ಪ್ರೊ. ಸಿದ್ದು ಸಾವಳಸಂಗ ಅವರಿಗೆ “ರಾಷ್ಟ್ರಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ”
ರಾಯಚೂರು : ಸುಮಾರು 27 ವರ್ಷದ ವೃತ್ತಿ ಬದುಕಿನ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಮೋಘ ಸೇವೆಯನ್ನು ಪರಿಗಣಿಸಿ ಪ್ರೋ ಸಿದ್ದು ಸಾವಳಸಂಗ ಅವರಿಗೆ ರಾಷ್ಟ್ರೀಯ ಶಿಕ್ಷಣ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ರಾಯಚೂರಿನ ಬೆಳಕು ಸಾಹಿತ್ಯ, ಸಾಂಸ್ಕ್ರುತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ (ರಿ) ವತಿಯಿಂದ ಕೊಡುವ “ರಾಷ್ಟಮಟ್ಟದ ಶಿಕ್ಷಣ ರತ್ನ” ಪ್ರಶಸ್ತಿಯನ್ನು ಫೆ.18 ರವಿವಾರ ರಂದು ವಿಜಪುರದ ಪ್ರೊ. ಸಿದ್ದು ಸಾವಳಸಂಗ ಅವರಿಗೆ ಬೆಳಕು ಅಂತರ್ ರಾಜ್ಯ ಸಮ್ಮೇಳನದಲ್ಲಿ ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರದಾನ ಮಾಡಲಾಯಿತು.
ಈ ಪ್ರಶಸ್ತಿಯನ್ನು ಸಾವಿರಾರು ಜನರ ಪ್ರೇಕ್ಷಕರ ಮಧ್ಯದಲ್ಲಿ ಬೆಳಕು ಸಂಘದ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡರ ಹಾಗೂ ಬೆಳಕು ಸಮ್ಮೇಳನದ ಅಧ್ಯಕ್ಷರಾದ ಡಾ. ದೇವೇಂದ್ರಮ್ಮ ಅವರು ನೀಡಿದರು.
ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸಾವಳಸಂಗ ಅವರು 27 ವರ್ಷಗಳ ಸೇವೆಯಲ್ಲಿ ಶಿಕ್ಷಣಕ್ಕಾಗಿ ಸಲ್ಲಿಸಿದ ಮಹತ್ತರ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರೊ. ಸಿದ್ದು ಸಾವಳಸಂಗ ವೃತ್ತಿಯಿಂದ ಉಪನ್ಯಾಸಕರಾಗಿದ್ದರೆ ಪ್ರವೃತ್ತಿಯಿಂದ ಅವರೊಬ್ಬ ಹಿರಿಯ ಸಾಹಿತಿ. ಸುಮಾರು ಮೂವತ್ತು ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಅವರು ಸಾಹಿತ್ಯದ ಎಲ್ಲ ಪ್ರಕಾರಗಳಾದ ಕವನ, ಹನಿಗವನ, ಕತೆ, ಲೇಖನ, ಆಧುನಿಕ ವಚನಗಳು, ತಂಕಾ, ತನಗ, ಹೈಕು ಹಾಗೂ ವಿಮರ್ಶಾತ್ಮಕ ಬರಹಗಳನ್ನು ನಾಡಿನ ಹಲವಾರು ಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ. ಈಗಾಗಲೇ “ಹೃದಯ ಹೂವಿನ ಹಂದರ” ಹನಿಗವನ ಸಂಕಲನ ಹಾಗೂ “ವಚನ ಸಂಜೀವಿನಿ” ಆಧುನಿಕ ವಚನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಸದರಿ ಉಪನ್ಯಾಸಕರು ಶಿಕ್ಷಣ ಹಾಗೂ ಸಾಹಿತ್ಯ ಸೇವೆಗಾಗಿ ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ ಸರಕಾರೇತರ ಸಂಘಸಂಸ್ಥೆಗಳು ಅವರಿಗೆ ಈಗಾಗಲೇ “ರಾಷ್ಟ್ರರತ್ನ ಪುರಸ್ಕಾರ” , “ಭಾರತ ಸೇವಾ ಪುರಸ್ಕಾರ” ಹಾಗೂ “ರಾಷ್ಟ್ರೀಯ ಶಿಕ್ಷಣ ಪ್ರಶಸ್ತಿ” ಯನ್ನು ಇದೇ 2024 ರಲ್ಲಿ ನೀಡಿ ಗೌರವಿಸಿವೆ. ಈಗ ಬಂದಿರುವ “ರಾಷ್ಟ್ರಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ” ಅವರ ಸಾಧನೆಗೆ ಮತ್ತೊಂದು ಗರಿ ಮೂಡಿದಂತೆ. ಪ್ರೊ. ಸಿದ್ದು ಸಾವಳಸಂಗ ಅವರ ಸ್ನೇಹಿತರು ಹಾಗೂ ಬಂಧುಗಳು ಶುಭ ಹಾರೈಸಿ ಮತ್ತಷ್ಟು ಸಾಧನೆ ಮಾಡಲೆಂದು ಪ್ರೋತ್ಸಾಹ ನೀಡಿದ್ದಾರೆ.