ಸ್ವಾತಂತ್ರ್ಯ ರಕ್ಷಿಸುವುದು ನಮ್ಮೇಲ್ಲರ ಕರ್ತವ್ಯ..! Under 19 ಖೋ ಖೋ ಕ್ರೀಡಾಪಟು..
ಮಕ್ಕಳು ಗ್ರಾಮದ ಆಸ್ತಿ..! ಪ್ರಜ್ವಲ್
ಸರ್ವತೋಮುಖ ಶಿಕ್ಷಣ ಅತ್ಯಗತ್ಯ; ಸಂಗನಗೌಡ ಬಿರಾದಾರ
ಇಂಡಿ : ಕ್ರೀಡೆ ಎಂಬುವುದು ಬರೆ ಆಟವಲ್ಲ, ನಾವು ದೇಶಕ್ಕೆ ನೀಡುವ ಅತೀ ಅಮೂಲ್ಯವಾದ ಕೊಡುಗೆ ಎಂದು ಅಂಡರ್ 19 ಭಾರತೀಯ ಖೋ ಖೋ ತಂಡದ ಆಟಗಾರ ಸಾಗರ ವಾಘಮೋರೆ ಹೇಳಿದರು.
ತಾಲ್ಲೂಕಿನ ಹಿರೇರೂಗಿ ಗ್ರಾಮದ ಪ್ರತಿಷ್ಠಿತ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭೭ ನೇ ಸ್ವತಂತ್ರ್ಯೋತ್ಸವದ ಧ್ವಜಾರೋಹಣ ನೆರೆವರಿಸಿ ಮಾತಾನಾಡಿದರು. ವ್ಯಾಪಾರಕ್ಕೆ ಬಂದ ಬ್ರಿಟಿಷರು ನಮ್ಮ ದೇಶವನ್ನು ಕೊಳ್ಳೆ ಮಾಡುವುದರ ಜೊತೆಗೆ ನಮ್ಮನ್ನ
ಸುಮಾರು ೩ ನೂರು ವರ್ಷಗಳ ಕಾಲ ಆಳ್ವಿಕೆ ಮಾಡಿ ಗುಲಾಮರನ್ನಾಗಿ ಮಾಡಿದರು. ಆದರೆ ಮಹಾತ್ಮ ಗಾಂಧಿಜಿ, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ, ಪಟೇಲ್, ಜವಾಹರಲಾಲ್ ನೆಹರು,
ಲಾಲ್ ಬಹದ್ದೂರ್ ಶಾಸ್ತ್ರಿ, ಭಗತ್ ಸಿಂಗ್, ದಾದಾ ಭಾಯಿ ನವರೋಜಿ,ಬಿಪಿನ್ ಚಂದ್ರ ಪಾಲ್ ದಂತಹ ದೇಶ ಭಕ್ತರ ತ್ಯಾಗ ಬಲಿದಾನದಿಂದ ದೋರಕಿದ ಸ್ವಾತಂತ್ರ್ಯ ರಕ್ಷಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಎಂಬಿಬಿಎಸ್ ಗೆ ಆಯ್ಕೆಯಾದ
ಪ್ರಜ್ವಲ್ ಬೈರಾಮಡಗಿ ಅವರು, ಮಹಾತ್ಮ ಗಾಂಧಿಜಿ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತಾನಾಡಿದರು. ಮಕ್ಕಳು ಈ ರಾಷ್ಟ್ರದ ಆಸ್ತಿ, ಮಕ್ಕಳಿಗೆ ಒಳ್ಳೆಯ ಉತ್ತಮವಾದ ಮೌಲ್ಯಾಧಾರಿತ ಶಿಕ್ಷಣ ಕೊಡುವುದು ಅತೀ ಮುಖ್ಯ. ಒಂದು ವೇಳೆ ನಿರಾಕರಿಸಿದ್ರೆ ಅದು ಕಾನೂನು ರೀತಿಯಲ್ಲಿ ಅಪರಾದ ಅದು ಕೂಡಾ ಪಾಲಕರ ಗಮನಕ್ಕೆ ಇರಬೇಕು ಎಂದು ಒತ್ತು ಕೊಟ್ಟು ಹೇಳಿದರು. ಇನ್ನೂ ಶಿಕ್ಷಕರು ಮಕ್ಕಳ ಮನೋಭಾವನೆ ತಕ್ಕ ಭೋದನೆ ಮಾಡಬೇಕು. ಮಕ್ಕಳು ಆಸಕ್ತಿಯಿಂದ, ಶ್ರಮಪಟ್ಟು ಓದಬೇಕು. ಮುಂದೆ ನಮ್ಮ ಭವಿಷ್ಯ ಕೂಡ ಅಷ್ಟೇ ಉತ್ತಮವಾಗಿರುತ್ತದೆ. ಎಲ್ಲಾ ತಂದೆ ತಾಯಿಂದಿರು ಮಕ್ಕಳನ್ನು ಓದಿಸುವಲ್ಲಿ ಸಾಕಷ್ಟು ಶ್ರಮ ಪಡುತ್ತಾರೆ. ಆ ಶ್ರಮವನ್ನು ವ್ಯರ್ಥ ಆಗದಂತೆ ಚೆನ್ನಾಗಿ ಅಧ್ಯಯನ ಮಾಡಿ, ಒಳ್ಳೆಯ ಸಾಧನೆ ಮಾಡುವುದೇ ತಂದೆ ತಾಯಿಗೆ ಕೊಡುವ ದೊಡ್ಡ ಗೌರವ ಎಂದು ಮಕ್ಕಳಲ್ಲಿ ಶಿಕ್ಷಣ ಬಗ್ಗೆ ಅರಿವು ಮೂಡಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಸಂಗನಗೌಡ ಬಿರಾದಾರ ಮಾತಾಡಿದ ಅವರು, ಗ್ರಾಮೀಣ ಭಾಗದಲ್ಲಿ ಅತೀ ಅತ್ಯುತ್ತಮ ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ ಒದಗಿಸುವುದರ ಜೊತೆಗೆ ಸರ್ವತೋಮುಖ ಶಿಕ್ಷಣ ನೀಡುವ ಶಾಲೆಯಲ್ಲಿ ಪ್ರತಿಷ್ಠತ ಸಿದ್ದೇಶ್ವರ ಶಾಲೆ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ರೂಗಿ ಅಧ್ಯಕ್ಷೀಯ ಮಾತುಗಳು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜೆಟ್ಟಪ್ಪ ಮರಡಿ, ರಾಜಶೇಖರ ಡಂಗಿ, ಹಾಲಿ ಸದಸ್ಯ ಭೀಮರಾಯ ಜೇವೂರ, ಮಾಜಿ ಸದಸ್ಯ ಇಲಾಯಿ ಬಾಗವಾನ, ಗುರಪ್ಪ ಅಗಸರ, ಶಂಕರ್ ಮಾಡಿವಾಳ, ಬಾಬು ಮಾವಿನಹಳ್ಳಿ, ಜೆಟ್ಟಪ್ಪ ಮೂಲಿಮನಿ ಇನ್ನೂ ಅನೇಕ ಮುಖಂಡರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಇನ್ನೂ ಮುಖ್ಯ ಗುರು ಶ್ರೀಕಾಂತ್ ಕೊರ್ಕಿ ಸ್ವಾಗತಿಸಿದರು. ಸಾವಿತ್ರಿ ಹೊಸಮನಿ ನಿರೂಪಿಸಿದರು. ಗುರುಭಾವಿ ಹೊಸಮನಿ ವಂದಿಸಿದರು. ಸಹ ಶಿಕ್ಷಕಿ ಪೂಜಾ ರೂಗಿ ಹಾಗೂ ವಾಣಿಶ್ರೀ ರೂಗಿ ಉಪಸ್ಥಿತರಿದ್ದರು.