ಗ್ರಂಥಾಲಯ ಸಹಾಯಕರ ತಾತ್ಕಾಲಿಕ ಹುದ್ದೆಯ ಸಂದರ್ಶನ ಮುಂದೂಡಿಕೆ
ವಿಜಯಪುರ, ಡಿಸೆಂಬರ್ : ಕೃಷಿ ಮಹಾವಿದ್ಯಾಲಯ ವಿಜಯಪುರದಲ್ಲಿ ಖಾಲಿ ಇರುವ 2 ಗ್ರಂಥಾಲಯ ಸಹಾಯಕರ ತಾತ್ಕಾಲಿಕ ಹುದ್ದೆಗೆ ಡಿಸೆಂಬರ್ 22ರಂದು ನಡೆಯಬೇಕಾಗಿದ್ದ ಸಂದರ್ಶನವನ್ನು ಡಿಸೆಂಬರ್ 24ರಂದು ಬೆಳಿಗ್ಗೆ 11 ಗಂಟೆಗೆ ವಿಜಯಪುರ ಕೃಷಿ ಮಹಾವಿದ್ಯಾಲಯದ ಸಂದರ್ಶನ ಕೊಠಡಿಯಲ್ಲಿ ನಡೆಯಲಿದೆ. ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಪಡೆದ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬಹುದಾಗಿದೆ ಎಂದು ವಿಜಯಪುರ ಕೃಷಿ ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.


















