ವಿಜಯಪುರ : ಮಗಳು ವಿಷ ಕುಡಿದು ಆತ್ಮಹತ್ಯೆ ಹಿನ್ನಲೆ ಲವರ್‌ಗೂ ಅದೇ ವಿಷ ಕುಡಿಸಿ ಹತ್ಯೆಗೈದಿರುವ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಎಸ್ಪಿ ಎಚ್‌ಡಿ ಆನಂದಕುಮಾರ ಮಾಹಿತಿ ನೀಡಿದರು. ವಿಜಯಪುರ ನಗರದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರಪ್ಪ ಹಾಗೂ ಅಜೀತನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಮತ್ತೋರ್ವ 80 ವರ್ಷದ ಆರೋಪಿ ಮಲ್ಲಪ್ಪನ್ನು ವಶಕ್ಕೆ ಪಡೆಯುತ್ತೇವೆ. ಅಪ್ರಾಪ್ತೆ ಹಾಗೂ ಯುವಕ ಮಲ್ಲು ಜಮಖಂಡಿ ಪ್ರೀತಿ ಮಾಡುತ್ತಿದ್ದರು. ಆದ್ರೇ, ಇಬ್ಬರು ಏಕಾಂತದಲ್ಲಿದ್ದಾಗ ಅಪ್ರಾಪ್ತೆಯ ತಂದೆ ಗುರಪ್ಪನ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಅದಕ್ಕಾಗಿ ಅಪ್ರಾಪ್ತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇನ್ನು ಅದೇ ವಿಷ ಲವರ್ ಮಲ್ಲು ಕುಡಿಸಿ ಹತ್ಯೆಗೈದು, ತದನಂತರ ಎರಡು ಶವವನ್ನು ಕೃಷ್ಣಾ ನದಿಗೆ ಎಸೆದು ಪರಾರಿಯಾಗಿದ್ದರು. ಈ ಮರ್ಡರ್ ಕೇಸ್ ಬೀಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದನ್ನು ವರ್ಗಾವಣೆ ಆದಬಳಿಕ ತನಿಖೆ ಮುಂದುವರೆಸಲಾಗುತ್ತದೆ ಎಂದರು.