ಅಧ್ಯಕ್ಷನ ಖೊಟ್ಟಿ ಸಹಿ, ಅಧ್ಯಕ್ಷನಿಂದ ತನಿಖೆಗೆ ಒತ್ತಾಯ..!
ಇಂಡಿ : ಫಲಾನುಭವಿಗಳ ಪಟ್ಟಿ ತಡೆಯುವಂತೆ ಗ್ರಾಮ ಪಂಚಾಯತಿ ಅಧ್ಯಕ್ಷರೊಬ್ಬರು ಒತ್ತಾಯಿಸಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮ ಪಂಚಾಯತಿಯಲ್ಲಿ ಬಸವ ವಸತಿ, ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ತಡವಲಗಾ ಗ್ರಾಮ ಪಂಚಾಯತಿಗೆ 50 ಮನೆಯ ಗುರಿ ನೀಡಲಾಗಿದೆ. ಆದ್ರೇ, ಗ್ರಾಮ ಪಂಚಾಯತಿ ಸದಸ್ಯ ರಾಮನಗೌಡ ಪಾಟೀಲ ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ ಹೊಸಮನಿ ಅವರ ಖೊಟ್ಟಿ ಸಹಿ ಮಾಡಿದ್ದಾರೆ. ಅದಕ್ಕಾಗಿ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ,ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅಧ್ಯಕ್ಷ ಹೊಸಮನಿ ಮನವಿ ಸಲ್ಲಿಸಿದ್ದಾರೆ.