ಅಂಚೆ ಇಲಾಖೆ ಭ್ರಷ್ಟಾಚಾರರಹಿತ ಅನನ್ಯ ಸೇವೆ : ಅಧೀಕ್ಷಕ ಎಂ ಕುಮಾರಸ್ವಾಮಿ
ಇಂಡಿ: ಅಂಚೆ ಇಲಾಖೆ ಹಲವು ವರ್ಷಗಳಿಂದ ಕೇವಲ ಸಂವಹನ ಹಾಗೂ ಪತ್ರವ್ಯವಹಾರಗಳ ನಿರ್ವಹಣೆಗೆ ಸೀಮಿತವಾಗಿತ್ತು. ಆದರೆ ಇಂದು ಬ್ಯಾಂಕ್‌ಗಳAತೆ ಭ್ರಷ್ಟಾಚಾರರಹಿತ, ಸಾರ್ವಜನಿಕ ಆರ್ಥಿಕತೆ ವ್ಯವಹಾರಗಳ, ಜನಸ್ನೇಹಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದೆ, ಎಂದು ವಿಜಯಪೂರ ಜಿಲ್ಲೆಯ ಅಂಚೆ ಅಧೀಕ್ಷಕ ಎಂ ಕುಮಾರಸ್ವಾಮಿ ಹೇಳಿದರು.
ತಾಲೂಕೀನ ತಡವಲಗಾ ಗ್ರಾಮದ ಅಂಚೆ ಕಛೇರಿ ಆವರಣದಲ್ಲಿ ನಡೆದ ತಡವಲಗಾ ಉಪ ಅಂಚೆ ಕಛೇರಿಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಡವಲಗಾ ಗ್ರಾಮದಲ್ಲಿ ಉಪ ಅಂಚೆ ಕಛೇರಿಯಾಗಿ ಒಂದು ವರ್ಷವಾಗಿದೆ. ಲಿಂಗದಳ್ಳಿ, ನಿಂಬಾಳ ಹಂಜರಗಿ, ಹಿರೇರೂಗಿ, ಗುಂಡು ತಂಡಾ, ಹೀಗೆ ಆರು ಬ್ರಾö್ಯಂಚ್ ಅಂಚೆ ಕಚೇರಿಗಳು ಈ ಗ್ರಾಮದ ಉಪ ಅಂಚೆ ಕಛೇರಿಯ ವ್ಯಾಪ್ತಿಯಲ್ಲಿ ಬರುತ್ತವೆ. ಇದರಿಂದ ಸಾರ್ವಜನಿಕರು ಕಛೇರಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಅಂಚೆ ಕಛೇರಿಯ ಉಪ ಅಧೀಕ್ಷಕರಾದ ಬಿ.ಎಸ್. ದಾಸರ ಮಾತನಾಡಿ, ಭಾರತ ಸರಕಾರ ಬಡವರ ಹಾಗೂ ಕೂಲಿ ಕಾರ್ಮಿಕರಿಗೆ ಮತ್ತು ರೈತರಿಗೆ ಪ್ರಧಾನ ಮಂತ್ರಿ ಜೀವ ವಿಮಾ ಯೋಜನೆ, ಹೇಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ದಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದರು.
ಇAಡಿಯ ಅಂಚೆ ನಿರಿಕ್ಷಕರಾದ ಮಹಾಂತೇಶ ಕುರ್ಲೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ತಡವಲಗಾ ಉಪ ಕಛೇರಿ ಪ್ರಾರಂಭವಾಗಿ ಒಂದು ವರ್ಷವಾಯಿತು. ಭಾರತೀಯ ಅಂಚೆ ಇಲಾಖೆ ಇಂದು ಸರ್ಕಾರದ ಸಾಕಷ್ಟು ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿದೆ. ಜನತೆ ಸಾಕಷ್ಟು ಸಹಕಾರ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪೋಸ್ಟ್ ಮಾಸ್ಟರ್ ಎಮ್ ಎಚ್ ನಧಾಪ್, ಶಿವಾನಂದ ಪತಂಗಿ, ಮಲ್ಲಿಕಾರ್ಜುನ ಗುಡ್ಲಾಮನಿ, ಚೇತನ, ವೈಷ್ಣವಿ ಕನಸೆ, ಮಲ್ಲಿಕಾರ್ಜುನ ಪತಂಗೆ, ಬಸವರಾಜ ಮೇತ್ರಿ, ಸುಭಾಸ ತೋರತ, ಖಂಡೆರಾವ ಬಂಡಗಾರ, ಇಂಡಿ ಹಾಗೂ ಹೊರ್ತಿ ಸಿಬ್ಬಂದಿ ಇದ್ದರು.
ಇಂಡಿ: ತಡವಲಗಾ ಗ್ರಾಮದ ಅಂಚೆ ಕಛೇರಿ ಆವರಣದಲ್ಲಿ ನಡೆದ ತಡವಲಗಾ ಉಪ ಅಂಚೆ ಕಛೇರಿಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ವಿಜಯಪೂರ ಜಿಲ್ಲೆಯ ಅಂಚೆ ಅಧೀಕ್ಷಕ ಎಂ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಡವಲಗಾ ಉಪ ಅಂಚೆ ಕಛೇರಿಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿಜಯಪೂರ ಜಿಲ್ಲೆಯ ಅಂಚೆ ಅಧೀಕ್ಷಕ ಎಂ ಕುಮಾರಸ್ವಾಮಿ ಸಹಿತ ಸಿಬ್ಬಂದಿಗಳು.