ವಿಜಯಪುರ : ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಗಳಗಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಕುಂಬಾರ ಉಪಾಧ್ಯಕ್ಷರಾಗಿ ಸುರೇಖಾ ಬಾರಾಣಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ಗ್ರಾಪಂ ಕಾರ್ಯಾಲಯದಲ್ಲಿ ನಡೆದ ಚುನಾವಣೆ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧ ಆಯ್ಕೆಯಾದರು. ಜುಲೈ 4ರಂದು ಹಣಮಂತ ಗುಡ್ಲ ತಮ್ಮ ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ರಾಜಿನಾಮೆ ನೀಡಿದ್ದರಿಂದ ತೆರವುಗೊಂಡ ಸ್ಥಾನಕ್ಕೆ ಇಂದು ಚುನಾವಣೆ ಪ್ರಕ್ರಿಯೆ ನಡೆದಿತ್ತು.
ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯತಿ ಅಧಿಕಾರಿ ಇ. ಓ ಸುನೀಲ ಮದ್ದಿನ, ಪಿಡಿಓ ಸಂಗೀತ ಬಗಲಿ ಆಯ್ಕೆ ಮಾಡಿ ಘೋಷಿಸಿದರು. ಈ ಸಂದರ್ಭದಲ್ಲಿ ಚಿಮ್ಮಾಜಿ ಥೋರಾತ, ಸುನಿಲ ದಶವಂತ,ಅಜಿತ ಕದಮ, ಜಯಶ್ರೀ ಹೊನ್ನಕೋರೆ, ಆರತಿ ಶಿವಗದ್ದಗಿ , ಸುಭಾಷ್ ಥೊರಾತ, ಅಣ್ಣಪ್ಪ ಅಹಿರಸಂಗ , ಫಾರೂಕ ಅರಾಬ, ಗುರು ಕುಂಬಾರ ಜಕ್ಕಪ್ಪ ಪೂಜಾರಿ ಉಮೇಶ ಬಳಬಟ್ಟಿ, ತುಕಾರಾಮ ಪವಾರ , ಸಂತೋಷ ಹೊಸಮನಿ ಉಪಸ್ಥಿತರಿದ್ದರು.