ಸಭೆಗೆ ಹಾಜರಾಗಾದ ಅಧಿಕಾರಿಗಳ ವಿರುದ್ಧ ತಹಶೀಲ್ದಾರ್ ಗರಂ..!
ಅಧಿಕಾರಿಗಳಿಗಳಿಗೆ ನೋಟೀಸ್ ಜಾರಿ..!
ಇಂಡಿ : ಪ್ರತಿ ಸಭೆಗೂ ಹಾಜರಿರದ ತಾಲೂಕು ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ತಹಶಿಲ್ದಾರ ಬಿ ಎಸ್ ಕಡಕಭಾವಿ ಅವರು ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದರು.
ಬುಧವಾರ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾ ಭವನದಲ್ಲಿ ಆಯೋಜಿಸಿರುವ ಮಹಾತ್ಮ ಗಾಂಧೀಜೀ ಮತ್ತು ಲಾಲ ಬಹೂದ್ದರ ಶಾಸ್ತ್ರಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ಸರಕಾರದ ಮಾರ್ಗ ಸೂಚಿಯಂತೆ ಶಾಲಾ ಕಾಲೇಜು ಹಾಗೂ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಸರಳವಾಗಿ ಯಾವುದೇ ಲೋಪವಿಲ್ಲದಂತೆ ವ್ಯವಸ್ಥಿತವಾಗಿ ಜಯಂತಿ ಆಚರಣೆ ಮಾಡಬೇಕು. ಅದಲ್ಲದೇ ತಾಲೂಕು ಆಡಳಿತದ ಆಶ್ರಯದಲ್ಲಿ ನಡೆಯುವ ಮಹಾತ್ಮ ಗಾಂಧಿಜೀ ಹಾಗೂ ಲಾಲ ಬಹಾದ್ದೂರ ಶಾಸ್ತ್ರಿ ಜಯಂತಿ ಆಚರಣೆಯ ಸಂದರ್ಭಗಳಲ್ಲಿ ಕಡ್ಡಾಯವಾಗಿ ಅಧಿಕಾರಿಗಳು ಭಾಗವಹಿಸಬೇಕು.
ಇನ್ನೂ ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಹಾಗೂ ಕರ್ನಾಟಕ ಪ್ರದೇಶ ಮಾದಿಗರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಹೋಸಮನಿ ಮಾತಾನಾಡಿದ ಅವರು, ಜಯಂತಿ ಸರಳ ಆಚರಣೆ ಎಂದರೆ ಹೇಗೆ..? ಈ ಹಿಂದಿನ ಸಭೆಯಲ್ಲಿ ನಗರ ಸ್ವಚ್ಚತೆ ಮತ್ತು ಮಹಾತ್ಮರ ವೃತ್ತಗಳ ಸ್ವಚ್ಚತೆ ಅಲಂಕಾರ ಮಾಡುವ ಬಗ್ಗೆ ಹೇಳಿದೀರಿ. ಅದು ಈಗ ಎಲ್ಲೂ ಕಾಣಿಸುತ್ತಿಲ್ಲ ಎಂದು ಆರೋಪಿಸಿದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ತಹಶಿಲ್ದಾರ ಬಿ ಎಸ್ ಕಡಕಬಾವಿ ಅವರು, ಈ ಬಾರಿ ಅದರ ಬಗ್ಗೆ ವಿಶೇಷ ಕಾಳಜಿ ವಹಿಸಿ ಎಂದು ಪುರಸಭೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನೂ ಒಟ್ಟು 36 ತಾಲೂಕು ಅಧಿಕಾರಿಗಳಿದ್ದು, ಈ ಸಭೆಯಲ್ಲಿ ಇಬ್ಬರು ಹಾಜರಿದ್ದು ಉಳಿದ ಇಲಾಖೆ ತಾಲೂಕು ಅಧಿಕಾರಿಗಳು ಗೈರು ಹಾಜರಿದ್ದು ಅವರ ಪ್ರತಿನಿಧಿಯಾಗಿ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್, ತೋಟಗಾರಿಕೆ, ಕೃಷಿ, ಹೆಸ್ಕಾಂ, ಸಬ್ ರಿಜಿಸ್ಟರ್, ಖಜಾನೆ, ಪಶು ಇಲಾಖೆ, ಅಲ್ಪ ಸಂಖ್ಯಾತ ಬಿ ಸಿ ಎಮ್, ಕೆ ಅಸ್ ಆರ್ ಟಿ ಸಿ , ಕ್ರೀಡಾ ಹಾಗೂ ಅಗ್ಮಿ ಶಾಮಕ ಇಲಾಖೆ ತಾಲೂಕು ಅಧಿಕಾರಿಗಳು ಗೈರು ಹಾಜರಾಗಿದ್ದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಕ್ಷೇತ್ರ ಸಮಯನ್ವ ಅಧಿಕಾರಿ ನಡಗಡ್ಡಿ, ಪುರಸಭೆ ಆರೋಗ್ಯ ಕಿರಿಯ ಸಹಾಯಕ ಸೋಮನಾಯಕ, ಬಿಸಿಎಮ್ ನಾಗೇಶ ದುದಗಿ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಹಾಗೂ ಸಾಮಾಜಿಕ ಹೋರಾಟಗಾರ ವಿಕಾಸ ಗುಡಮಿ ಉಪಸ್ಥಿತರಿದ್ದರು.