ಚಡಚಣ ಮೇಲೆ 20 ಕೇಸ್‌ಗಳಿವೆ.. ಎಸ್ಪಿ ಆನಂದಕುಮಾರ
ವಿಜಯಪುರ : ಭೀಮಾತೀರದ ನಟೋರಿಯಶ್ ಹಂತಕ ಮಲ್ಲಿಕಾರ್ಜುನ ಚಡಚಣ ಮೇಲೆ 20 ಕೇಸ್‌ಗಳಿವೆ ಎಂದು ಎಸ್ಪಿ ಎಚ್‌ಡಿ ಆನಂದಕುಮಾರ ಮಾಹಿತಿ ನೀಡಿದರು. ವಿಜಯಪುರ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೌಡಿಶೀಟರ್ ಸಾಹುಕಾರ್ ಮೇಲೆ 40 ಜನರು ಹತ್ಯೆಗೆ ಯತ್ನಿಸಿದ್ದರು. ಈ ಪ್ರಕರಣದಲ್ಲಿ 36 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಆದ್ರೇ, ಚಡಚಣ, ವಿಮಲಾಬಾಯಿ ಸೇರಿ ಇನ್ನಿಬ್ಬರು ಪರಾರಿಯಾಗಿದ್ದಾರೆ. ಅದಕ್ಕಾಗಿ ಉಳಿದ ನಾಲ್ವರು ಆರೋಪಿಗಳನ್ನು ಆದಷ್ಟು ಬೇಗನೆ ಬಂಧನ ಮಾಡಲಾಗುವುದು ಎಂದರು.