ವಿಜಯಪುರ : ನಾಟಕದ ವೇಳೆ ಪೋಸ್ಟ್ ಮ್ಯಾನ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ. ಡಾನ್ಸ್ ಮಾಡುವಾಗಲೇ
ಶರಣು ಬಾಗಲಕೋಟೆ (24) ಪೋಸ್ಟ್ ಮ್ಯಾನ್‌ಗೆ ಹೃದಯಾಘಾತದಿಂದ ಅಸುನೀಗಿದ್ದಾನೆ. ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ನಾಟಕ ಪ್ರದರ್ಶನ ವೇಳೆ ಡಾನ್ಸ್ ಮಾಡಲು ಶರಣು ವೇದಿಕೆ ಏರಿದಾಗ ಈ ದುರ್ಘಟನೆ ಸಂಭವಿಸಿದೆ. ಇತ್ತೀಚೆಗೆ ಪೋಸ್ಟ್ ಮ್ಯಾನ್ ಆಗಿ ಶರಣು ನೇಮಕಗೊಂಡಿದ್ದರು.