ಮೂಢನಂಬಿಕೆಗಳಿಗೆ ಜೋತು ಬೀಳದೆ ಆಧುನಿಕ ಭಾರತದ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಬೇಕು : ಅಧ್ಯಕ್ಷ ರೆವಣ್ಣ ಹತ್ತಳ್ಳಿ
ಇಂಡಿ : 12ನೇ ಶತಮಾನದ ಕಾಲದಲ್ಲಿ ಭಾಷೆಯಲ್ಲಿ ಸಾಕಷ್ಟ್ಟು ಬದಲಾವಣೆ ಗಳಾಗಿವೆ. ನಮ್ಮಲ್ಲಿರುವ ಮೂಢನಂಬಿಕೆಗಳಿಗೆ ಜೋತು ಬೀಳದೆ ಆಧುನಿಕ ಭಾರತದ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಬೇಕು. ಕಾಯಕ ನಿಷ್ಠೆಯಲ್ಲಿ ನುಲಿಯ ಚಂದಯ್ಯ ರಂತಹ ಶರಣರ ತತ್ವ ಸಿದ್ದಾಂತಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿಯ ತಾಲ್ಲೂಕು ಅಧ್ಯಕ್ಷ ರೇವಣ್ಣ ಹತ್ತಳ್ಳಿ ಹೇಳಿದರು.
ತಾಲ್ಲೂಕಿನ ಲಚ್ಯಾಣ ಗ್ರಾಮ ಪಂಚಾಯತ್ ವ್ಯಾಪಿಯ ಬಜಂತ್ರಿ ವಸ್ತಿಯಲ್ಲಿ ಕಾಯಕಯೋಗಿ ಶ್ರೀ ನೂಲಿ ಚಂದಯ್ಯನವರ 918 ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚಾಣೆ ಮಾಡಿ ಮಾತನಾಡಿದರು.
ಕಾಯಕದಲ್ಲಿ ಕೈಲಾಸ ಕಂಡ ಮಹಾನ್ ಶರಣರು ನುಲಿಯ ಚಂದಯ್ಯ ಅವರು. ಲಿಂಗ ನಿಷ್ಠೆಗಿಂತ ಕಾಯಕ ನಿಷ್ಠೆ ಮೇಲು ಎಂದು ಅವರು ಸಾರಿದ್ದಾರೆ. ತನು ಮನ ಧನದಿಂದ ವಚನ ಸಾಹಿತ್ಯಕ್ಕೆ ಶ್ರಮಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೊರಮ ಸಮಾಜದ ತಾಲ್ಲೂಕ ಉಪಾಧ್ಯಕ್ಷ ಸಿದ್ದಲಿಂಗ ರಾ ಬಜಂತ್ರಿ ಅವರ ನೇತೃತ್ವದಲ್ಲಿ ಹಾಗೂ ಸಮಾಜದ ಮುಖಂಡರು ಕಾಯಕಯೋಗಿ ಶ್ರೀ ನೂಲಿ ಚಂದಯ್ಯನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಪ್ರಸಾದ ವಿತರಿಸಿ ಆಚರಿಸಿದರು.
ಈ ಸಂಧರ್ಭದಲ್ಲಿ ಸಮಾಜದ ಮುಖಂಡ ಸಿದ್ದಪ್ಪ ಗಂ ಬಜಂತ್ರಿ (ಲಚ್ಯಾಣ ) ಬಾಬು ವಿ ಬಜಂತ್ರಿ (ಲಚ್ಯಾಣ ) ಜಗನ್ನಾಥ ಬ ಬಜಂತ್ರಿ, ಪಾಂಡು ಭಜಂತ್ರಿ, ಗೌರಿಶಂಕರ್ ಬಾಬುಳಗಾoವ್ ,ಸಿದ್ದಪ್ಪ ಸಿ ಬಜಂತ್ರಿ (ಲಚ್ಯಾಣ )ಭೀಮರಾಯ ಹ ಬಜಂತ್ರಿ (ಲಚ್ಯಾಣ)ಬಸಪ್ಪ ಭೀ ಬಜಂತ್ರಿ (ಆಳೂರ) ಭೀಮಾಶಂಕರ ಕ ಬಜಂತ್ರಿ (ಲಚ್ಯಾಣ) ಮಾಳಪ್ಪ ಹು ಬಜಂತ್ರಿ(ಲಚ್ಯಾಣ )ಚಂದ್ರಕಾಂತ ಸಿ ಬಜಂತ್ರಿ (ಲಚ್ಯಾಣ ) ಅಂಬಾದಾಸ ಭೀ ಬಜಂತ್ರಿ (ಆಳೂರ) ಈಶ್ವರಪ್ಪ ಶಿ ಬಜಂತ್ರಿ (ಲಚ್ಯಾಣ) ಸೇರಿದಂತೆ ಅನೇಕ ಜನರು ಪಾಲ್ಗೊಂಡಿದ್ದರು.