ಬಬಲೇಶ್ವರ : ಕಾರಹುಣ್ಣಿಮೆಯಲ್ಲಿ ಎತ್ತಿನ ಮೈಮೇಲೆ ದಿವಂಗತ ಪುನೀತ್ ರಾಜಕುಮಾರ ಭಾವಚಿತ್ರ ರಾರಾಜಿಸಿದೆ. ಕಾರಹುಣ್ಣಿವೆ ಪ್ರಯುಕ್ತ ಎತ್ತಿನ ಮೈಮೇಲೆ ಅಪ್ಪುವಿನ ಭಾವಚಿತ್ರವನ್ನು ಯಮನಪ್ಪ ಕುಂಬಾರ ತೆಗೆದಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಶಿರಬೂರ ಗ್ರಾಮದಲ್ಲಿ ಎತ್ತಿನ ಮೈಮೇಲೆ ಅಪ್ಪುವಿನ ಭಾವಚಿತ್ರ ಅನಾವರಣಗೊಂಡಿದೆ. ಎಲ್ಲರ ಮನದಲ್ಲಿ ನೆಲೆಸಿರುವ ಪುನೀತ್ ರಾಜಕುಮಾರ ಅವರ ಮೇಲಿನ ಅಭಿಮಾನ ಶಿರಬೂರ ನಲ್ಲಿ ನಡೆದ ಕಾರಹುಣ್ಣಿಮೆ ಸಾಕ್ಷಿಯಾಗಿದೆ.