ಬರಗೂಡಿ ಶಾಲೆಗೆ ಪ್ರೊಜೆಕ್ಟರ್ ಸ್ಕ್ರೀನ್ ದೇಣಗೆ
ಇಂಡಿ: ತಾಲೂಕಿನ ಬರಗೂಡಿ ಗ್ರಾಮದಲ್ಲಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಈಚೆಗೆ ಮುಂಬೈನ ಶೇಟ್ ತಾಪಿದಾಸ, ತುಳಸಿದಾಸ ಹಾಗೂ ವ್ರಜದಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ೧ ಲಕ್ಷದ ೮೦ ಸಾವಿರ ರೂಪಾಯಿ ಮೌಲ್ಯದ ಪ್ರೊಜೆಕ್ಟರ್ ಮತ್ತು ಟಚ್ ಸ್ಕ್ರೀನ್ ದೇಣ ಗೆ ನೀಡಲಾಯಿತು. ಈ ಟ್ರಸ್ಟ್ ಸಂಚಾಲಕ ವಿಶ್ವನಾಥ ಸಿಂದಗಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಈ ಸಾಮಗ್ರಿಗಳನ್ನು ದೇಣ ಗೆ ನೀಡಿ ಶಿಕ್ಷಣ ಪ್ರೇಮ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಶಿಕ್ಷಕರಾದ ಪರಮೇಶ್ವರ ಪಾಟೀಲ, ಮಡಸನಾಳ ಗುರುಗಳು, ಎಸ್ ಡಿಎಂಸಿ ಅಧ್ಯಕ್ಷರಾದ ಸುಧೀರ್ ಕ್ಷತ್ರಿ, ಎಸ್ ಡಿಎಂಸಿ ಉಪಾಧ್ಯಕ್ಷ ಈರಪ್ಪ ಹರಳಯ್ಯ, ಎಸ್ ಡಿಎಂಸಿ ಸದಸ್ಯರಾದ ಶಿವಾಜಿ ಪೂಜಾರಿ, ಲಕ್ಷ್ಮಣ ಫುಲಾರಿ, ವಿಲಾಸ ಲಿಂಗಸೂರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರತನ್ ಶಾ ಲಿಂಗಸೂರ, ಗ್ರಾಮ ಪಂಚಾಯಿತಿ ಸದಸ್ಯರಾದ ಭೀಮಶ್ಯಾ ವಾಲಿಕಾರ, ಸುರೇಶ್ ಯಾದವಾಡ, ಪ್ರಶಾಂತಗೌಡ ಪಾಟೀಲ, ಶಾಲೆಯ ಮುಖ್ಯೋಪಾಧ್ಯಾಯ ಎಸ್.ಬಿ. ಪಾಟೀಲ, ಹಿರಿಯ ಶಿಕ್ಷಕರಾದ ಅಶೋಕ ಬನಸೋಡೆ, ಹಾಜಿಮಲಂಗ ಗಾಯಕವಾಡ, ಹಣಮಂತ ಬನಸೋಡೆ, ಎ.ಎ. ಚೌಧರಿ, ಶಿಕ್ಷಕಿಯರಾದ ಸುಭದ್ರಾ ಗಿರಣ ವಡ್ಡರ, ನೀಲಮ್ಮ ಪತ್ತನ್ನವರ, ಸಹ ಶಿಕ್ಷಕ ಆನಂದ ವಾಲಿಕಾರ, ಸಿ.ಎಂ. ಮೇತ್ರಿ ಉಪಸ್ಥಿತರಿದ್ದರು.
ಇಂಡಿ ತಾಲೂಕಿನ ಬರಗೂಡಿ ಗ್ರಾಮದ ಎಸ್.ಕೆ.ಹೆಚ್.ಪಿ. ಶಾಲೆಗೆ ಮುಂಬೈನ ಸಂಸ್ಥೆಯ ವತಿಯಿಂದ ಪಾಠೋಪಕರಣ ದೇಣಿಗೆ ನೀಡಿದ ಕ್ಷಣ.



















