಬೆಳಿಗ್ಗೆ 10:00 ಘಂಟೆಗೆ ಅವರ ತೋಟದಲ್ಲಿ ನೆರವೆರುವದೆಂದು ಕುಟುಂಬ ಮೂಲಗಳಿಂದ
ತಿಳಿದುಬಂದಿದೆ.