ಗೋವಾ ರಾಜ್ಯದಲ್ಲಿ ನಡೆಯಲಿರುವ ಕರ್ನಾಟಕ ಪತ್ರಕರ್ತರ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಭಾಗವಹಿಸಿ : ಅಧ್ಯಕ್ಷ ಬಂಗಾರಪ್ಪ
ವರದಿ: ಚೇತನ್ ಕುಮಾರ್ ಎಲ್, ಚಾಮರಾಜನಗರ
ಹನೂರು : ಪತ್ರಕರ್ತರ ಸದಾಕಾಲವೂ ಚಟುವಟಿಗಳಿಂದ ಕೂಡಿರಬೇಕು ಹಾಗೇಯೆ ತಮ್ಮ ಸಂಘಟನೆಗಳ ಮೂಲಕ ಉತ್ತಮ ಮಾದರಿಯ ಕೆಲಸ ಕಾರ್ಯ ಮಾಡಬೇಕು ಎಂದು ಕರ್ನಾಟಕ ಸಂಘದ ತಾಲೂಕು ಅಧ್ಯಕ್ಷರಾದ ಬಂಗಾರಪ್ಪ ತಿಳಿಸಿದರು .
ಹನೂರು ಪಟ್ಟಣದ ಕರ್ನಾಟಕ ಪತ್ರಕರ್ತರ ಕಛೇರಿಯಲ್ಲಿ ಮಾತನಾಡಿದ ಅವರು ನಮ್ಮ ಸಂಘದ ಚಾಮರಾಜ ನಗರ ಜಿಲ್ಲೆಯ ಹಾಗೂ ಕರ್ನಾಟಕದ ಪತ್ರಕರ್ತರ ಸಂಘದ ಗೌರವಾನ್ವಿತ ಸಂಪಾದಕರು ಹಾಗೂ ವರದಿಗಾರರು ಪೆಬ್ರವರಿ ೧೩ / ೧೪/ ೧೫ ಈ ಮೂರು ದಿನ ನಡೆಯುವ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಜಿಲ್ಲಾ ಶಾಖೆ ಹಾಗೂ ಕೊಪ್ಪಳ ಜಿಲ್ಲಾ ಸಹಯೋಗದಲ್ಲಿ ರಾಷ್ಟ್ರೀಯ ಕಾರ್ಯ ಕಾರಿಣಿ ಸಭೆ ಹಾಗೂ ರಾಷ್ಟ್ರೀಯ ಸಣ್ಣ ಮತ್ತು ಮಾಧ್ಯಮ ಪತ್ರಿಕೆಗಳ ಸಮ್ಮೇಳನ ಹಾಗೂ ಗೋವಾ ರಾಜ್ಯದ ಜರ್ನಲಿಸ್ಟ್ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಕರ್ನಾಟಕ ಪತ್ರಕರ್ತ ಸಂಘದ ಮಾಧ್ಯಮ ಸ್ನೇಹಿತರು ಭಾಗವಹಿಸಲು ಈ ಮೂಲಕ ಕೋರಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಯುತ ಮುರುಗೇಶ್ ಶಿವಪೂಜಿ , ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಪ್ರಮೋದ್ ಪಿ ಸಾವಂತ್ ಕರ್ನಾಟಕದ ಗೌರವಾನ್ವಿತ ಸ್ಪೀಕರ್ ರವರಾದ ಯು ಟಿ ಖಾದರ್ ರವರು , ಸಚಿವರಾದಸಂತೋಷ್ ಲಾಡ್ , ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ ವಿ ಪ್ರಭಾಕರ್ ರವರು ಹಾಗೂ ಗಣ್ಯರುಗಳು ಭಾಗವಹಿಸಲಿದ್ದಾರೆ.
ಕರ್ನಾಟಕ ಪತ್ರಕರ್ತರ ಸಂಘದ ಎಲ್ಲಾ ಪತ್ರಕರ್ತರಿಗೂ ಶುಭವಾಗಲಿ ಎಂದು ಹನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಆರ್ ಮಂಜುನಾಥ್ ,ಮಾಜಿ ಶಾಸಕರುಗಳಾದ ಆರ್ ನರೇಂದ್ರ ರಾಜೂಗೌಡ ,ಪರಿಮಳ ನಾಗಪ್ಪ ,ಹಾಗೂ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ದತ್ತೇಶ್ ಕುಮಾರ್ ,ಉದ್ಯಮಿ ಪೊನ್ನಾಚಿ ರಂಗಸ್ವಾಮಿ, ಇನ್ನು ಮುಂತಾದವರು ಶುಭ ಹಾರೈಸಿದ್ದಾರೆ.