ವಿಜಯಪುರ : ಸಾರ್ವತ್ರಿಕ ಚುನಾವಣೆ ದಿನಾಂಕವನ್ನು ಈಗಾಗಲೇ ಚುನಾವಣಾ ಆಯೋಗ ಘೋಷಣೆ ಮಾಡಿದ್ದು, ಅದರನ್ವಯ ವಿಜಯಪುರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದ್ದು, ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದೆ ಎಂದು
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸದರು.
ಸುದ್ದಿಗೋಷ್ಠಿಯಲ್ಲಿ ಚುನಾವಣಾ ಸಿದ್ಧತೆ ಹಾಗೂ ಪ್ರಕ್ರಿಯೆಗಳ ಕುರಿತು ಸುದೀರ್ಘವಾದ ವಿವರಣೆ ನೀಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ 2072 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ವಿಧಾನಸಭಾ ಕ್ಷೇತ್ರವಾರು ಅವಲೋಕಿಸುವುದಾದರೆ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ 241, ದೇವರಹಿಪ್ಪರಗಿಯಲ್ಲಿ 252, ಬಸವನ ಬಾಗೇವಾಡಿಯಲ್ಲಿ 232, ಬಬಲೇಶ್ವರದಲ್ಲಿ 243, ವಿಜಯಪುರ ನಗರ 269, ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ 296, ಇಂಡಿಯಲ್ಲಿ 268 ಹಾಗೂ ಸಿಂದಗಿಯಲ್ಲಿ 271 ಸೇರಿದಂತೆ ಒಟ್ಟು 2072 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರು ಸಏರ್ಪಡೆ ಮಾಡುವ ಕುರಿತು ಅರ್ಜಿಗಳನ್ನು ನಾಮಪತ್ರ ಸಲ್ಲಿಸುವ ಕೊನೆ ದಿನಾಂಕದ ಹಿಂದಿನ 10 ದಿನದವರೆಗೂ ಸ್ವೀಕೃತವಾದ ಅರ್ಜಿಗಳನ್ನು ಸಲ್ಲಿಸಲು ಕಾಲಾವಕಾಶವಿದೆ ಎಂದರು. ಮಾದರಿ ನೀತಿ ಸಂಹಿತೆ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ನೋಡೆಲ್ ಅಧಿಕಾರಿಯಾಗಿ ಸಿಇಓ ರಾಹುಲ್ ಶೀಂಧೆ ಅವರನ್ನು ನಿಯೋಜಿಸಲಾಗಿದ್ದು, ವಿಧಾನಸಭಾ ಕ್ಷೇತ್ರವಾರು ನೋಡೆಲ್ ಅಧಿಕಾರಿಗಳನ್ನಾಗಿ ವಿವಿಧ ತಾಲೂಕಾ ಪಂಚಾಯತ ಇಓಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.
1878303 ಮತದಾರರು ಜಿಲ್ಲೆಯ ಒಟ್ಟು ಮತದಾರರ ಕುರಿತಾಗಿಯೂ ವಿವರಣೆ ನೀಡಿದ ಅವರು, ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ 39,851 ಹೊಸ ಮತದಾರರು ಸೇರ್ಪಡೆಯಾಗಿದ್ದು, ಒಟ್ಟು ಮಾರ್ಚ್ ಮಾಸಾಂತ್ಯಕ್ಕೆ 1878303 ಮತದಾರರು ಮತ ಚಲಾಯಿಸುವ ಅರ್ಹತೆ ಪಡೆದುಕೊಂಡಿದ್ದು ಅದರ ಪೈಕಿ 959132 ಪುರುಷ ಮತದಾರರು, 918953 ಮಹಿಳಾ ಮತದಾರರು ಮತ ಚಲಾಯಿಸುವ ಅರ್ಹತೆ ಪಡೆದುಕೊಂಡಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ಅವಲೋಕಿಸುವುದಾದರೆ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ 109149 ಪುರುಷ, 105867 ಮಹಿಳಾ, 20 ಇತರೆ ಸೇರಿದಂತೆ ಒಟ್ಟು 215036 ಮತದಾರರು ಮತಚಲಾಯಿಸುವ ಅರ್ಹತೆ ಪಡೆದುಕೊಂಡಿದ್ದು, ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ 112037 ಪುರುಷ, 105809 ಮಹಿಳಾ, 20 ಇತರೆ ವರ್ಗದ ಮತದಾರರಿದ್ದು ಒಟ್ಟು 217766 ಮತದಾರರು ಮತಚಲಾಯಿಸುವ ಅರ್ಹತೆ ಪಡೆದಿದ್ದಾರೆ. ಬಸವನ ಬಾಗೇವಾಡಿಯಲ್ಲಿ 112037 ಪುರಷ, 11983 ಮಹಿಳಾ 101983, ಇತರೆ 11 ಸೇರಿದಂತೆ ಒಟ್ಟು 208234, ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 110079 ಪುರುಷ, 105670 ಮಹಿಳಾ, 3 ಇತರೆ ಸೇರಿದಂತೆ 215752 ಮತದಾರರು, ವಿಜಯಪುರ ನಗರ ಕ್ಷೇತ್ರದಲ್ಲಿ 137599 ಪುರುಷ, 140056 ಮಹಿಳಾ ಮತದಾರರು, 93 ಇತರೆ ಸೇರಿದಂತೆ ಒಟ್ಟು 277748 ಮತದಾರರು, ನಾಗಠಾಣ ಕ್ಷೇತ್ರದಲ್ಲಿ 137760 ಪುರುಷ, 129993 ಮಹಿಳಾ, 22 ಇತರೆ ಸೇರಿದಂತೆ 267775, ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ 124784 ಪುರುಷ, 116145 ಮಹಿಳಾ, ಇತರೆ 19 ಸೇರಿದಂತೆ ಒಟ್ಟು 24948 ಮತದಾರರು ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ 121484 ಪುರುಷ, 113530 ಮಹಿಳಾ, 30 ಇತರೆ ಸೇರಿದಂತೆ 235044 ಮತದಾರರು ಮತ ಚಲಾಯಿಸುವ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.
167 ಸೆಕ್ಟರ್ ಅಧಿಕಾರಿ – 72 ಪ್ಲಾಯಿಂಗ್ ಸ್ಕಾಡ್
ಜಿಲ್ಲೆಯಾದ್ಯಂತ ಸುಗಮ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ಪ್ರಕ್ರಿಯೆ ನಡೆಸುವ ದೃಷ್ಟಿಯಿಂದ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ಈ ಕಾರ್ಯಕ್ಕಾಗಿ ವಿಧಾನಸಭಾ ಮತಕ್ಷೇತ್ರವಾರು ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯಾದ್ಯಂತ 167 ಸೆಕ್ಟರ್ ಅಧಿಕಾರಿ, 72 ಪ್ಲಾಯಿಂಗ್ ಸ್ಕಾಡ್, 87 ಸ್ಟೆಟಿಕ್ ಸರ್ವಲೈನಸ್ ಟೀಂ, 24 ವಿಡಿಯೋ ಸರ್ವಲೈನಸ್ ಟೀಂ, 8 ವಿಡಿಯೋ ವಿವ್ಹಿಂಗ್ ಟೀಂ ಹಾಗೂ 8 ಅಕೌಂಟಿAಗ್ ಟೀಂಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು.
334 ಮತಗಟ್ಟೆಗಳು ಕ್ರಿಟಿಕಲ್ ಜಿಲ್ಲೆಯಲ್ಲಿ ಒಟ್ಟು 2072 ಮತಗಟ್ಟೆಗಳ ಪೈಕಿ 334 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ 241 ಮತಗಟ್ಟೆಗಳ ಪೈಕಿ 24, ದೇವರಹಿಪ್ಪರಗಿಯ 252 ಮತಗಟ್ಟೆಗಳ ಪೈಕಿ 28, ಬಸವನ ಬಾಗೇವಾಡಿಯ 232 ಮತಗಟ್ಟೆಗಳ ಪೈಕಿ 33, ಬಬಲೇಶ್ವರದ 243 ಮತಗಟ್ಟೆಗಳ ಪೈಕಿ 37, ವಿಜಯಪುರ ನಗರದ 269 ಮತಗಟ್ಟೆಗಳ ಪೈಕಿ 118, ನಾಗಠಾಣದ 296 ಮತಗಟ್ಟೆಗಳ ಪೈಕಿ 38, ಇಂಡಿಯ 268 ಮತಗಟ್ಟೆಗಳ ಪೈಕಿ 32 ಹಾಗೂ ಸಿಂದಗಿಯ 271 ಮತಗಟ್ಟೆಗಳ ಪೈಕಿ 24 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ ಎಂದು ವಿವರಿಸಿದರು.
ಪ್ರಸಕ್ತ ಚುನಾವಣೆಯಲ್ಲಿ ಒಟ್ಟು 3949 ಬ್ಯಾಲೆಟ್ ಯೂನಿಟ್, 2769 ಕಂಟ್ರೋಲ್ ಯೂನಿಟ್, 2999 ವಿವಿಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತಿದ್ದು, ಈಗಾಗಲೇ ಈ ಯಂತ್ರಗಳ ಬಳಕೆಗೆ ಸಂಬAಧಿಸಿAತೆ ಅಧಿಕಾರಿಗಳಿಗೆ ತರಬೇತಿ, ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
80 ವರ್ಷಮೇಲ್ಪಟ್ಟವರಿಗೆ-ವಿಶೇಷಚೇತನರಿಗೆ ಫೋಸ್ಟರ್ ಬ್ಯಾಲೆಟ್ ಚುನಾವಣಾ ಆಯೋಗ ಪ್ರಸ್ತುತ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ವಿಶೇಷ ಚೇತನ ಹಾಗೂ ಕೋವಿಡ್ ಸೋಂಕಿತರಿಗೆ ಫೋಸ್ಟಲ್ ಬ್ಯಾಲೆಟ್ ಮೂಲಕ ಮತದಾನಕ್ಕೆ ಅನುವು ಮಾಡಿಕೊಡಲು ಮುಂದಾಗಿದೆ, ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ನೀಡಿದ ನಿರ್ದೇಶನಗಳನ್ವಯ ಈ ಕಾರ್ಯ ಅನುಷ್ಠಾನಗೊಳಿಸಲಾಗುವುದು, ಪ್ರಸ್ತುತ ಜಿಲ್ಲೆಯಲ್ಲಿ ಇಆರ್‌ಓ ನೆಟ್ ತಂತ್ರಾಶದ ಪ್ರಕಾರ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 38,727 ಮತದಾರರು, 20,295 ವಿಶೇಷಚೇತನ ಮತದಾರರು ಸೇರಿದಂತೆ ಒಟ್ಟು 59,022 ಮತದಾರರುವ ಮಾಹಿತಿ ಇದೆ ಎಂದು ವಿವರಿಸಿದರು.